ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಟೀಸರ್ ಭಾನುವಾರ ರಾಮಜನ್ಮಭೂಮಿ ಅಯೋಧ್ಯೆಯ ಸರಾಯು ನದಿ ಗಿ ದಡದಲ್ಲಿಅದ್ದೂರಿಯಾ ಬಿಡುಗಡೆಯಾಗಿದ್ದು ಅಭಿಮಾನಿಗಳ ನಿರಾಸೆಯನ್ನು ಹುಸಿಯಾಗಿಸಿದೆ.
ಪೌರಾಣಿಕ ಕಥಾಹಂದರವುಳ್ಳ ಸಿನಿಮಾವನ್ನು ಸಂಪೂರ್ಣವಾಗಿ ಗ್ರಾಫಿಕ್ಸ್ನಲ್ಲಿ ತೋರಿಸಲಾಗಿದ್ದು ಗ್ರಾಫಿಕ್ಸ್ ಗುಣಪಟ್ಟದ ಕುರಿತು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಮಾಡಿರುವ ಗ್ರಾಫಿಕ್ಸ್ಗಿಂತ ಟಾಮ್ & ಜೆರ್ರಿ ಹಾಗೂ ಚೋಟಾ ಭೀಮ್ ಚೆನ್ನಾಗಿರುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀರಾಮನಾಗಿ ಪ್ರಭಾಸ್ ಅಷ್ಟೊಂದು ಚೆನ್ನಾಗಿ ಕಾಣುತ್ತಿಲ್ಲ ರಾವಣನಾಗಿ ಸೈಫ್ ಅಲಿ ಖಾನ್ ತುಂಬಾ ಚೆನ್ನಾಗಿ ಕಾಣುತ್ತಾರೆ ಎಂದು ಹೇಳಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಚೆನ್ನಾಗಿ ಕಂಡರೂ ಹಿನ್ನೆಲೆ ದೃಶ್ಯದಲ್ಲಿ ಸೊಬಗಿಲ್ಲದ ಕಾರಣ ಪ್ರಭಾಸ್ ಅಭಿಮಾನಿಗಳಲ್ಲಿ ಟೀಸರ್ ನಿರಾಸೆ ಮೂಡಿಸಿದೆ.

ಆದಿಪುರುಚ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ತಾನಾಜಿ ಚಿತ್ರ ನಿರ್ದೇಶಿಸಿದ್ದ ಓಂ ರಾವತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸುಮಾರು 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವನ್ನ ಟಿ-ಸೀರಿಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
2023ರ ಜನವರಿ 12ರಂದು ವಿಶ್ವದಾದ್ಯಂತ ಚಿತ್ರ ತೆರೆ ಕಾಣುತ್ತಿದೆ.