ನಿರ್ದೇಶಕ ತರುಣ್ ಸುದೀಪ್ ಮತ್ತು ಹೀರೋಯಿನ್ ಸೋನಲ್ ಇವರ ಮದುವೆ ನಿಶ್ಚಯವಾಗಿದ್ದು, ಎಲ್ಲಾ ಜೋಡಿಗಳಂತೆಯೇ ಈ ಸ್ಟಾರ್ ಕಪಲ್ ಕೂಡ ಮದುವೆಗೂ ಮುನ್ನ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದಾರೆ . ಆ ಮೂಲಕ ತಮ್ಮ ಜೀವನದ ಹೊಸ ಆರಂಭಕ್ಕೆ ತರುಣ್ ಸುಧೀರ್ ಕನ್ನಡಿಗರ ಆಶೀರ್ವಾದ ಬೇಡಿದ್ದಾರೆ.
ಖಾಲಿ ಚಿತ್ರಮಂದಿರದಲ್ಲಿ ಹೀರೋ ಹೀರೋಯಿನ್ ನಂತೆ ತರುಣ್ ಸುಧೀರ್ ಮತ್ತು ಸೋನಾಲ್ ರೋಮ್ಯಾಂಟಿಕ್ ಹಾಡಿಗೆ ಜೊತೆಗೂಡಿ ಹೆಜ್ಜೆ ಹಾಕುವುದರ ಮೂಲಕ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಈ ವಿಡಿಯೋ ಅದ್ಭುತವಾಗಿ ಮೂಡಿ ಬಂದಿದ್ದು ತರುಣ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೆ ಆಗಸ್ಟ್ 11ರಂದು ನಿರ್ದೇಶಕ ತರುಣ್ ಸುಧೀರ್ ಮತ್ತು ಸ್ಯಾಂಡಲ್ವುಡ್ ನಾಯಕ ನಟಿ ಸೋನಲ್ ಅದ್ದೂರಿ ವಿವಾಹ ಜರುಗಲಿದ್ದು ,ಈ ಪ್ರೇವೆಡ್ಡಿಂಗ್ ಫೋಟೋ ಶೂಟ್ ಮೂಲಕ ಸ್ಟಾರ್ ಜೋಡಿ ಇದೀಗ ಸದ್ದು ಮಾಡಿದ್ದು ಸಮಸ್ತ ಕನ್ನಡಿಗರ ಆಶೀರ್ವಾದ ಬೇಡಿದ್ದಾರೆ.