ಭಾರತ ಹಾಕಿ ತಂಡದ (Indian hockey team)ಸಾಮಾಜಿಕ ಜಾಲತಾಣ (Social network)ಎಕ್ಸ್ ಖಾತೆಯನ್ನು (account)ದುಷ್ಕರ್ಮಿಗಳು ಹ್ಯಾಕ್ ಮಾಡಿದ ಬೆನ್ನಲ್ಲೇ ಇದೀಗ ಸುಪ್ರೀಂ ಕೋರ್ಟ್ ನ (Supreme Court)ಯೂಟ್ಯೂಬ್ ಚಾನೆಲ್ ಅನ್ನು ಹ್ಯಾಕ್ ಮಾಡಿ ರಿಪ್ಪನ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ XRP ಎಂಬ ಕ್ರಿಪ್ಟೋಕರೆನ್ಸಿಯ (Cryptocurrency)ಸೇರಿದಂತೆ ಇತರ ಪ್ರಮೋಶನ್ (Promotion)ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ.
ಸಾಂವಿಧಾನಿಕ (Constitutional)ಪೀಠಗಳ ಮುಂದೆ ಪಟ್ಟಿ ಮಾಡಲಾದ ಪ್ರಕರಣಗಳ ವಿಚಾರಣೆಗಳು ಮತ್ತು ಸಾರ್ವಜನಿಕ ಹಿತಾಸಕ್ತಿಯ ಇತರ ವಿಷಯಗಳು ಸೇರಿದಂತೆ ಮಹತ್ವದ ಪ್ರಕರಣಗಳನ್ನು ಲೈವ್ ಸ್ಟ್ರೀಮ್ (Live stream the cases)ಮಾಡಲು ಉನ್ನತ ನ್ಯಾಯಾಲಯವು ಯೂಟ್ಯೂಬ್ ಅನ್ನು ಬಳಸುತ್ತಿದೆ.
ಆದರೆ ಖದೀಮರು ಕ್ರಿಪ್ಟೋಕರೆನ್ಸಿ ಉತ್ತೇಜಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿದ್ದಾರೆ. ಬಳಿಕ ಅಮೆರಿಕದ ಮೂಲದ ರಿಪ್ಪಲ್ ಲ್ಯಾಬ್ಸ್ ಜಾಹೀರಾತು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ.
ಹ್ಯಾಕ್ ಮಾಡಿದ ವೇಳೆ “ಬ್ರಾಡ್ ಗಾರ್ಲಿಂಗ್‌ಹೌಸ್: SEC ನ $2 ಬಿಲಿಯನ್ ದಂಡಕ್ಕೆ ಏರಿಳಿತವು ಪ್ರತಿಕ್ರಿಯಿಸುತ್ತದೆ XRP PRICE PREDICTION” ಎಂಬ ಸಾಲನ್ನು ಸರ್ವೋಚ್ಛ ನ್ಯಾಯಾಲಯದ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರ ಮಾಡಲಾಗಿದೆ.
ಹ್ಯಾಕರ್ಸ್ ತಂಡ ಈ ಕೃತ್ಯ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ರಿಪ್ಪಲ್ ಲ್ಯಾಬ್ಸ್ ವಿಡಿಯೋಗಳನ್ನು ಎಲ್ಲೆಡೆ ಪೋಸ್ಟ್ ಮಾಡುತ್ತಿರುವ ಕುರಿತು ಇತ್ತೀಚೆಗೆ ಯೂಟ್ಯೂಬ್ ವಿರುದ್ಧವೇ ಕಾನೂನು ಹೋರಾಟ ಆರಂಭಿಸಿದೆ.