ನಟಿ ರಣ್ಯ ರಾವ್ (Actress ranya rao) ಸದ್ಯ DRI ಕಸ್ಟಡಿಯಲ್ಲಿದ್ದು, ಈ ವೇಳೆ ಅಧಿಕಾರಿಗಳು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಗೋಲ್ಡ್ ಸ್ಮಗ್ಲಿಂಗ್ (Gold smuggling) ಕೇಸ್‌ಗೆ ಸಂಬಂಧಿಸಿದಂತೆ ಡಿಆರ್‌ಐ ವಿಚಾರಣೆ ವೇಳೆ ಆರೋಪಿ ರನ್ಯಾ ರಾವ್ ಸ್ಫೋಟಕ ಮಾಹಿತಿ ರಿವೀಲ್ ಮಾಡಿದ್ದಾಳೆ ಎನ್ನಲಾಗಿದೆ.

ನಟಿ ರನ್ಯಾ ರಾವ್ ಹೇಳಿಕಿಂಡಿರುವಂತೆ, ತನ್ನನ್ನು Blackmail ಮಾಡಿ ನನ್ನ ಬಳಿ ಸ್ಮಗ್ಲಿಂಗ್ ಮಾಡಿಸಿದ್ದಾರೆ ಎಂದು ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ತಮಿಳುನಾಡಿನ ಏರ್‌ಪೋರ್ಟ್‌ನಲ್ಲೂ ಇದೇ ರೀತಿ ಕೇಸ್ ನಡೆದಿತ್ತು.

ದುಬೈನಿಂದ (Dubai) ಬಂದಿದ್ದ ಟೆಕ್ಕಿಗೆ ಸ್ನೇಹಿತೆ ಬ್ಲಾಕ್ ಮೇಲ್ ಮಾಡಿ 12 ಕೆ.ಜಿ ಚಿನ್ನ ಸ್ಮಗ್ಲಿಂಗ್ ಮಾಡಿಸಿದ್ದಳು. ಸದ್ಯ ಇದೇ ರೀತಿ ರನ್ಯಾ ರಾವ್ ಬ್ಲಾಕ್‌ಮೇಲ್ ಹೇಳಿಕೆ ನೀಡಿದ್ದು, ರನ್ಯಾ ಹೇಳಿಕೆ ಸತ್ಯಾನ ಅಥವಾ ಸುಳ್ಳಾ ಅಂತ ಡಿಆರ್‌ಐ ಅಧಿಕಾರಿಗಳು ಪರಿಶೀಲನೆ ಮಾಡ್ತಿದ್ದಾರೆ.