ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಇರುವ ರಾಧಿಕಾ, ಆಗಾಗ ತಮ್ಮ ಫ್ಯಾಮಿಲಿ ಜೊತೆಗಿನ ಮುದ್ದಾದ ಫೋಟೋಗಳನ್ನ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಇದೀಗ ಮಿಸೆಸ್ ಯಶ್ ಶೇರ್ ಮಾಡಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ರಾಧಿಕಾ ಪಂಡಿತ್ ತಾವು ವಿದೇಶಕ್ಕೆ ತೆರಳಿದ್ದ ವೇಳೆ ತೆಗೆಸಿಕೊಂಡಿದ್ದ ಫೋಟೋವೊಂದನ್ನ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದು, ತಮ್ಮದೇ ಸ್ಟೈಲ್‌ನಲ್ಲಿ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ʻನಿಮ್ಮ ಇರುವಿಕೆಗೆ ಬೆಲೆ ಕೊಡುವ ಜನರನ್ನು ಬಿಟ್ಟುಕೊಡಬೇಡಿʼ ಅಂತ ರಾಧಿಕಾ ಬರೆದುಕೊಂಡಿದ್ದು, ಜೊತೆಗೆ ʻಫೋಟೋ ಯಾರು ತೆಗೆದಿದ್ದು ಅಂತ ಕೇಳುವ ಎಲ್ಲರಿಗೂ ಇದು ಉತ್ತರ. ನನಗೆ ವೈಯಕ್ತಿಕವಾಗಿ ಇರೋದು ಒಬ್ಬನೇ ಫೋಟೋಗ್ರಾಫರ್ ಎಂದಿದ್ದಾರೆ.

ಈ ಮೂಲಕ ತಮ್ಮ ಫೋಟೋಗ್ರಾಫರ್ ಯಶ್ ಅಂತ ರಾಧಿಕಾ ಪಂಡಿತ್ ರಿವೀಲ್ ಮಾಡಿದ್ದಾರೆ.
