ಅಪ್ಪ ಹಿರಿಯ ಪೊಲೀಸ್ ಅಧಿಕಾರಿ, ಮಗಳು ಸಿನಿಮಾ ನಟಿ . ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದಳು, ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಈ ಖತರ್ನಾಕ್ ನಟಿಯನ್ನು ಈಗ ಜೈಲಿಗೆ ಅಟ್ಟಿದ್ದಾರೆ. ಈಕೆಯ ಬಂಗಾರದ ಹಿಂದಿನ ಕಥೆಗಳನ್ನ ಭೇದಿಸಲು ಅಧಿಕಾರಿಗಳು ಆಕ್ಷನ್ ಕಟ್ ಹೇಳೊಕ್ಕೆ ತಯಾರಿ ಮಾಡುತ್ತಿರುವ ಬೆನ್ನಲ್ಲೆ ಸ್ಪೋಟಕ ಮಾಹಿತಿವೊಂದು ಬಹಿರಂಗವಾಗಿದೆ.

ಏರ್‍ಪೋರ್ಟ್‍ನಲ್ಲಿ ಫ್ಲೈಟ್ ಇಳಿದ ತಕ್ಷಣ ರನ್ಯಾಳನ್ನ ವಶಕ್ಕೆ ಪಡೆದ ಡಿಆರ್‍ಐ ಅಧಿಕಾರಿಗಳು ಆಕೆಯ ಬಳಿಯಿದ್ದ ಸುಮಾರು 12 ಕೋಟಿಗೂ ಅಧಿಕ ಮೌಲ್ಯದ 14.2 ಕೆಜಿ ಚಿನ್ನಾಭರಣವನ್ನು ವಶ ಪಡಿಸಿಕೊಂಡ್ರು. ಈ ವೇಳೆ ಯಾವುದಕ್ಕೂ ಕ್ಯಾರೆ ಎನ್ನದ ರನ್ಯಾ ಎಂದಿನಂತೆ ನಾನು ಐಪಿಎಸ್ ಅಧಿಕಾರಿಯ ಮಲಮಗಳು ನನ್ನನ್ನು ರಿಸಿವ್ ಮಾಡಲು ಪೊಲೀಸರು ಬರುತ್ತಿದ್ದಾರೆ ಅಂತಾ ಖಡಕ್ ಆಗಿಯೇ ಡಿಆರ್‍ಐ ಅಧಿಕಾರಿಗಳಿಗೆ ಹೇಳಿದ್ದಾಳೆ. ಆದ್ರೆ ರನ್ಯಾಳ ಮಾತಿಗೆ ಸೊಪ್ಪು ಹಾಕದ ಡಿಆರ್‍ಐ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದು ಬಂಧನ ಮಾಡಿದ್ದಾರೆ.
ಗೊಲ್ಡ್ ಬೆಡಗಿ ಬಂಧನ ಕಹಾನಿ..!
ಇನ್ನು ರನ್ಯಾಳ ಬಂಧನ ಬಳಿಕ ಆಕೆಯ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಲ್ಯಾವೆಲ್ಲಿ ರಸ್ತೆಯಲ್ಲಿರುವ ನಂದವಾಣಿ ಮ್ಯಾನ್ಷನ್ ಹೌಸ್ ನ ಫ್ಲ್ಯಾಟ್ ನಲ್ಲಿ ಕೋಟಿ ಕೋಟಿ ನಗದು ಹಾಗು ಚಿನ್ನಾಭರಣದ ಜೊತೆ ಮಹತ್ವದ ದಾಖಲೆಗಳನ್ನ ವಶಪಡಿಕೊಂಡಿದ್ದಾರೆ. ಇತ್ತ ಆರೋಪಿ ರನ್ಯಾ ಬಂಧನ ಮಾಡಿದ ಡಿಆರ್‍ಐ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಪರಪ್ಪನ ಅಗ್ರಹಾರದ ದಾರಿ ತೋರಿಸಿದ್ದಾರೆ.
ಗೊಲ್ಡ್ ಗರ್ಲ್ ನಟಿ ರನ್ಯಾ ಹಿನ್ನಲೆ..

ಇನ್ನೂ ಹೈಫೈ ಲೈಫ್ ಸ್ಟೈಲ್ ಜೊತೆಗೆ ಸಿನಿಮಾದಲ್ಲಿ ಮಿಂಚಿದ ನಟಿ ಕಮ್ ಆರೋಪಿತೆ ರನ್ಯಾ ಹಿನ್ನಲ್ಲೆ ಕೇಳಿದ್ರೆ ಶಾಕ್ ಆಗ್ತೀರಾ.. ಆರೋಪಿತೆ ರನ್ಯಾ ಮೂಲತಃ ಚಿಕ್ಕಮಗಳೂರಿನವರು ಎನ್ನಲಾಗುತ್ತಿದೆ. ರನ್ಯಾ ಪೋಷಕರು ಕೌಟುಂಬಿಕ ಕಲಹದ ಹಿನ್ನಲೆ ದೂರವಾಗಿದ್ದಾರೆ ಎನ್ನಲಾಗಿದೆ. ದೂರವಾದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಜೊತೆ ರನ್ಯಾ ತಾಯಿ ವಿವಾಹ ಮಾಡಿಕೊಂಡು ಆರೋಪಿತೆ ರನ್ಯಾಳ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ರು. ಕಳೆದ ಮೂರು ತಿಂಗಳ ಹಿಂದೆ ರನ್ಯಾಗೆ ಜಿತಿನ್ ಹುಕ್ಕೇರಿ (Jithin Hukkeri) ಎಂಬುವರ ಜೊತೆ ವಿವಾಹವಾಗಿದೆ. ಮದುವೆಯ ಬಳಿಕ ಡಾಲರ್ಸ್ ಕಾಲೋನಿಯಿಂದ (Dollors Colony) ನಗರದ ಪ್ರತಿಷ್ಠಿತ ಏರಿಯಾವಾದ ಲ್ಯಾವೆಲ್ಲಿ ರಸ್ತೆಯಲ್ಲಿರುವ ಖಾಸಗಿ ಅಪಾರ್ಟ್ಮೆಂಟ್‍ಗೆ ಆರೋಪಿತೆ ರನ್ಯಾ ಮತ್ತು ಪತಿ ಜಿತಿನ್ ಹುಕ್ಕೇರಿ ಶಿಫ್ಟ್ ಆಗಿದ್ರಂತೆ.
ಚಿನ್ನದ ಹುಡುಗಿ ರನ್ಯಾಳ ಪ್ರಕರಣಕ್ಕೆ ಸ್ಪೋಟಕ ತಿರುವು..!?

ಆರೋಪಿತೆ ನಟಿ ರನ್ಯಾ ಬಂಧನದ ಬೆನ್ನಲ್ಲೆ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಆರೋಪಿತೆ ಕಳೆದ ಒಂದು ವರ್ಷದಲ್ಲಿ ಸುಮಾರು 40ಕ್ಕೂ ಅಧಿಕ ಬಾರಿ ದುಬೈಗೆ ಟ್ರಾವೆಲ್ ಮಾಡಿರುವ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಧಿಕಾರಿಗಳು ಮಾಹಿತಿ ಕಲೆ ಹಾಕಿದ್ರಂತೆ. ಅಲ್ಲದೆ ಕಳೆದ 15 ದಿನಗಳ ಹಿಂದೆ ನಾಲ್ಕು ಬಾರಿ ದುಬೈಗೆ ಟ್ರಾವೆಲ್ ಮಾಡಿದ್ದ ಬಗ್ಗೆ ನಜರ್ ಇಟ್ಟಿದ್ದ ಡಿಆರ್‍ಐ ಅಧಿಕಾರಿಗಳು ನಿನ್ನೆ ಬಂಧನ ಮಾಡಿದ್ದಾರೆ. ಇನ್ನು ದುಬೈ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳಿಗೆ ಟ್ರಾವೆಲ್ ಮಾಡುವ ಆರೋಪಿತೆ ರನ್ಯಾಳಿಗೆ ಪ್ರಸಿದ್ದ ಬಹುದೊಡ್ಡ ಡೆವಲಪ್ಪರ್ ಖಾಸಗಿ ಕಂಪನಿಯೊಂದು ಬೆನ್ನಲುಬಾಗಿ ನಿಂತಿದೆ ಎನ್ನಲಾಗುತ್ತಿದೆ. ಆ ಖಾಸಗಿ ಕಂಪನಿಯು ದುಬೈ ಸೇರಿದಂತೆ ಹಲವು ವಿದೇಶಗಳಲ್ಲಿ ತಮ್ಮ ಶಾಕೆಗಳನ್ನ ಹೊಂದಿದ್ದು, ಈ ಬಹುದೊಡ್ಡ ಕಂಪನಿಯ ಮುಖ್ಯಸ್ಥನ ಜೊತೆ ಆರೋಪಿತೆಗೆ ಒಡನಾಟವಿದೆಯಂತೆ. ಹೀಗಾಗಿಯೇ ಪ್ರತಿಭಾರಿ ಆರೋಪಿತೆ ರನ್ಯಾ ವಿದೇಶಗಳಿಗೆ ತೆರಳಿದಾಗ ಆಕೆಯ ಬೇಕು ಬೇಡಿಕೆಗಳನ್ನ ಈಡೇರಿಸುವ ಮೂಲಕ ಪರೋಕ್ಷವಾಗಿ ಆಕೆಯ ಗೋಲ್ಡ್ ಸ್ಮಗ್ಲಿಂಗ್ ವ್ಯವಹಾರದಲ್ಲಿ ಭಾಗಿಯಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ..

ಮಾಣಿಕ್ಯ (Manikya) ಖಾತ್ಯಿಯ ಚಿನ್ನದ ಬೆಡಗಿ ಬಂಧಿತ ರನ್ಯಾಳ ಸಹೋದರ ಕೂಡ ರಾಜ್ಯದಲ್ಲಿ ಸದ್ದು ಮಾಡಿದ್ದ ಪ್ರಮುಖ ಪ್ರಕರಣವೊಂದರ ಪ್ರೈಮ್ ಆರೋಪಿಗಳ ಜೊತೆ ಗುರುತಿಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದ ಬಿಟ್‍ಕಾಯಿನ್ (Bit Coin)ಪ್ರಕರಣದಲ್ಲಿ ಕೂಡ ಓಡಾಡಿಕೊಂಡಿದ್ದಾರೆಂದು ಎಂದು ಮೂಲಗಳು ತಿಳಿಸಿವೆ..
ಐಪಿಎಸ್ ಅಧಿಕಾರಿ ಜೊತೆ ಸಚಿವರಿಗು ಸಂಕಷ್ಟ..!?

ಬಂಧಿತ ಆರೋಪಿತೆಯ ತಾಯಿ ರೋಹಿಣಿ (Rohini) ತಮ್ಮ ಮೊದಲ ಪತಿಯಿಂದ ದೂರವಾಗಿ ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ರಾಮಚಂದ್ರರಾವ್ (Ramachandra Rao) ಅವರನ್ನು ವಿವಾಹವಾಗಿದ್ದಾರೆ. ವಿವಾಹದ ಬಳಿಕ ರನ್ಯಾ (Ranya) ಕೂಡ ತನ್ನ ತಾಯಿಯ ಜೊತಯೇ ವಾಸವಿದ್ದಾರೆ ಎನ್ನಲಾಗುತ್ತಿದೆ. ಇದೇ ಸಲುಗೆಯಿಂದ ರನ್ಯಾ ಅಫಿಷಿಯಲ್ ಪ್ರೋಟೋಕಾಲ್ ಬಳಸಿಕೊಂಡು ಎಲ್ಲಾ ಕಡೆ ಓಡಾಟವನ್ನು ಮಾಡ್ತಿದ್ಲು. ನಿನ್ನೆ ಕೂಡ ಏರ್‍ಪೋರ್ಟ್‍ನಲ್ಲಿ ಡಿಆರ್‍ಐ ಅಧಿಕಾರಿಗಳು (DRI Officers) ವಶಕ್ಕೆ ಪಡೆದಾಗಲು ನಾನು ರಾಮಚಂದ್ರರಾವ್ ಅವರ ಪುತ್ರಿ ಎಂದು ರಾಜಾರೋಷವಾಗಿ ಹೇಳಿಕೊಂಡಿದ್ದಾಳೆ. ಅಲ್ಲದೆ ರನ್ಯಾಳಿಗೆ ಪ್ರಸ್ತುತ ಸರ್ಕಾರದ ಓರ್ವಾ ಪ್ರಭಾವಿ ಸಚಿವರ ಜೊತೆ ಸಂಪರ್ಕವಿದೆಯಂತೆ. ಆರೋಪಿತಯ ತಂದೆ ಐಪಿಎಸ್ ಅಧಿಕಾರಿ ಆಗಿರುವ ಹಿನ್ನಲ್ಲೆ ಪ್ರಭಾವಿ ಸಚಿವರ ಸಂಪರ್ಕ ಹೊಂದಿದ್ದಾಳೆ. ಇದಕ್ಕೆಲ್ಲಾ ಪೂರಕ ಎನ್ನುವಂತೆ ಮೂರು ತಿಂಗಳ ಹಿಂದೆ ಅಂದ್ರೆ 2024ರ ನವೆಂಬರ್ ಅಲ್ಲಿ ನಡೆದ ಮದುವೆಯಲ್ಲಿ ಪ್ರಭಾವಿ ಸಚಿವರು ಸುಮಾರು ನಾಲ್ಕು ಗಂಟೆಗಳ ಕಾಲ ಭಾಗಿಯಾಗಿದ್ರಂತೆ. ಸಾಮಾನ್ಯವಾಗಿ ಸಚಿವರುಗಳು ಯಾವುದೇ ಮದುವೆಗೆ ಹೋದ್ರು ವಿಸಿಟ್ ಮಾಡಿ ಎಸ್ಕೇಪ್ ಆಗುವುದು ಕಾಮನ್. ಆದ್ರೆ ರನ್ಯಾ ಕುಟುಂಬದ ಜೊತೆ ಪ್ರಭಾವಿ ಸಚಿವರ ಆಪ್ತತೆ ಎಷ್ಟಿದೆ ಎನ್ನುವುದಕ್ಕೆ ಇದೆ ಸಾಕ್ಷಿ ಎನ್ನಬಹುದು.

ರನ್ಯಾ ಬಂಧನದ ಬೆನ್ನಲ್ಲೆ ಪ್ರಭಾವಿ ಸಚಿವರೀಗ ನೀರಿನಿಂದ ಹೊರಬಂದ ಮೀನಿನಂತೆ ಒಳ ಒಳಗೆ ವಿಲವಿಲ ಅಂತಾ ಒದ್ದಾಡಿ ಹೋಗಿದ್ದಾರಂತೆ. ರನ್ಯಾ ಬಂಧನ ಪ್ರಕರಣ ಪ್ರಭಾವಿ ಸಚಿವರಿಗೆ ಬಿಸಿ ತುಪ್ಪವಾಗಿದ್ದು, ನುಂಗಲು ಆಗದೆ, ಉಗಿಯಲು ಆಗದೆ ಪ್ರಾಣಸಂಕಟಕ್ಕೆ ಸಿಲುಕಿದ್ದಾರಂತೆ. ನಿಜಕ್ಕೂ ಡಿಆರ್‍ಐ ಅಧಿಕಾರಿಗಳು ರನ್ಯಾ ಬಂಧನದ ಮೂಲ ಹುಡುಕಿ ನಿಖರ ತನಿಖೆ ನಡೆಸಿದ್ರೆ ಪ್ರಭಾವಿ ಸಚಿವರು, ದೇಶ ಮತ್ತು ವಿದೇಶದಲ್ಲಿರುವ ಪ್ರತಿಷ್ಠಿತ ಬಹುದೊಡ್ಡ ಕಂಪನಿಯನ್ನು ಹೊಂದಿರುವ ಮುಖ್ಯಸ್ಥ ಹಾಗು ಹಿರಿಯ ಪೊಲೀಸ್ ಅಧಿಕಾರಿಯ ಬುಡಕ್ಕೆ ಬರುವುದು ಪಕ್ಕ ಎನ್ನುತ್ತಿವೆ ಪ್ರತಿಧ್ವನಿ ಸುದ್ದಿ ಮೂಲಗಳು..