ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ..

ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ ಅಂದುಕೊಂಡರೆ ಆ ಊಹೆ ತಪ್ಪು. ಇದು ಜಾಕಿ ಭಾವನಾ ಸುದ್ದಿಯಲ್ಲ. ಬದಲಾಗಿ ಇಂತಿ ನಿನ್ನ ಪ್ರೀತಿಯ ಭಾವನಾ ಅವರ ಶಾಕಿಂಗ್ ನ್ಯೂಸ್!!
ಯೆಸ್ ಭಾವನಾ ರಾಮಣ್ಣ ತಾಯಿ ಆಗುತ್ತಿದ್ದಾರೆ. ಅರೇ ಇದೇನ್ರೀ ತಾಯಿ ಆಗೋದರಲ್ಲಿ ತಪ್ಪೇನು? ಈ ಪ್ರಶ್ನೆ ಎದುರಾಗೋದು ಸಹಜ. ವಿಷಯ ಇರೋದೇ ಇಲ್ಲಿ. ನಟಿ ಭಾವನಾ ರಾಮಣ್ಣ ಅವರಿಗೆ ಮದ್ವೆ ಆಗಿಲ್ಲ. ಮಕ್ಕಳು ಹೇಗೆ? ಈ ಪ್ರಶ್ನೆಯೂ ಕಾಡಬಹುದು. ಅವರು ಮದ್ವೆ ಆಗಿಲ್ಲ. ಆದರೆ ತಾಯಿ ಆಗ್ತಾ ಇದ್ದಾರೆ.
ವಿಷಯ ಸಿಂಪಲ್ ಎನಿಸಿದರೂ ಕೊಂಚ ಅಚ್ಚರಿಯಂತೂ ಹೌದು.
ನಟಿ ಭಾವನಾ ರಾಮಣ್ಣ ಅಮ್ಮನಾಗುತ್ತಿದ್ದಾರೆ. ಅವರೀಗ ಏಳು ತಿಂಗಳ ಗರ್ಭಿಣಿ. ಶೀಘ್ರದಲ್ಲೇ ಅವರು ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ.

ಮದ್ವೆ ಆಗದೆ ಅಮ್ಮನಾಗುವುದು ತಪ್ಪಾ? ಇದು ಈಗ ಚರ್ಚೆಯ ವಿಷಯವಲ್ಲ. ಅವರು ಐವಿಎಫ್ ಮೂಲಕ ಮಗು ಪಡೆಯುತ್ತಿದ್ದು, ತಮ್ಮ ಗರ್ಭದಲ್ಲೇ ಮಗುವನ್ನ ಹೇರುತ್ತಿರುವುದು ವಿಶೇಷ.
ಭಾವನಾ ರಾಮಣ್ಣ ನಟಿಯಾಗಿ, ರಾಜಕಾರಣಿಯಾಗಿ, ಗುರುತಿಸಿಕೊಂಡವರು.ಆಗಾಗ ಒಂದಷ್ಟು ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾದವರು.
ಭಾವನಾ ಸಿಂಗಲ್. ಮೊದಲಿಂದಲೂ ಅವರು ಒಬ್ಬರೇ ಜೀವನ ನಡೆಸುತ್ತಿದ್ದಾರೆ.
ಸದ್ಯ ಅವರು ಮಕ್ಕಳನ್ನು ಪಡೆಯುವ ಉತ್ಸಾಹದಲ್ಲಿದ್ದಾರೆ.ಮದ್ವೆಯಾಗದೆ ತಾಯಿ ಆಗಬೇಕೆಂಬ ಹಂಬಲಕ್ಕೆ ವೈದ್ಯಕೀಯ ತಂತ್ರಜ್ಞಾನ ಸಾಥ್ ಕೊಟ್ಟಿದೆ. ಹೌದು ಪುರುಷನ ದೈಹಿಕ ಸಂಪರ್ಕ ಇಲ್ಲದೆ ಈಗ ತಾಯಿಯಾಗಬಹುದು. ಈ ವಿಷಯ ಹೊಸದೇನಲ್ಲ. ಈ ಮೂಲಕವೇ ಭಾವನಾ ತಾಯಿಯಾಗುತ್ತಿದ್ದಾರೆ. ಭಾವನಾ ರಾಮಣ್ಣಗೆ ವಯಸ್ಸು 40ರ ಗಡಿ ದಾಟಿದೆ.

ಭಾವನಾ ಭರತನಾಟ್ಯ ಕಲಾವಿದೆಯಾಗಿ ಫಿಟ್ ಆದವರು. ಈಗ ಮದ್ವೆ ಇಲ್ಲ, ಗಂಡ ಇಲ್ಲ ಆದರೂ ಮಕ್ಕಳನ್ನು ಹೇರುವ ತವಕದಲ್ಲಿದ್ದಾರೆ.
ಅದೇನೆ ಇರಲಿ, ಅವರೀಗ ಅವಳಿ ಮಕ್ಕಳನ್ನು ಪಡೆದು ಶೀಘ್ರದಲ್ಲೇ ಅವರು ತಾಯಿಯಾಗಲಿದ್ದಾರೆ ಅನ್ನೋ ಸುದ್ದಿ ಸಖತ್ ವೈರಲ್ ಅಗ್ತಾ ಇದೆ.

ಅನಾಥ ಮಕ್ಕಳ ದತ್ತು ಪಡೆದು ತಾಯಿ ಆಗಬಹುದಿತ್ತಲ್ಲವೇ? ಈ ಮಾತುಗಳು ಕೇಳಿ ಬರುತ್ತಿವೆ. ಆದರೆ ಭಾವನಾ ರಾಮಣ್ಣಗೆ ಗರ್ಭಾವತಿ ಆಗಿಯೇ ಮಕ್ಕಳನ್ನು ಹೇರಬೇಕೆಂಬ ಹಂಬಲ. ಒಂದಂತೂ ನಿಜ. ಭಾವನಾ ತಾಯಿ ಆಗ್ತಾ ಇದ್ದಾರೆ. ಹೆಣ್ಣಾಗಲಿ ಗಂಡಾಗಲಿ ಮಕ್ಕಳು ಚೆನ್ನಾಗಿರಲಿ ಅನ್ನೋದು ಭಾವನಾ ಫ್ಯಾನ್ಸ್ ಆಶಯ.