ಬಣ್ಣದ ಲೋಕದಲ್ಲಿರುವವರು ತಮ್ಮ ದೇಹ ಕಾಂತಿ ಹಾಗು ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿಯನ್ನು ಹೊಂದಿರುತ್ತಾರೆ. ಕೆಲವರು ಡಯಟ್ ಮೊರೆ ಹೋದರೆ ಇನ್ನು ಕೆಲವರು ವಿವಿಧ ರೀತಿಯ ಸರ್ಜರಿಗಳನ್ನು ಮಾಡಿಸಿಕೊಳ್ಳುವ ಮೂಲಕ ತಮ್ಮ ದೇಹ ಸೌಂದರ್ಯವನ್ನ ಹೆಚ್ಚಿಸಿಕೊಳ್ಳುತ್ತಾರೆ.
ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ನ ಹಲವು ನಟ/ನಟಿಯಯರು ಫ್ಯಾಟ್ ಸರ್ಜರಿ (ದೇಹದಲ್ಲಿರುವ ಕೊಬ್ಬಿನ ಅಂಶವನ್ನ ಶಸ್ತ್ರಚಿಕಿತ್ಸೆ ಮೂಲಕ ಕರಗಿಸುವುದು) ವಿವಿಧ ರೀತಿಯ ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಳ್ಲುತ್ತಾರೆ. ಇದರಲ್ಲಿ ಕೆಲವು ಚಿಕಿತ್ಸೆಗಳು ಯಶಸ್ವಿಯಾದರೆ ಕೆಲವು ವಿಫಲವಾಗಿ ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಾರೆ.
ಬುಲೆಟ್ ಪ್ರಕಾಶ್
ಚಂದನವನದಲ್ಲಿ ಈ ರೀತಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಹಾಸ್ಯ ನಟ ಬುಲೆಟ್ ಪ್ರಕಾಶ್(46) ದೊಡ್ಡ ರೀತಿಯ ಪರಿಣಾಮ ಎದುರಿಸಿದ್ದರು. ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು ಮತ್ತು ನಂತರದ ದಿನಗಳಲ್ಲಿ ಅವರಿಗೆ ಅವಕಾಶಗಳು ಕಮ್ಮಿಯಾಗ ತೊಡಗಿದ್ದವು.

2018ರಲ್ಲಿ ತೂಕ ಹೆಚ್ಚಾಗಿದ್ದ ಕಾರಣ ನಟ ಪ್ರಕಾಶ್ ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ನಂತರ 35 ಕೆ.ಜಿ ತೂಕವನ್ನ ಇಳಿಸಿಕೊಂಡರು ನಂತರದ ದಿನಗಳಲ್ಲಿ ಕಿಡ್ನಿ ಹಾಗು ಲಿವರ್ ಸಮಸ್ಯೆ ಅವರನ್ನು ತೀವ್ರವಾಗಿ ಬಾಧಿಸಿತ್ತು 2020 ಏಪ್ರಿಲ್ 6ರಂದು ಅನಾರೋಗ್ಯದಿಂದ ನಿಧನರಾದರು.
ಚೇತನಾ ರಾಜ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೀತಾ, ದೊರೆಸಾನಿ ಹಾಗು ಒಲವಿನ ನಿಲ್ದಾಣ ಧಾರಾವಾಹಿ ಹಾಗು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದ ನಟಿ ಚೇತನಾ ರಾಜ್(21) ಕೂಡ ಫ್ಯಾಟ್ ಸರ್ಜರಿಗೆ ಒಳಗಾಗಿ ನಿಧನರಾಗಿದ್ದಾರೆ.
ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕರಗಿಸಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದರು. ಆದರೆ, ಚಿಕಿತ್ಸೆ ವೇಳೆ ಉಸಿರಾಟದ ಸಮಸ್ಯೆಯಿಂದ ಸಾವನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಸುಬ್ರಮಣ್ಯನಗರ ಹಾಗು ಬಸವೇಶ್ವರನಗರ ಪೊಲೀಸ್ ಠಾಣೆಗಳ್ಲಲಿ ಪ್ರತ್ಯೇಕವಾಗಿ ದೂರು ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರತಿ ಅಗರವಾಲ್
ಬೆಂಗಳೂರು ಮೂಲದ ನಟಿ ಆರತಿ ಅಗರವಾಲ್(31) ತೆಲುಗು ಚಿತ್ರರಂಗದಲ್ಲಿ ಅತಿ ಕಡಿಮೆ ಸಮಯದಲ್ಲಿ ಖ್ಯಾತಿ ಪಡೆದರು. ಅವರು ತಮ್ಮ ದೇಹ ಕಾಂತಿಯನ್ನು ಹೆಚ್ಚಿಸಲು ಲಿಪೋಸೆಕ್ಷನ್ ಎಂಬ ಸರ್ಜರಿ ಮಾಡಿಸಿಕೊಂಡರು ನಂತರದ ದಿನಗಳಲ್ಲಿ ಚಿಕಿತ್ಸೆ ಏರುಪೇರಾಗಿ ತೂಕ ಹೆಚ್ಚಾಯಿತ್ತು. ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಫ್ಯಾಟ್ ಸರ್ಜರಿ ಮೊರೆ ಹೋದ ನಟಿ ತೂಕ ಇಳಿಸಿಕೊಂಡರಾದರು ಕೆಲವು ತಿಂಗಳುಗಳ ನಂತರ 2015ರಲ್ಲಿ ಅನಾರೋಗ್ಯದಿಂದ ನಿಧನರಾದರು.
ಬಾಲಿವುಡ್ ನಟಿ ಶ್ರೀದೇವಿ ಹಾಗು ನಟ ರಾಕೇಶ್ ಕೂಡ ಕಾಸ್ಮೆಟಿಕ್ ಸರ್ಜರಿಗೆ ಒಳಗಾದ ಕೆಲವೇ ತಿಂಗಳುಗಳಲ್ಲಿ ನಿಧನರಾದರು. ಸರ್ಜರಿಯ ಅಡ್ಡಪರಿಣಾಮಗಳಿಂದ ನಿಧನರಾದರು ಎಂದು ಹೇಳಲಾಗುತ್ತಿದೆ.