ರೇವ್ ಮಾಡುತ್ತಿದ್ದ ಬಿಗ್ ಬಾಸ್ ವಿನ್ನರ್, ಗಣ್ಯರು ಮತ್ತು ನಟರ ಮಕ್ಕಳು ಸೇರಿದಂತೆ 142 ಮಂದಿಯನ್ನು ಭಾನುವಾರ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಬಂಜಾರ ಹಿಲ್ಸ್ ನ ಪಂಚತಾರ ಹೋಟೆಲ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಬಗ್ಗೆ ಮಾಹಿತಿ ಪಡೆದ ವಿಶೇಷ ಕಾರ್ಯಪಡೆ ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿ ನಿಷೇಧಿತ ಕೋಕೆನ್, ವೀಡ್ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.
ಮೆಗಾಸ್ಟಾರ್ ಚಿರಂಜೀವಿ ಸೋದರ ಸಂಬಂಧಿ ನಾಗ ಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ, ಬಿಗ್ ಬಾಸ್ ಮೂರನೇ ಆವೃತ್ತಿ ವಿನ್ನರ್ ಮತ್ತು ಗಾಯಕ ರಾಹುಲ್ ಸಿಪ್ಲಿಗುಂಜ್ ಸೇರಿದಂತೆ ಸ್ಟಾರ್ ನಟರ ಪುತ್ರರು, ಗಣ್ಯರ ಮಕ್ಕಳು, ರಾಜಕಾರಣಿಗಳ ಮಕ್ಕಳು ಇದ್ದರು ಎಂದು ಹೇಳಲಾಗಿದೆ.
ನಮ್ಮ ಮಕ್ಕಳು ಬರ್ತಡೆ ಪಾರ್ಟಿ ಇದೆ ಎಂದು ಆಹ್ವಾನದ ಹಿನ್ನೆಲೆಯಲ್ಲಿ ಮಕ್ಕಳು ತೆರಳಿದ್ದರು. ಆದರೆ ಅಲ್ಲಿ ಈ ರೀತಿ ಆಗಿದೆ ಎಂಬುದು ತಿಳಿದಿಲ್ಲ ಎಂದು ತೆಲುಗುದೇಶಂ ಪಕ್ಷದ ಸಂಸದರ ಪುತ್ರ, ತೆಲಂಗಾಣ ಕಾಂಗ್ರೆಸ್ ಪಕ್ಷದ ಮುಖಂಡ ಅಂಜನ್ ಕುಮಾರ್ ಹೇಳಿದ್ದಾರೆ.