
ಕಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ನಟ ವಿಜಯ್ ರಾಜಕೀಯವನ್ನು ಪ್ರವೇಶಿಸುತ್ತೇನೆಂದು ಹೇಳಿದ್ದರು. ಹೇಳಿದಂತೆ ಅವರು ಯಾವುದೇ ಪಕ್ಷವನ್ನು ಸೇರಲ್ಲ, ಬದಲಿಗೆ ಸ್ವಂತ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಬರುತ್ತೇನೆ ಹಾಗೂ ಚುನಾವಣೆಗಳಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧಿಸುತ್ತೇನೆಂದು ಹೇಳಿದ್ದರು. ಅದರಂತೆ ಅವರು “ ತಮಿಳಿಗ ವೆಟ್ರಿ ಕಳಗಂ” ಪಕ್ಷವನ್ನು ಸ್ಥಾಪಿಸಿದರು. ತಮಿಳು ನಾಡಿನಲ್ಲಿ 2026ರ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ದಳಪತಿ ವಿಜಯ್ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.

ಚುನಾವಣೆಯ ಪ್ರಚಾರಕ್ಕೆ ಸಕಲ ಸಿದ್ದತೆಗಳೊಂದಿಗೆ ಅವರು ಪ್ರಚಾರ ನಡೆಸಲು ಮುಂದಾದರು.ಅವರು ಅಂದುಕೊಂಡಂತೆ ತಮಿಳುನಾಡಿನ ಕರೂರ್‌ನಲ್ಲಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಚಾರ ಮಾಡಿದರು. ಖುದ್ದು ನಾನೇ ಪ್ರಚಾರದಲ್ಲಿ ಭಾಗವಹಿಸುತ್ತೇನೆಂದು ತಿಳಿಸಿದ್ದರು ವಿಜಯ್.
ಇವರನ್ನು ನೋಡಲು 2 ಲಕ್ಷಕ್ಕಿಂತ ಹೆಚ್ಚಿನ ಅಭಿಮಾನಿಗಳು ಸ್ಟಾರ್ ಕಮ್ ರಾಜಕಾರಣಿ ನೋಡಲು ಆಗಮಿಸಿದ್ದರು.
ಇದು ಯೋಜಿತ ಕಾರ್ಯಕ್ರಮವೇ ಆಗಿತ್ತಾದರೂ ಕೂಡ ಭಾರೀ ಅನುಹಾತವೊಂದು ಸಂಭವಿಸಿದೆ.ತಮ್ಮ ನೆಚ್ಚಿನ ನಟರನ್ನು ನೋಡಲು ಹಾಗೂ ಚುನಾವಣೆ ಪ್ರಚಾರದ ನೆಪದಲ್ಲಾದರು ಹತ್ತರಿದಂದ ನೋಡಬಹುದೆಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಲ್ಲಿ ಜನರು ಸೇರಿದ್ದರು. ಈ ಹಿನ್ನಲೆಯಲ್ಲಿ ನೂಕುನುಗ್ಗಲು ಉಂಟಾಗಿ ಕನಿಷ್ಠ 39 ಮಂದಿ ಕಾಲ್ತುಳಿತದಿಂದ ಮೃತ ಪಟ್ಟಿದ್ದಾರೆಂದು, ಎಡಿಜಿಪಿ ಡೇವಿಡ್ ಸನ್ ಆರ್ಶಿವಾದ್ ರವರು ಮಾಹಿತಿ ನೀಡಿದರು. ಇನ್ನೂ ಇದೇ ವೇಳೆ 48 ಜನರಿಗೆ ಗಾಯಳಾಗಿದ್ದು ಓರ್ವರ ಸ್ಥಿತಿ ತುಂಬಾ ಗಂಭಿರವಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

10,000 ಜನರು ವಿಜಯ್ ಹಮ್ಮಿಕೊಂಡಿದ್ದ ಪ್ರಚಾರದಲ್ಲಿ ಭಾಗಿಯಾಗಲೂ ನೊಂದಾಯಿಸಿಕೊಂಡಿದ್ದರು. ಆದರೆ ಅಲ್ಲಿ ಸೇರಿದ್ದು 2 ಲಕ್ಷಕ್ಕೂ ಹೆಚ್ಚಿನ ಜನರು ಈ ಒಂದು ಪೂರ್ವಯೋಜಿತ ಕಾರ್ಯಕ್ರಮಕ್ಕೆ ಭಾಗವಹಿಸಿದರು. ಭದ್ರತೆ ದೃಷ್ಠಿಯಿಂದ ಸ್ಥಳೀಯ 116 ಪೊಲೀಸರು ಸೇರಿದಂತೆ ಹೆಚ್ಚುವರಿಯಾಗಿ 500 ಪೊಲೀಸರನ್ನು ನಿಯೋಜಿಸಲಾಗಿತ್ತಾದರೂ ಕೂಡ ಈ ಒಂದು ದುರಂತ ಸಂಭವಿಸಿದೆ.
ದುರಂತದ ಬಗ್ಗೆ ತಿಳಿಯುತ್ತಿದ್ದೆಂತೆ ನಟ ಕಮ್ ರಾಜಕಾರಣಿ ತಮ್ಮ ಪ್ರಚಾರದ ನುಡವೆ ಭಾಷಣವನ್ನು ಆಗಷ್ಟೇ ಪ್ರಾರಂಭಿಸಿದ್ದ ವಿಜಯ್, ಕೂಡಲೇ ಭಾಷಣವನ್ನು ಮೊಟುಕುಗೊಳಿಸಿ, ಚನ್ನೈಗೆ ಹಿಂತಿರುಗಿದ್ದಾರೆ.
ಈ ದುರ್ಘಟನೆ ಬಳಿಕ ವಿಜಯ್ ದುರಂತದಲ್ಲಿ ಸಾವಿಗೀಡಾದ ಮತ್ತು ಗಾಯಗೊಂಡಿವರಿಗೆ ಸಾಂತ್ವನ ತಿಳಿಸಿದ್ದು, ಪರಿಹಾರವನ್ನು ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ ತಲ 20 ಲಕ್ಷ ರೂ, ಹಾಗೂ ಗಾಯಗೊಂಡವರಿಗೆ ತಲ 2 ಲಕ್ಷ ರೂ ನೀಡುವುದಾಗಿ ತಿಳಿಸಿದ್ದಾರೆ.
ಇನ್ನೂ ಕಾಲ್ತುಳಿತ ಸಂಭವಿಸಿ ದುರಂತದಲ್ಲಿ ಸಾವನ್ನಪ್ಪಿದವರಿಗೆ ತಮಿಳುನಾಡಿನಲ್ಲಿ ಸರ್ಕಾರವನ್ನು ಆಡಳಿತ ನಡೆಸುತ್ತಿರುವ ಡಿಎಂಕೆ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಂತಾಪ ಸೂಚಿಸಿ, ಪರಿಹಾರವನ್ನು ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ ತಲ 10 ಲಕ್ಷ ರೂ ಪರಿಹಾರ ಮೊತ್ತವನ್ನು ನೀಡಲಾಗುವುದೆಂದು ಹೇಳಿದ್ದಾರೆ.
ಕಾಲ್ತುಳಿತ ಬಗ್ಗೆ ಅನೇಕ ರಾಜಕಾರಣಿಗಳು ಸಂತಾಪದ ಸೂಚಿಸಿದ್ದೂ ಅದರಲ್ಲೂ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಘಟನೆ ತಿಳಿಯುತ್ತಿದ್ದೆಂತೆ ʼಎಕ್ಷ್ʼ ನಲ್ಲಿ ಸಂತಾಪ ಸೂಚಿಸಿದ್ದಾರೆ.
ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ನೇತೃತ್ವ ಭಾರತ್ ಐಕ್ಯತಾ ಯಾತ್ರೆ ಮಾದರಿ !
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಮೂರ ವರ್ಷಗಳ ಹಿಂದೆ. ಸೆಪ್ಟಂಬರ್ 7ನೇ ತಾರಿಕಿನೆಂದು ತಮಿಳು ನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಪಾದಯಾತ್ರೆ ಜಮ್ಮು-ಕಾಶ್ಮೀರದವರೆಗೂ ತಲುಪಿ ಅಭೂತ ಪೂರ್ವ ಯಶಸ್ಸನ್ನು ಕಂಡಿತ್ತು.

ಸುಮಾರು 14 ರಾಜ್ಯಗಳಲ್ಲಿ ಪಾದಯಾತ್ರೆ ನಡೆಯಿತು. ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕರನ್ನು ನೋಡಲು. ಭೇಟಿಯಾಗಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸೇರುತ್ತಿದ್ದರು, ರಸ್ತೆ ಉದ್ದಕ್ಕೂ ಜನ ಸಾಗರದ ನಡುವೆ ರಾಹುಲ್ ಗಾಂಧಿ ಹಾಗೂ ಕೈ ನಾಯಕರು, ಯೋಜಿತ ತಂಡ, ಮತ್ತು ನೊಂದಾಯಿತ ಸದಸ್ಯರುಗಳು 136 ದಿನಗಳ ಕಾಲ ಹೆಜ್ಜೆ ಹಾಕುತ್ತ, ದೇಶವನ್ನು ಸಂಚಾರ ಮಾಡುತ್ತಲ್ಲೇ ಜನರನ್ನು ಭೇಟಿಯಾಗುತ್ತ, ಅವರನ್ನು ಮಾತನಾಡಿಸುತ್ತ. ಪೊಲೀಸ್ ಭದ್ರತೆ ನಡುವೆ ಪ್ರಜೆಗಳ ಕಷ್ಟ. ನೋವುಗಳನ್ನು ಅರ್ಥ ಮಾಡಿಕೊಳ್ಳುಲು ಕೈ ನಾಯಕರಿಗೆ ಸಾಧ್ಯವಾಗಿದ್ದಲ್ಲದೆ ಯಶಸ್ವಿಯಾಗಿ ಪಾದಯಾತ್ರೆಯನ್ನು ಪೂರೈಸಿದರು.

ಇಂತಹ ಒಂದು ಐತಿಹಾಸಿಕ ಹೋರಾಟವನ್ನು ನಡೆಸಿದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಯಾವ ಸುದ್ದಿ ಮಾಧ್ಯಮಗಳು ಇದನ್ನು ಕವರ್ ಮಾಡಲಿಲ್ಲ, ಪ್ರಚಾರ ಮಾಡಲಿಲ್ಲವಾದರು, ಅಷ್ಟೋಂದು ಸಂಖ್ಯೆಯಲ್ಲಿ ಜನರು ಸೇರಿತ್ತಿದ್ದಾರೂ ಹೇಗೆ?, ಮತ್ತೆ ಎಲ್ಲೂ ಕೂಡ ಒಂದೇ ಒಂದು ಅಹಿತಕರ ಘಟನೆಗಳಾದ ಕಾಲ್ತುಳಿತ, ಕಲ್ಲೂ ತೂರಾಟ, ರಸ್ತೆ ತಡೆ, ಕನಿಷ್ಟ ಪಕ್ಷ ಟೈಯರ್ ಸುಟ್ಟುಹಾಕಿದ್ದಂತಹ ಘಟನೆಗಳು ನಡೆಯಲಿಲ್ಲ.

ರಾಜ್ಯದ ರಾಜಧಾನಿಯಲ್ಲಿ ಆರ್ ಸಿ ಬಿ ಗೆಲುವಿನ ಪ್ರಚಾರ ಹಾಗೂ ಸಂಭ್ರಮಾಚರಣೆ ಪ್ರಯುಕ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು, ಇದಕ್ಕೆ ಪ್ರಮುಖ ಕಾರಣ ಆರ್ ಸಿ ಬಿ ಮತ್ತು ಐಪಿಲ್ ಆಯೋಜಕರೆ ಹೊರೆತು ರಾಜ್ಯ ಸರ್ಕಾರ, ಗೃಹ ಇಲಾಖೆಯ ವೈಫಲ್ಯವಲ್ಲ. ಕಾರಣ ಚಿನ್ನಸ್ವಾಮಿ ಕ್ರೀಂಡಾಂಗಣ ಖಾಸಗಿ ಸ್ವತ್ತ ಹೊರತು ಸರ್ಕಾರದ ಸ್ವತ್ತಲ್ಲ. ಆಯೋಜಕರು ಕಟ್ಟು ನಿಟ್ಟಾಗಿ ಸುತ್ತೋಲೆಯನ್ನು ಹೊರಡಿಸಿದ್ದರು, ಸುತ್ತೋಲೆಯಲ್ಲಿ ಕೇವಲ ಚಿನ್ನಸ್ವಾಮಿ ಕ್ಲಬ್ ಸದಸ್ಯರುಗಳಿಗೆ ಮಾತ್ರ ಪ್ರವೇಶವೆಂದು ಆದೇಶ ಹೊರಡಿಸಿತ್ತಾದರೂ ಕೂಡ ಇಂತಹ ಘಟನೆ ನಡೆಯಿತು.ದೇಶದಲ್ಲಿ ಯಾವುದೇ ಇಂತಹ ಅಹಿತಕರ ಘಟನೆ ನಡೆಯಬಾರದು ಎಂದು ಎಲ್ಲರ ಆಶಯ.
ಸುದ್ದಿವಾಹಿನಗಳ ಕಳ್ಳಾಟ! – ಕಳೆದ 11 ವರ್ಷಗಳಲ್ಲಿ ದೇಶದಲ್ಲಾಗಿರುವ ಅನಾಹುತಗಳ ಬಗ್ಗೆ ಸುದ್ದಿ ಪ್ರಸಾರವಾಗಿಲ್ಲ, ಹಾಗೂ ಈ ಬಗ್ಗೆ ಗಂಭೀರ ಚರ್ಚೆಗಳು ನಡೆದಿಲ್ಲ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅದರಲ್ಲೂ ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಮಣಿಪುರ, ಅಸ್ಸಾಂ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಡೆದಿರುವ ಭ್ರಷ್ಟಾಚಾರ, ಅತ್ಯಾಚಾರ, ಹಿಂಸಾಚಾರ, ಗಲಭೆಗಳ ಬಗ್ಗೆ ಪರಿಣಾಮಕಾರಿಯಾಗಿ ನ್ಯೂಸ್ ಚ್ಯಾನಲ್ ಗಳು ವರದಿಗಳನ್ನು ಪ್ರಸಾರ ಮಾಡುತ್ತಿಲ್ಲವೇಕೆ?
ಉತ್ತರ ಪ್ರದೇಶದಲ್ಲಿ ಕುಂಭಮೇಳೆದ ಆಚರಣೆಯಲ್ಲಿ ಸಾವಿರಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದರೂ ಸಹ ಮುಚ್ಚಿಡುವ ಕೆಲಸ ಅಲ್ಲಿನ ಸರ್ಕಾರದ ಜೊತೆ ಅಷ್ಟೇ ಪ್ರಭಾವಶಾಲಿಯಾಗಿ ಈ ನ್ಯೂಸ್ ಚ್ಯಾನಲ್‌ಗಳು ಪ್ರಸಾರ ಮಾಡದಂತೆ ಸರ್ಕಾರದ ರಕ್ಷಣೆಗೆ ನಿಂತಿರುವುದು ಎಷ್ಟರಮಟ್ಟಿಗೆ ಸರಿ?
ಮಹಾರಾಷ್ಟ್ರದಲ್ಲಿ ಐಪಿಲ್ ಗೆದ್ದು, ಸಂಭ್ರಮಾಚರಣೆ ವೇಳೆ ಬೆಂಗಳೂರಿಗಿಂತ ಭೀಕರವಾದ ಘಟನೆಗಳು, ಅನಾಹುತಗಳು ಮತ್ತು ಅತೀ ಹೆಚ್ಚಾಗಿ ಟ್ರಾಫಿಕ್ ಜಾಮ್ ಗಳು ಸಂಭವಿಸಿತ್ತಾದರೂ ಈ ಬಗ್ಗೆ 24*7 ನ್ಯೂಸ್ ಚ್ಯಾನಲ್ ಮತ್ತು ಅದರ ನಿರೂಪಕರ, ವರದಿಗಾರರ ಬಾಯಿ ಬಂದಾಗಿತ್ತಲ್ಲವೇಕೆ?
ರಾಜ್ಯದಲ್ಲಿ ಇದೇ ಬಿಜೆಪಿಗಳು ಆಡಳಿತವಿದ್ದ ಸಂದರ್ಭದಲ್ಲಿ ಚಾಮರಾಜನಗರದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ Oxygen Cylinder ಸಿಗಲಾರದೆ ಕನಿಷ್ಠ 24 ರೋಗಿಗಳು ಮೃತಪಟ್ಟರಲ್ಲ ಆಗ
ಇದೇ ಮಾಧ್ಯಮಗಳು ಮತ್ತು 24*7 ನ್ಯೂಸ್ ವಾಹಿನಗಳ ಮುಖ್ಯಸ್ಥರು ಈ ಘಟನೆ ಬಗ್ಗೆ ಆಗಿನ ಶಿಕ್ಷಣ ಸಚಿವರು ಮತ್ತು ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಳ್ಳಲ್ಲಿವೇಕೆ? ಉತ್ತರ ಪ್ರದೇಶದಲ್ಲಿ ಇದೇ Oxygen Cylinder ಕೊರೆತೆಯಿಂದಾಗಿ ಕೋವಿಡ್ ಗೆ ತುತ್ತಾದ ರೋಗಿಗಳು ಮೃತ ಪಟ್ಟಾಗ ಗೋಧಿ ಮಾಧ್ಯಮಗಳು ಅಲ್ಲಿನ ಮುಖ್ಯಮಂತ್ರಿ ವಿರುದ್ಧ ಮತ್ತು ಸರ್ಕಾರ ವಿರುದ್ಧ ಗುಡುಗಲಿಲ್ಲವೇಕೆ?
ಜನರನ್ನು ಭಯಪಡಿಸಿದ್ದು ಬಿಟ್ಟರೆ, ಗೋಧಿ ಮಾಧ್ಯಮಗಳ ನಿರೂಪಕರು ಮತ್ತು ವಾಹಿನಿಗಳ ಮುಖ್ಯಸ್ಥರು ವಸ್ತುನಿಷ್ಠಯಿಂದ, ವಾಸ್ತವವನ್ನು ಮುಚ್ಚಿಡುವ ಕೆಲಸವನ್ನು ಮಾಡುತ್ತಿದೆಯಲ್ಲ ಯಾಕೆ?
ಪುರಿ ಜಗನ್ನಾಥ್ ದೇವಾಲಯದ ರಥಾಯಾತ್ರೆ ಸಂದರ್ಭದಲ್ಲಿ ರಥಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಹೋಗಿದ್ದ ಭಕ್ತರು ಅಲ್ಲಿ ನಡೆದ ಕಾಲ್ತುಳಿದಿಂತ ಮೃತಪಟ್ಟರಲ್ಲ ಆಗಲೂ ಸಹ ಇದೇ 24*7 ಕೆಲಸಕ್ಕೆ ಬಾರದ ಜನ ವಿರೋಧಿ ಸುದ್ದಿ ಮಾಧ್ಯಮಗಳು ಈ ಘಟನೆ ಕುರಿತು ಪ್ರಸಾರ ಹಾಗೂ ಈ ಬಗ್ಗೆ ವಿಶ್ಲೇಷಣೆ, ಚರ್ಚೆಗಳನ್ನು ಮಾಡಲಿಲ್ಲವೇಕೆ?
ಟವಿ ಸುದ್ದಿ ಮಾಧ್ಯಮಗಳ ಕಣ್ಣಾಮುಚ್ಚಾಲೇ ನವರಂಗಿ ಆಟವಲ್ಲ ಜನರಿಗೆ ತಿಳಿಯಲ್ಲವೆಂದು ಭಾವಿಸುವುದು ಇವುಗಳ ಮೂರ್ಖತನವಲ್ಲವೇ?!