2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ(karnataka assembly election 2023) ರಾಜಕೀಯ ನಾಯಕರಿಗೆ ಅನೇಕ ಸೆಲೆಬ್ರಿಟಿಗಳು ಮತ ಪ್ರಚಾರಕ್ಕೆ(campaign) ಸಾಥ್ ನೀಡುತ್ತಿದ್ದಾರೆ. ನಿನ್ನೆ ವರುಣ ಕ್ಷೇತ್ರದಲ್ಲಿ ಸ್ಯಾಂಡಲ್‌ವುಡ್(sandalwood) ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್(shivarajkumar) ಮತಯಾಚಿಸಿದ್ರು. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ(prathap simha) ಸಾಮಾಜಿಕ ಜಾಲತಾಣದಲ್ಲಿ(social media) ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ʻಪುನೀತ್ ರಾಜಕುಮಾರ್(punith rajkumar) ಸರ್ ಹೆಸರಿನಲ್ಲಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನ ಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣನ ಪರವಾಗಿ ಪ್ರಚಾರಕ್ಕೆ ಇಳಿದ ಶಿವಣ್ಣ! ಅವರವರ ಭಾವ ಭಕುತಿಗೆ” ಅಂತ ಪ್ರತಾಪ್ ಸಿಂಹ(pratap simha) ಟ್ವೀಟ್ ಮಾಡಿದ್ದು, ದೊಡ್ಮನೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದರು.
ಇದೀಗ ಈ ಬಗ್ಗೆ ಖುದ್ದು ಶಿವರಾಜ್‌ಕುಮಾರ್(shivarajkumar) ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಶಿವಮೊಗ್ಗದಲ್ಲಿ ಮಾತ್ನಾಡಿದ ಅವರು, ʻವಿ.ಸೋಮಣ್ಣ,(V somanna) ಪ್ರತಾಪಸಿಂಹ ನಮಗೆ ಒಳ್ಳೆಯ ಆಪ್ತರು. ಅವರ ಬಗ್ಗೆ ನಮಗೆ ಗೌರವ ಇದೆ. ಸೋಮಣ್ಣ ವರುಣಾದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನನಗೆ ಗೊತ್ತಿರಲಿಲ್ಲ. ಕರೆದರೆ ಅವರ ಪರವಾಗಿಯೂ ನಾನು ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯವರು(BJP) ಯಾರೂ ನನ್ನನ್ನ ಸಂಪರ್ಕ ಮಾಡಿಲ್ಲʼ ಅಂತ ಶಿವಣ್ಣ ಸ್ಪಷ್ಟಪಡಿಸಿದರು. ಅದಕ್ಕೆ ಹೇಳೋದು ಆತುರಗಾರನಿಗೆ ಬುದ್ದಿ ಮಟ್ಟ ಅಂತ. ಇರಲಾದರೆ ಇರುವೆ ಬಿಟ್ಟುಕೊಂಡ ಹಾಗೆ ಪ್ರತಾಪ್ ಸಿಂಹ(prathap simha) ಸುಖಾ ಸುಮ್ಮನೆ ಟ್ವೀಟ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾದರಷ್ಟೇ.