
ಶ್ರೀ ಕ್ಷೇತ್ರ..ಕಲಿಯುಗದ ಕಾಮಧೇನು, ಅತ್ಯಂತ ದಯಾಳು ಎಂದು ಕರೆಯಲ್ಪಡುವ ಶ್ರೀ ಗುರುರಾಘವೇಂದ್ರ ಸ್ವಾಮಿಗಳ (Sri guru raghavendra swamy) ಸನ್ನಿಧಾನ ಮಂತ್ರಾಲಯಕ್ಕೆ (Mantralayam) ನಟ ಶಿವರಾಜಕುಮಾರ್ (Actor Shivaraj kumar) ಭೇಟಿ ಕೊಟ್ಟು ರಾಯರ ದರ್ಶನ ಪಡೆದಿದ್ದಾರೆ.

ಇಂದು ಮಂತ್ರಾಲಯಕ್ಕೆ ಪತ್ನಿ ಗೀತಾ ಜೊತೆ ತೆರಳಿದ ಶಿವಣ್ಣ ಗುರುರಾಯರ ದರ್ಶನ ಪಡೆದಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಬಂದ ನಂತರ ಇದೇ ಮೊದಲ ಬಾರಿಗೆ ಶಿವಣ್ಣ ದಂಪತಿ ಮಂತ್ರಾಲಯಕ್ಕೆ ಆಗಮಿಸಿದ್ದಾರೆ.

ಈ ವೇಳೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನ ದರ್ಶನ ಪಡೆದ ದಂಪತಿ, ನಂತರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಆಶೀರ್ವಚನ ಪಡೆದಿದ್ದಾರೆ. ಈ ವೇಳೆ ಶ್ರೀ ಸುಬುಧೇಂದ್ರ ತೀರ್ಥರು ಶಿವಣ್ಣ ಆರೋಗ್ಯ ವಿಚಾರಿಸಿ ಆಶೀರ್ವದಿಸಿದ್ದಾರೆ.