ನಟ ದರ್ಶನ್ (Actor darshan) ಅಭಿಮಾನಿಗಳ ವಿರುದ್ಧ ಪ್ರಥಮ್ (Pratham) ಮತ್ತೆ ಕಿಡಿಕಾರಿದ್ದಾರೆ. ಈಗಾಗಗಲೇ ತಮಗೆ ಕೊಲೆ ಬೆದರಿಕೆ ಹಾಕಿ ಡ್ರಾಗರ್ ತೋರಿಸಿದ ಘಟನೆಗೆ ಸಂಬಂಧಪಟ್ಟಂತೆ ನಟ ಪ್ರಥಮ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಆದ್ರೆ ಈ ಸಮಾರಾ ಅಷ್ಟಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಡಿ ಕಂಪನಿ (D company) ಕುರಿತು ಪ್ರಥಮ್ ಜರಿದಿದ್ದಾರೆ. ಈ ಬಗ್ಗೆ ಪ್ರಥಮ್ ಸೆಲ್ಫಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಹೌದು ದರ್ಶನ್ ಅಭಿಮಾನಿಗಳ ವಿರುದ್ಧ ಮತ್ತೆ ನಟ ಪ್ರಥಮ್ ಸಿಡಿದೆದ್ದಿದ್ದಾರೆ. ಪ್ರಥಮ್ ಕಂಪ್ಲೇಂಟ್ ಕೊಟ್ಟಿರೋದು ಕೇವಲ ಚಿಪ್ಸ್, ಪಪ್ಪು ಗಲಾಟೆ ಎಂದಿದ್ದ ದರ್ಶನ್ ಫ್ಯಾನ್ಸ್‌ಗೆ ಪ್ರಥಮ್ ವಿಡಿಯೋ ಪೋಸ್ಟ್ ಮಾಡುವ ಮೂಲಕ ಮತ್ತೆ ಖಡಕ್ ಕೌಂಟರ್ ಕೊಟ್ಟಿದ್ದಾರೆ . ನಾನು ಚಿಪ್ಸ್, ಪಪ್ಪು ತಿನ್ನೋದೆ ಇಲ್ಲ ಅದಕ್ಕೆ ನಾನು ಇಷ್ಟು ಸುಂದರವಾಗಿರೊದು ಎಂದಿದ್ದಾರೆ.

ಅಷ್ಟೇ ಅಲ್ಲ ಈ ರೀತಿಯಾಗಿ ಏನೇನೋ ಪೋಸ್ಟ್ ಮಾಡುವ, ಏನೇನೋ ಸುದ್ದಿ ಹಬ್ಬಿಸುವ ಡಿ ಕಂಪನಿ ವಿರುದ್ಧ ಕಿಡಿಕಾರಿದ್ದಾರೆ.. ಡಿ ಕಂಪನಿ ಅಂದ್ರೆ ಡುಬಾಕ್ ಕಂಪನಿ..ದಗಲ್ಬಾಜಿ ಕಂಪನಿ ಎಂದು ವಾಗ್ದಾಳಿ ನಡೆಸಿರುವ ಪ್ರಥಮ್, ನಟ ದರ್ಶನ್ ಫ್ಯಾನ್ಸ್‌ಗೆ ಶಿಕ್ಷಣ ಭಾಗ್ಯ ಕೊಡಿಸುವಂತೆ ಸರ್ಕಾರಕ್ಕೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.