ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ತೆಲುಗು ಸ್ಟಾರ್ ನಟ ನಾಗಚೈತನ್ಯಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.
ಹೈದರಾಬಾದ್ ನ ಜ್ಯೂಬಿಲಿ ಹಿಲ್ಸ್ ಬಳಿ ಟೆಂಟೆಡ್ ಗ್ಲಾಸ್ ಹಾಕಿದ ಟಯೋಟಾ ವೆಲ್ಲಿ ಫೈರ್ ನಲ್ಲಿ ಪ್ರಯಾಣಿಸುತ್ತಿದ್ದರು. ಟಿಂಟೆಡ್ ಗ್ಲಾಸ್ ಹಾಕಬಾರದು ಎಂಬ ನಿಯಮ ಇದ್ದರೂ ಈ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.

ಸಂಚಾರಿ ಪೊಲೀಸರಿಗೆ ಸ್ಥಳದಲ್ಲೇ 715 ರೂ. ದಂಡ ಪಾವತಿಸಿದ ನಟ ನಾಗಚೈತನ್ಯ ಕೂಡಲೇ ಕಪ್ಪು ಗಾಜನ್ನು ತೆಗೆಸುವುದಾಗಿ ಭರವಸೆ ನೀಡಿದ್ಧಾರೆ.
ನಟ ನಾಗಾರ್ಜುನ ಪುತ್ರ ನಾಗಚೈತನ್ಯ ಹಲವಾರು ತೆಲುಗು ಚಿತ್ರಗಳಲ್ಲಿ ನಟಿಸಿದ್ದು, ಆಮಿರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಲಿದ್ದಾರೆ.