ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಈಗಾಗಲೇ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಉದ್ಯಮಿ ಸುಖೇಶ್ ಚಂದ್ರ ಶೇಖರ್, ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ಗೆ ನೀಡಿದ್ದ 7 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಯನ್ನು ಈಡಿ ಜಪ್ತಿ ಮಾಡಿದೆ.
ನಟಿಗೆ ನೀಡಿದ್ದ ಉಡುಗೊರೆ ಹಾಗು ಆಸ್ತಿ ಅಪರಾಧ ಹಿನ್ನೆಲೆಯಿಂದ ಸಂಪಾದಿಸಿದ್ದ ಕಾರಣ ಜಪ್ತಿ ಮಾಡಲಾಗಿದೆ ಎಂದು ಈಡಿ ತಿಳಿಸಿದೆ.
ಈಗಾಗಲೇ ಈ ಕುರಿತು ನಟಿ ಜಾಕ್ವಲಿನ್ ಫರ್ನಾಂಡಿಸ್ ಹಾಗು ನೋರಾ ಫತೇಹಿ ತಮ್ಮ ಹೇಳಿಕೆಗಳನ್ನು ನೀಡಿದ್ದು, ನ್ಯಾಯಾಲಯಕ್ಕೆ ಈಡಿ ಚಾರ್ಜ್ಶೀಟ್ ಸಲ್ಲಿಸಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಸುಖೇಶ್ ಆಪ್ತ ಪಿಂಕಿಯನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.
ಸುಖೇಶ್ ಬಾಲಿವುಡ್ನ ಹಲವು ಸೆಲೆಬ್ರಿಟಿ ಹಾಗು ಮಾಡೆಲ್ಗಳಿಗೆ 20 ಕೋಟಿ ಮೌಲ್ಯದ ಉಡುಗೊರೆಗಳನ್ನು ನೀಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಕೆಲವರು ಈತನಿಂದ ಉಡುಗೊರೆಯನ್ನು ಪಡೆಯಲು ನಿರಾಕರಿಸಿದ್ದರೆಂದು ವಿಚಾರಣೆಯ ವೇಳೆ ತಿಳಿದು ಬಂದಿದೆ.