ತಮಿಳಿನ ಸ್ಟಾರ್ ನಟ ಧನುಷ್ (Dhanush) ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಐಶ್ವರ್ಯಾ (Aishwarya) ಅಂತಿಮವಾಗಿ ತಮ್ಮ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಕಳೆದ 2 ವರ್ಷದ ಹಿಂದೆಯೇ ವಿಚ್ಛೇದನಕ್ಕಾಗಿ (Divorce) ಈ ಜೋಡಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ.27 ರಂದು ನ್ಯಾಯಾಲಯ ಈ ಜೋಡಿಗೆ ವಿಚ್ಛೇದನ ಮಂಜೂರು ಮಾಡಿದೆ.

ಐಶ್ವರ್ಯಾ ರಜನಿಕಾಂತ್ (Aishwarya rajanikanth) ಮತ್ತು ನಟ ಧನುಷ್ ಪರಸ್ಪರ ಪ್ರೀತಿಸಿ 2004ರಲ್ಲಿ ಖುಷಿಯಿಂದ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬಹುತೇಕ 18 ವರ್ಷಗಳ ಸುದೀರ್ಘ ದಾಂಪತ್ಯದ ನಂತರ 2022ರಲ್ಲಿ ಈ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ತಿಳಿದು ಬಂದಿತ್ತು.
ಆ ನಂತರದಲ್ಲಿ ಇಬ್ಬರ ನಡುವೆ ಅಸಮಾಧಾನ ಬಹಿರಂಗಗೊಂಡು, 2 ವರ್ಷಗಳ ಹಿಂದೆ ಅಂದ್ರೆ 2022 ರಲ್ಲಿ ಇಬ್ಬರೂ ವಿಚ್ಛೇದನಕ್ಕಾಗಿ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಅವರಿಗೆ ಕೋರ್ಟ್ ವಿಚ್ಛೇದನ ನೀಡಿದೆ.