ನಟ ದರ್ಶನ್ ಹುಟ್ಟುಹಬ್ಬದ ಹಿನ್ನಲೆ ಅವರ ಅಭಿನಯದ, ದರ್ಶನ್ ವೃತ್ತಿಜೀವನದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ ನಮ್ಮ ಪ್ರೀತಿಯ ರಾಮು, ಫೆಬ್ರವರಿ 14 ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ. ದರ್ಶನ್ ಅವರ ಕಾಟೇರ ಸಿನಿಮಾದ ನಂತರ ಇನ್ಯಾವುದೇ ಸಿನಿಮಾ ರಿಲೀಸ್ ಆಗದ ಕಾರಣ ಬರ್ತ್ ಡೇ ಪ್ರಯುಕ್ತ ಈಗ ನಮ್ಮ ಪ್ರೀತಿಯ ರಾಮು ರಿಲೀಸ್ ಮಾಡಲಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka swamy) ನಟ ದರ್ಶನ್ (Darshan) ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದು, ಅವರು ಜೈಲಿನಲ್ಲಿದ್ದ ವೇಳೆ ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾ ಕರಿಯಾ ರೀ ರಿಲೀಸ್ ಆಗಿತ್ತು. ಕರಿಯಾ (Kariya) ಸಿನಿಮಾವನ್ನು ರಾಜ್ಯಾದ್ಯಂತ ಥಿಯೇಟರ್ ಗಳಲ್ಲಿ ರೀ ರಿಲೀಸ್ ಆಗಿತ್ತು.
ಜೋಗಿ ಪ್ರೇಮ್ (Jogi prem) ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಬಂದ ಕರಿಯಾ ಬಿಡುಗಡೆಯಾಗಿ 20 ವರ್ಷ ಕಂಪ್ಲೇಟ್ ಆದ ಹಿನ್ನಲೆ ಚಿತ್ರವನ್ನು ಮರು ಬಿಡುಗಡೆ ಮಾಡಲಾಗಿತ್ತು. ಪ್ರಸನ್ನ ಥಿಯೇಟರ್‌ನಲ್ಲಿ ಫ್ಯಾನ್ಸ್ ಶೋ ಕೂಡ ಆಯೋಜಿಸಲಾಗಿತ್ತು.
ಕರಿಯಾ ಸಿನಿಮಾಗೆ ದೊಡ್ಡ ಕ್ರೇಜ್ ಇದೆ. ಅದೇ ರೀತಿ ನಮ್ಮ ಪ್ರೀತಿಯ ರಾಮು ಸಿನಿಮಾ ಕೂಡ ಅಭಿಮಾನಿಗಳ ನೆಚ್ಚಿನ ಸಿನಿಮಾ. ಹೀಗಾಗಿ ಈಗ ಈ ಸಿನಿಮಾವನ್ನು ರೀ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ.