
ಚಿತ್ರದುರ್ಗ: ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ನಟ ದರ್ಶನ್ ಅಂಡ್ ಟೀಂನಿಂದ ಹತ್ಯೆಗೊಳಗಾಗಿದ್ದ ಚಿತ್ರದುರ್ಗದ ರೇಣುಕಸ್ವಾಮಿ ಪುತ್ರನಿಗೆ ಇಂದು ನಾಮಕರಣದ ಶಾಸ್ತ್ರ ಮಾಡಲಾಗ್ತಿದೆ. ದುಃಖದಲ್ಲಿದ್ದ ರೇಣುಕಾಸ್ವಾಮಿ ಕುಟುಂಬದಲ್ಲಿ ಇಂದು ಸಂಭ್ರಮದ ವಾತಾವರಣ ಮನೆ ಮಾಡಿದೆ.
ಮಗನ ಸಾವಿನ 9 ತಿಂಗಳ ಬಳಿಕ ಮನೆಯಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ನಗರದ VRS ಬಡಾವಣೆಯ ನಿವಾಸದಲ್ಲಿ ನಾಮಕರಣ ಶಾಸ್ತ್ರ ನೆರವೇರಿಸಲಾಗಿದೆ. ಮಗುವಿಗೆ 5 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ನಾಮಕರಣ ಶಾಸ್ತ್ರ ಮಾಡಲು ಸಿದ್ಧತೆ ನಡೆದಿದೆ.

ಮಗನ ಸಾವಿನ ಬಳಿಕ ಮೊಮ್ಮಗನ ಶುಭ ಸಮಾರಂಭಕ್ಕೆ ರೇಣುಕಾಸ್ವಾಮಿ ತಂದೆ ತಾಯಿ ಸಂತಸದಲ್ಲಿದ್ದಾರೆ. ಮನೆ ಬಾಗಿಲಿಗೆ ಸ್ವತಃ ಹೂವಿನ ತೋರಣ ಕಟ್ಟಿದ್ದಾರೆ ಕಾಶೀನಾಥ ಶಿವನಗೌಡ್ರು. ಮೊಮ್ಮಗನ ತೊಟ್ಟಿಲು ಶಾಸ್ತ್ರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ ಸ್ವಾಮಿ ತಾಯಿ ರತ್ನಪ್ರಭ.
ದಾವಣಗೆರೆ ಜಿಲ್ಲೆ ಹರಿಹರದಲ್ಲಿರುವ ರೇಣುಕಾಸ್ವಾಮಿ ಪತ್ನಿ ಸಹನಾ ಹಾಗು ಮಗು. ಹೆರಿಗೆ ಬಳಿಕ ತವರು ಮನೆಯಲ್ಲಿ ಸಹನಾ ಹಾಗು ಮಗುವಿಗೆ ಹಾರೈಕೆ ಮಾಡಲಾಗ್ತಿದೆ. ತೊಟ್ಟಿಲು ಶಾಸ್ತ್ರ, ನಾಮಕರಣಕ್ಕೆ ಆಗಮಿಸುತ್ತಿದ್ದಾರೆ ತಾಯಿ ಸಹನಾ ಹಾಗು ರೇಣುಕಾಸವಾಮಿ ಮಗು. ಮೊಮ್ಮಗ – ಸೊಸೆಯನ್ನು ಮನೆ ತುಂಬಿಸಿಕೊಳ್ಳಲು ಕುಟುಂಬಸ್ಥರು ಸಡಗರದಲ್ಲಿ ಇದ್ದಾರೆ.

====================