
ಮೈಸೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಪಡೆದ ನಂತರ ಜಾಮೀನು ಪಡೆದು ಕಳೆದವಾರ ವಷ್ಟೇ ಮೈಸೂರಿಗೆ ದರ್ಶನ್ ಆಗಮಿಸಿದ್ದರು. ಇವತ್ತು ಕಾಮಾಕ್ಷಿ ಆಸ್ಪತ್ರೆಯಲ್ಲಿ ದರ್ಶನ್‌ಗೆ ತಪಾಸಣೆ ಮುಕ್ತಾಯವಾಗಿದ್ದು, ಕೇವಲ ಎಕ್ಸ್ ರೇ ತೆಗೆಸಿಕೊಂಡು ಆಸ್ಪತ್ರೆಯಿಂದ ತೆರಳಿದ್ದಾರೆ.

ಆಸ್ಪತ್ರೆಯಿಂದ ಫಾರ್ಮ್ ಹೌಸ್ ಕಡೆಗೆ ಹೊರಟ ಆರೋಪಿ ದರ್ಶನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.ದರ್ಶನ್ ಆಸ್ಪತ್ರೆಗೆ ಬರುವ ವಿಚಾರ ತಿಳಿದ ಹಿನ್ನೆಲೆ ಆಸ್ಪತ್ರೆ ಆವರಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೆಂಬಲಿಗರು ಜಮಾವಣೆಗೊಂಡಿದ್ದರು. ಕೇವಲ 15 ನಿಮಿಷದಲ್ಲಿ ತಪಾಸಣೆ ಮುಗಿಸಿಕೊಂಡು ದರ್ಶನ್ ಹೊರಟಿದ್ದಾರೆ. ಫಿಸಿಯೋಥೇರೇಪಿಗಾಗಿ ಮತ್ತೆ ದರ್ಶನ್ ಆಸ್ಪತ್ರೆಗೆ ಬರುವ ಸಾಧ್ಯತೆ ಇದೆ.