ಕನ್ನಡ ಚಿತ್ರರಂಗದಲ್ಲಿ (Kannada film industry) ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಮತ್ತು ನಟ ದರ್ಶನ್ (Actor darshan) ನಡುವಿನ ಒಡನಾಟ ಹೊಸದೇನಲ್ಲ. ಥೇಟ್ ಒಂದೇ ಕುಟುಂಬದ ಸದಸ್ಯರಷ್ಟು ಆತ್ಮೀಯವಾಗಿ ದರ್ಶನ್, ಸುಮಲತಾ ಅಂಬರೆಶ್ ಮತ್ತು ಅಭಿಷೇಕ್ ಅಂಬರೀಶ್ ಅವರ ಜೊತೆ ಬರೆಯುತ್ತಿದ್ದರು. ಆದ್ರೆ ಈಗ ಅಂಬಿ ಕುಟುಂಬದಿಂದ ದರ್ಶನ್ ದೂರ.. ದೂರ ಎಂಬ ಸೂಚನೆ ಸಿಕ್ಕಂತಿದೆ.

ಹೌದು ಮಾಜಿ ಸಂಸದೆ ಸುಮಲತಾ (Sumalatha) & ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ದೊಡ್ಡ ಮಧ್ಯೆ ಬಿರುಕು ಮೂಡಿದಂತೆ ಕಾಣುತ್ತಿದ್ದೆ. ಈ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾ ದಲ್ಲಿ ನಟ ದರ್ಶನ್ ಅಭಿಮಾನಿಗಳು ಚರ್ಚೆ ಆರಂಭಿಸಿದ್ದು, ದರ್ಶನ್ ರ ನಡೆ ಈ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಇದಕ್ಕೆ ಕಾರಣ, ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಟ ದರ್ಶನ್ ಸುಮಲತಾ ಅಂಬರೀಶ್‌ರನ್ನ ಅನ್‌ಫಾಲೋ ಮಾಡಿರುವ ಬೆಳವಣಿಗೆ.ನಟ ದರ್ಶನ್ ತಾವು ಸಂಕಷ್ಟದಲ್ಲಿದ್ದಾಗ ತನ್ನ ಆಪ್ತರು ಜೊತೆಗಿರದ ಕಾರಣ ಇದೀಗ ಎಲ್ಲರಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಒಂದು ಕಾಲದಲ್ಲಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ರನ್ನ ಗೆಲ್ಲಿಸಲು ಟೊಂಕ ಕಟ್ಟಿ ನಿಂತ ದರ್ಶನ್ ಇದೀಗ ಈ ರೀತಿ ಅನ್ ಫಾಲೋ ಮಾಡಿರುವುದು ಇಬ್ಬರ ನಡುವೆ ವೈಮನಸ್ಸು ಮೂಡಿರುವ ಸ್ಪಷ್ಟ ಸೂಚನೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.