ಸದ್ಯ ಕನ್ನಡ ಚಿತ್ರರಂಗದಲ್ಲಿ (Sandalwood) ಕೆಲ ಸೆಲೆಬ್ರಿಟಿಗಳು V/S ನಟ ದರ್ಶನ್ ಫ್ಯಾನ್ಸ್ (Darshan fans) ನಡುವೆ ಸೋಶಿಯಲ್ ಮೀಡಿಯಾ (Social media) ವಾರ್ ಜೋರಾದ ಹಿನ್ನಲೆ ಈ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಈ ಮಧ್ಯೆ ಯಾವುದಕ್ಕೂ ಪ್ರತಿಕ್ರಿಯಿಸದ ನಟ ದರ್ಶನ್ ಪತ್ನಿ ಜೊತೆ ಟೆಂಪಲ್ ರನ್ ಶುರು ಮಾಡಿದ್ದಾರೆ.

ಈ ಹಿಂದೆ ಇದೇ ರೇಣುಕಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾಗ, ಪತಿಯನ್ನು ಕರೆತರಲು ಹೋರಾಟ ಮಾಡ್ತಿದ್ದ ಪತ್ನಿ ವಿಜಯಲಕ್ಷ್ಮೀ, ಅಸ್ಸಾಂನಲ್ಲಿರೋ ಕಾಮಾಕ್ಯ ತಾಯಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದರು. ತಮ್ಮ ಪತಿ ದರ್ಶನ್ ರ ಶೀಘ್ರ ಬಿಡುಗಡೆಗಾಗಿ ಹರಕೆ ಹೊತ್ತುಕೊಂಡಿದ್ದರು.

ಅಂದು ವಿಜಯಲಕ್ಷ್ಮೀ ಮಾಡಿದ್ದ ಪಾರ್ಥನೆ ಫಲಿಸಿತೋ ಏನೋ, ದರ್ಶನ್‌ಗೆ ಬೇಲ್ ಕೂಡ ಸಿಕ್ಕಿತ್ತು.ಹೀಗಾಗಿ ಹರಕೆ ಈಡೇರಿದ ಕಾರಣ ಪೂಜೆ ಸಲ್ಲಿಸಲು ದರ್ಶನ್ ದಂಪತಿ ಟೆಂಪಲ್ ಮತ್ತೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಆರೋಪಿ ದರ್ಶನ್ ಬೇಲ್ ರದ್ದು ಕೋರಿ ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
ಈ ಅರ್ಜಿ ವಿಚಾರಣೆ ಈಗಾಗಲೇ ಮುಕ್ತಾಯವಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಈ ಬೆಳವಣಿಗೆ ಕೂಡ ನಟ ದರ್ಶನ್ ರ ಟೆನ್ಷನ್ ಹೆಚ್ಚಾಗುವಂತೆ ಮಾಡಿದೆ. ಈ ನಡುವೆ ತಾವು ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಲು ವಿಜಯಲಕ್ಷ್ಮಿ ಮತ್ತು ದರ್ಶನ್ ಅಸ್ಸಾಂನ ಕಾಮಾಕ್ಯ ದೇವಿಯ ಸನ್ನಿಧಿಗೆ ಭೇಟಿ ನೀಡಿ ಹರಕೆ ಈಡೇರಿಸಿದ್ದಾರೆ.