ನ್ಯಾಯಾಧೀಶರ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿ ಬಂಧನಕ್ಕೊಳಗಾಗಿದ್ದ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾಗೆ 32ನೇ ACMM ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಈ ಕುರಿತು ಫೆಬ್ರವರಿ 23ರಂದು ವಿಚಾರಣೆ ನಡೆಸಿದ ನ್ಯಾಯಾಲಯ ಫೆಬ್ರವರಿ 25ಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ವಿಚಾರಣೆ ಪುನಾರಂಭಿಸಿದ ನ್ಯಾಯಾಲಯ ಅವರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ನಟ ಚೇತನ್ ಪರ ಹಿರಿಯ ನ್ಯಾಯವಾಧಿ ಬಾಲನ್‌ರವರು ಚೇತನ್ ಪರ ವಾದ ಮಂಡಿಸಿದರು. 1 ಲಕ್ಷರೂಪಾಯಿ ಮೌಲ್ಯದ Bond ಹಾಗೂ ಇಬ್ಬರ Surety ಪಡೆಯಲಾಗಿದೆ.
ಪ್ರಕರಣದ ಹಿನ್ನೆಲೆ
ಇತ್ತೀಚಿಗೆ ಹಿಜಾಬ್ ಪ್ರಕರಣವನ್ನ ಆಲಿಸುತ್ತಿರುವ ನ್ಯಾಯಾಧೀಶರ ಬಗ್ಗೆ ತಮ್ಮ Twitter ಖಾತೆಯಲ್ಲಿ ಅವಹೇಳನಕಾರಿ ಹಾಗೂ ವಿವಾದಾತ್ಮಕ ಬರಹವನ್ನು ಬರೆದು ಪೋಸ್ಟ್ ಮಾಡಿದ್ದರು ಎಂದು ದೂರು ದಾಖಲಾಗಿದ್ದ ಕಾರಣ ಪೊಲೀಸರು ಅವರನ್ನು ಬಂಧಿಸಿದ್ದರು.