ಪುಷ್ಪಾ 2 ಸಿನಿಮಾ ಪ್ರೀ ರಿಲೀಸ್ ಈವೆಂಟ್ ವೇಳೆ ಕಾಲ್ತುಳಿತ ಸಂಭವಿಸಿತ್ತು. ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿ ರೇವತಿ ಎಂಬಾಕೆ ಸಾವನ್ನಪ್ಪಿದ್ದರು. ಅಭಿಮಾನಿ ಸಾವಿನ ಬಳಿಕ ನಟ ಅಲ್ಲು ಅರ್ಜುನ್ ಬಂಧನ ಮಾಡಲಾಗಿತ್ತು. ಕಳೆದ ಶುಕ್ರವಾರ (ಡಿಸೆಂಬರ್ 13) ಬಂಧನ ಮಾಡಿದ ಬಳಿಕ ಹೈಕೋರ್ಟ್ನಲ್ಲಿ ಬೇಲ್ ಕೂಡ ಆಗಿತ್ತು. ಆದರೆ ಅದಕ್ಕೂ ಮುನ್ನ ನ್ಯಾಂಪಲ್ಲಿ ಕೋರ್ಟ್ ನಟ ಅಲ್ಲು ಅರ್ಜುನ್ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಹೈಕೋರ್ಟ್ ಆದೇಶ ಪ್ರತಿ ಸರಿಯಾದ ಸಮಯಕ್ಕೆ ಜೈಲು ಅಧಿಕಾರಿಗಳಿಗೆ ತಲುಪದ ಕಾರಣಕ್ಕೆ ಒಂದು ರಾತ್ರಿ ಜೈಲಿನಲ್ಲೇ ಕಳೆಯಬೇಕಾಯ್ತು. ನಂತರ ಶನಿವಾರ ಮುಂಜಾನೆ ಜೈಲಿನಿಂದ ರಿಲೀಸ್ ಆಗಿದ್ದರು. ಆ ನಂತರ ಅಲ್ಲು ಅರ್ಜುನ್ ನಿವಾಸಕ್ಕೆ ಭೇಟಿ ನೀಡಿದ್ದ ರಾಜಕಾರಣಿಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಎಲ್ಲಾ ಟೀಕೆಗಳಿಗೆ ತೆಲಂಗಾಣ ಸಿಎಂ ರೇವಂತ ರೆಡ್ಡಿ ಖಡಕ್ ಉತ್ತರ ಕೊಟ್ಟಿದ್ದಾರೆ.
ಡಿಸೆಂಬರ್ 04ರಂದು ಅಲ್ಲು ಅರ್ಜುನ್ ಸಿನಿಮಾ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಆದರೆ ಪೊಲೀಸರು ಭದ್ರತಾ ದೃಷ್ಟಿಯಿಂದ ಅನುಮತಿ ನಿರಾಕರಿಸಿದ್ದರು. ಆದರೂ ಅಲ್ಲು ಅರ್ಜುನ್ ಸಂಧ್ಯಾ ಥಿಯೇಟರ್ನಲ್ಲಿ ಭಾಗಿಯಾಗಿದ್ದರು. ಅಬಿಮಾನಿಯೊಬ್ಬರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ ವಿಚಾರ ತಿಳಿದರೂ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪೊಲೀಸರು ಒತ್ತಾಯ ಪೂರ್ವಕವಾಗಿ ಅಲ್ಲಿಂದ ಕಳುಹಿಸಬೇಕಾಯ್ತು ಎಂದಿದ್ದಾರೆ. ಪೊಲೀಸರ ಅನುಮತಿ ಇಲ್ಲದೆ ಕಾರಿನಲ್ಲಿ ರೋಡ್ ಶೋ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿರುವ ಸಿಎಂ ರೇವಂತ್ ರೆಡ್ಡಿ, ಯಾವಾಗ ಅಲ್ಲು ಅರ್ಜುನ್ ರೋಡ್ ಶೋ ಶುರುವಾಯ್ತೋ ಆಗ ಸಾವಿರಾರು ಸಂಖ್ಯೆಯ ಜನರು ಜಮಾಹಿಸಿದ್ರು. ಆಗ ದುರ್ಘಟನೆ ನಡೀತು. ಇದರಲ್ಲಿ ತಪ್ಪು ಯಾರದ್ದು ಎಂದು ಪ್ರಶ್ನಿಸಿದ್ದಾರೆ.
AIMIM ಶಾಸಕ ಅಕ್ಬರುದ್ಧೀನ್ ಓವೈಸಿ ಸದನದಲ್ಲಿ ಪ್ರಶ್ನೆ ಕೇಳಿದಾಗ ಉತ್ತರ ಕೊಟ್ಟಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಸಂಧ್ಯಾ ಥಿಯೇಟರ್ ಆಡಲಿತ ಮಂಡಳಿ ಡಿಸೆಂಬರ್ 2ರಂದು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಆ ಪ್ರದೇಶದಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಅನುಮತಿ ನಿರಾಕರಿಸಲಾಗಿತ್ತು ಎಂದಿದ್ದಾರೆ. ಆದರೂ ಅಲ್ಲು ಅರ್ಜುನ್ ಸನ್ ರೂಫ್ ಓಪನ್ ಮಾಡಿಕೊಂಡು ಜನರತ್ತ ಕೈಬೀಸುತ್ತಾ ಥಿಯೇಟರ್ಗೆ ಎಂಟ್ರಿ ಆಗಿದ್ದರು. ಕಾಲ್ತುಳಿತ ಘಟನೆ ನಡೆದರೂ ಪ್ರೀ ರಿಲೀಸ್ ಈವೆಂಟ್ನಲ್ಲಿ ಅಲ್ಲು ಅರ್ಜುನ್ ಭಾಗಿಯಾಗಿದ್ದರು ಎಂದಿದ್ದಾರೆ. ಅದೇ ಕಾರಣಕ್ಕೆ FIR ದಾಖಲಾಗಿತ್ತು. ಪೊಲೀಸ್ರು ಕಾನೂನು ಕ್ರಮ ತೆಗೆದಿಉಕೊಂಡಿದ್ದಾರೆ. ಇದರಲ್ಲಿ ತಪ್ಪೇನು ಎಂದಿದ್ದಾರೆ.
ಇನ್ನು ಕಾಲಿವುಡ್ ( ತೆಲುಗು ಸಿನಿಮಾ) ಮಂದಿ ಅಲ್ಲು ಅರ್ಜುನ್ ಬಂಧನದ ಬಗ್ಗೆ ಭಾರೀ ಅನುಕಂಪ ತೋರಿಸಿದ್ದಾರೆ. ಅಲ್ಲು ಅರ್ಜುನ್ ನಿವಾಸಕ್ಕೆ ಭೇಟಿ ನೀಡಿ, ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ. ಆದರೆ ಆ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿರುವ ಬಗ್ಗೆ ಯಾರಿಗಾದರೂ ಅನುಕಂಪ ಇದ್ಯಾ..? ಎಂದು ಪ್ರಶ್ನಿಸಿದ್ದಾರೆ. ಯಾರಾದರೂ ಆ ಮಹಿಳೆ ಕುಟುಂಬಕ್ಕೆ ಸಾಂತ್ವನ ಹೇಳಿದ್ದೀರಾ..? ಆ ಮಹಿಳೆ ಕುಟುಂಬದ ಬಗ್ಗೆ ನಿಮಗ್ಯಾರಿಗೂ ಅನುಕಂಪ ಇಲ್ಲವೇ..? ಎಂದು ಸಿಎಂ ರೇವಂತ್ ರೆಡ್ಡಿ ಕೇಳಿದ್ದಾರೆ. ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ಸಾವನ್ನಪ್ಪಿದ್ರೆ, ಆಕೆಯ ಮಗ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ಮಾಡುತ್ತಿದ್ದಾನೆ. ಮನುಷತ್ವ ಇಲ್ಲದ ರೀತಿಯಲ್ಲಿ ವರ್ತಿಸಬೇಡಿ ಎಂದಿದ್ದಾರೆ.