ಎರಡು ಹಂತದ ಲೋಕಸಭಾ ಚುನಾವಣೆ (parliment election) ಮತದಾನದ ಪ್ರಕ್ರಿಯೆ ಮುಗಿದಿದೆ. 14ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಬುಟ್ಟಿಯಲ್ಲಿ ಭದ್ರವಾಗಿದೆ.. ಈ ಮಧ್ಯಯೇ ದೇಶದ ಚುನಾವಣೆಗೆ ಬಾಜಿ (betting) ಕಟ್ಟುವವರ ಸಂಖ್ಯೆ ಜೋರಾಗಿದೆ.
ಅದ್ರಲ್ಲೂ ಆಂಧ್ರ (andhra) ಹಾಗೂ ತಮಿಳುನಾಡು (Tamil nadu) ಗಡಿ ಭಾಗದಲ್ಲಿ ಚುನಾವಣೆಯ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಐಪಿಎಲ್ ನಲ್ಲಿ (ipl) ವೆಬ್ಸೈಟ್ನಲ್ಲಿ ಬೆಟ್ಟಿಂಗ್ ಕಟ್ಟಿದ್ರೆ, ಚುನಾವಣೆ ಬೆಟ್ಟಿಂಗ್ ಮಾತ್ರ ಸಖತ್ ಡಿಫರೆಂಟ್ (Different) ಆಗರಲಿದೆ.ಎರಡು ಪಕ್ಷಗಳ ಕಾರ್ಯಕರ್ತರು ನಡುವೆ ನೇರಾನೇರ ಬೆಟ್ಟಿಂಗ್ ಕಟ್ಟಿಕೊಳ್ತಾರೆ.
ಬೆಟ್ಟಿಂಗ್ನಲ್ಲಿ ಕೇವಲ ಹಣವಷ್ಟೇ ಅಲ್ಲಾ, ಹಣ, ಬೈಕ್ (Bike), ಕಾರ್(car), ಕುರಿ, ಕೋಳಿ, ಮೇಕೆ, ಹಸು, ಜೊತೆಗೆ ಬೆಲೆಬಾಳುವ ಭೂಮಿಯನ್ನು ಕೂಡಾ ಪಣಕ್ಕಿಡ್ತಾರೆ. ಚುಣಾವಣೆಗೆ ಮುನ್ನವೇ ಅಭ್ಯರ್ಥಿಗಳ ಪರವಾದ ಟ್ರೆಂಡ್ (Trend) ನೋಡಿ ಬೆಟ್ಟಿಂಗ್ ಕಟ್ಟಲಾಗಿತ್ತಂತೆ. ಆದರೆ ಈಗ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ನಂತರ ಯಾರು ಗೆಲ್ಲಬಹುದು ಅನ್ನೋ ಒಂದು ಲೆಕ್ಕಾಚಾರ ಸಿಕ್ಕಿದ್ದು, ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ದುಪ್ಪಾಟ್ಟಾಗಿದೆ ಎನ್ನಲಾಗ್ತಿದೆ.