ಮರಾಠಿ ಸಿನಿಮಾಗಳ (Marati cinema) ಮೂಲಕ ಮನೆ ಮಾತಾಗಿರುವ ನಟಿ ಸಾಯಿ ತಮ್ಹಂಕರ್ (Actress sayi tamanhkar) ಇದೀಗ ಕಾಸ್ಟಿಂಗ್ ಕೌಚ್ (Casting couch) ಬಗ್ಗೆ ಮೌನ ಮುರಿದಿದ್ದಾರೆ. ಸಿನಿಮಾ ಆಫರ್ ನೀಡಿ ನಿರ್ಮಾಪಕರ ಜೊತೆ ಮಲಗಲು ಹೇಳ್ತಾರೆ ಅಂತಾ ತಮಗಾದ ಕರಾಳ ಅನುಭವವನ್ನ ಬಿಚ್ಚಿಟ್ಟಿದ್ದಾರೆ.
ನನಗೆ ಚಿತ್ರತಂಡವೊಂದರಿಂದ ಕರೆ ಬಂದಿತ್ತು. ನಮ್ಮ ಚಿತ್ರಕ್ಕೆ ನೀವೇ ನಾಯಕಿ ಎಂದು ಹೇಳಿದರು. ಬಳಿಕ ಕತೆ ಬಗ್ಗೆ ವಿಚಾರಿಸಿದಾಗ ಇದಕ್ಕೂ ಮುನ್ನ ಒಮ್ಮೆ ನೀವು ನಿರ್ಮಾಪಕರ ಜೊತೆ ಮಲಗಬೇಕು ಎಂದರು. ನೀವಾಗಿರುವ ಕಾರಣ ಹೀರೋ ಜೊತೆ ಮಲಗಿ ಎಂದು ನಾನು ಹೇಳಲ್ಲ ಅಂದ್ರು ಅಂತಾ ಕರಾಳ ಅನುಭವವನ್ನ ಬಿಚ್ಚಿಟ್ಟಿದ್ದಾರೆ.
ಅವರ ಆಫರ್ ನನ್ನನ್ನು ಕೆರಳಿಸಿತ್ತು. ಕೊಡಲೇ ನಿಮ್ಮ ತಾಯಿಯನ್ನು ಅವರ ಜೊತೆ ಮಲಗಿಸಿ ಅಂತಾ ಬೈದು ಕಾಲ್ ಕಟ್ ಮಾಡಿದೆ. ಅಂತಾ ಸಂದರ್ಶನವೊಂದರಲ್ಲಿ ನಟಿ ಸಾಯಿ ತಮ್ಹಂಕರ್ ಹೇಳಿದ್ದಾರೆ. ಆ ಮೂಲಕ ಮತ್ತೋರ್ವ ನಾಯಕಿ ಈ ಬಗ್ಗೆ ದಿಟ್ಟವಾಗಿ ಮಾತನಾಡಿದ್ದಾರೆ.