ಗೆಲುವಿನ ನಿರೀಕ್ಷೆಯಲ್ಲಿದ್ದ ಪ್ರಜ್ವಲ್ ಗೆ (Prajwal revanna) ಆಘಾತ ಎದುರಾಗಿದೆ. ಹಾಸನದಲ್ಲಿ (Hassan) ತಮ್ಮ ಸೋಲಿನ ವಿಚಾರ ತಿಳಿದು ಪ್ರಜ್ವಲ್ ಬೇಸರಗೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಎಸ್ಐಟಿ (SIT) ಕಚೇರಿಯಲ್ಲಿ ಮೌನಕ್ಕೆ ಜಾರಿದ ಪ್ರಜ್ವಲ್, ಯೋಚನೆಗೆ ಜಾರಿದ್ದಾರೆ ಎನ್ನಲಾಗಿದೆ.ಚುನಾವಣೆಗೆ ಕೆಲ ದಿನ ಇರುವಂತೆಯೇ ಪೆನ್ ಡ್ರೈವ್ (Pen drive) ಹಂಚಿಕೆಯಾದ್ರೂ, ಹಾಸನದಲ್ಲಿ ಗೆಲ್ಲುವ ನಿರೀಕ್ಷೆ ಇಟ್ಕೊಂಡಿದ್ದ ಪ್ರಜ್ವಲ್ ರೇವಣ್ಣ, ಗೆದ್ದರೆ ಪ್ರಕರಣದಿಂದ ಪಾರಾಗುವ ಸಾಧ್ಯತೆಯ ಬಗ್ಗೆ ಭರವಸೆ ಇಟ್ಕೊಂಡಿದ್ದರು.
ಆದ್ರೆ ಇದೀಗ ಚುನಾವಣೆ ಫಲಿತಾಂಶ ತಿಳಿದ ಬಳಿಕ ಪ್ರಜ್ವಲ್ ಸೈಲೆಂಟ್ ಆಗಿದ್ದರೆ. ನೀವು ಹಾಸನದಲ್ಲಿ ಸೋತಿದ್ದೀರಿ ಎಂದು ಫಲಿತಾಂಶದ ಬಗ್ಗೆ ಪ್ರಜ್ವಲ್ ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆನಂತರ ಬೇಸರದಿಂದ ಸೈಲೆಂಟ್ ಆದ ಪ್ರಜ್ವಲ್ ರೇವಣ್ಣ, ಮೌನವಾಗಿ ಸುಮ್ಮನೆ ಕುಳಿತುಬಿಟ್ಟರು. ಇದೇ ವೇಳೆ ಪ್ರಜ್ವಲ್ ಲೈಂಗಿಕ ದೌರ್ಜನ್ಯ ಸಂಬಂಧ ಎಸ್ಐಟಿ ತನಿಖೆ ಮುಂದುವರಿಕೆ.











