ಕಿರುತೆರೆ ನಟಿ ವಿಸ್ಮಯಗೌಡ(Vismaya Gowda)ವಿರುದ್ಧ ಹಣ ವಂಚನೆ ಆರೋಪ ಕೇಳಿಬಂದಿದ್ದು, ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಎಫ್‌ಐಆರ್(FIR)ದಾಖಲಾಗಿದೆ. 6.5 ರೂ. ಲಕ್ಷ ಸಾಲ ಪಡೆದು ಹಿಂದಿರುಗಿಸದೇ ವಂಚನೆ ಮಾಡಿದ್ದಾರೆಂದು, ಹಿಮಾನ್ವಿ ಎಂಬ ಮಹಿಳೆ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ವಿಸ್ಮಯಗೌಡ ವಿರುದ್ಧ ಎಫ್‌ಐಆರ್(FIR) ದಾಖಲು ಮಾಡಲಾಗಿದೆ.

ದೂರಿನಲ್ಲಿ ಇರುವುದು ನೋಡುವುದಾದರೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ವಿಸ್ಮಯಗೌಡ, ನಾನೊಬ್ಬ ಫಿಲ್ಮ ಡೈರೆಕ್ಟರ್ ಮತ್ತು ಲೈಫ್ ಕೋಚರ್ ಎಂದು ಹೇಳಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.

2019ರಲ್ಲಿ ವಿಸ್ಮಯಗೌಡ ಪರಿಚಯವಾಗಿತ್ತು. ಲೈಫ್ ಕೋಚ್ ಆಗಿರೋದ್ರಿಂದ ವಿಸ್ಮಯ ಪರಿಚಯ ಮಾಡಿಕೊಂಡಿದ್ದಾರೆ ಮಹಿಳೆ. ವಿಸ್ಮಯಗೌಡಳೊಂದಿಗೆ ಮ್ಯಾನಿಫಸ್ಟೇಷನ್ ಕ್ಲಾಸ್ ತೆಗೆದುಕೊಂಡಿದ್ದೆ ಎಂದು ದೂರುದಾರ ಹೇಳಿಕೊಂಡಿದ್ದಾರೆ.

ದೂರಿನನ್ವಯ ದೂರುದಾರ ಮಹಿಳೆಯಿಂದ ವಿಸ್ಮಯಾಗೌಡ ಸುಮಾರು 6.5 ಲಕ್ಷ ರೂಪಾಯಿ ಹಣವನ್ನ ಸಾಲ ಪಡೆದಿದ್ದಳಂತೆ. ಅನಂತರ ಶ್ಯೂರಿಟಿಗೆ ತನ್ನ ಚೆಕ್ ನೀಡಿದ್ದಳು. ಆದ್ರೆ ಚೆಕ್ ಬ್ಯಾಂಕಿಗೆ ಕೊಟ್ಟಾಗ ಸಹಿ ಸರಿಯಿಲ್ಲ ಎಂದು ರಿಜೆಕ್ಟ್ ಆಗಿತ್ತು. ಅನಂತರ ಹಣ ಕೇಳಿದ್ರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆಯೊಡ್ಡಿದ್ದಾರೆ ಎಂದು ದೂರುದಾರ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಸ್ವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.