ಷ್ಟಾಚಾರ ಆರೋಪ ಹೊಂದಿರುವ ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪಿತ ಏಳು ಸರ್ಕಾರಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೋಪಿಗಳಿಗೆ ಸಂಬಂಧಿಸಿದಂತಹ ಕರ್ನಾಟಕದಾದ್ಯಂತ 36 ಸ್ಥಳಗಳ ಮೇಲೆ ಎಸಿಬಿಯ ವಿವಿಧ ತಂಡಗಳು ಏಕಕಾಲದಲ್ಲಿ ದಾಳಿ ಮಾಡಿವೆ.
ಶೋಧನಾ ಕಾರ್ಯವು ಇನ್ನೂ ಮುಂದವರೆದಿದ್ದು, ಆರೋಪಿತ ಸರ್ಕಾರಿ ಸಿಬ್ಬಂದಿಗಳಿಗೆ ಸಂಬಂಧಿಸಿದ ಲಕ್ಷಾಂತರ ನಗದು, ಒಡವೆ, ಆಸ್ತಿ ಪತ್ರಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸಿಬಿ ದಾಳಿಗೊಳಗಾದ ಸರ್ಕಾರಿ ಅಧಿಕಾರಿಗಳ ವಿವರ:
ಜಯರಾಜ್ ಕೆ. ವಿ, ಜಂಟಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನೆ, ಮಂಗಳೂರು ಮಹಾನಗರ ಪಾಲಿಕೆ
ದೇವರಾಜ ಕಲ್ಮೇಶ ಶಿಗ್ಗಾವಿ, ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ಧಾರವಾಡ ವಿಭಾಗ
ಡಾ. ಎಸ್ ಎಸ್ ವಿಜಯಕುಮಾರ್, ಜಿಲ್ಲಾ ಆರೋಗ್ಯಾಧಿಕರಿಗಳು, ಕೋಲಾರ ಜಿಲ್ಲೆ
ಡಿ. ಪಾಂಡುರಂಗ ಗರಗ್, ಸಹಕಾರ ಸಂಘಗಳ ಜಂಟಿ ನಿಬಂಧಕರು, ಮಲ್ಲೇಶ್ವರಂ, ಬೆಂಗಳೂರು
ಶ್ರೀನಿವಾಸ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ
ಚನ್ನಬಸಪ್ಪ, ಕಿರಿಯ ಇಂಜಿನಿಯರ್, ಲೋಕೋಪಯೋಗಿ ಉಪ ವಿಭಾಗ ಮಾಗಡಿ, ರಾಮನಗರ
ಡಾ. ಶ್ರೀನಿವಾಸ್, ವಿಮ್ಸ್ ಮಾಜಿ ನಿರ್ದೇಶಕರು ಹಾಗೂ ಕಿಮ್ಸ್ ನ ಫಾರ್ಮಾಲಜಿ ವಿಭಾಗ ಮುಖ್ಯಸ್ಥರು, ಕೊಪ್ಪಳ