ಖಾಸಗಿ ಬಸ್ ಒಂದಕ್ಕೆ ಗೆ ಆಕಸ್ಮಿಕ ಬೆಂಕಿ ತಗುಲಿ (Fire outbreak) ನಡು ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ. ಹವಾ ನಿಯಂತ್ರಿತ ಬಸ್ (AC bus) ಇದಾಗಿದ್ದು, ದೂರದ ಪ್ರಯಾಣಗಳಿಗೆ ಹೆಚ್ಚೆಚ್ಚು ಪ್ರಯಾಣಿಕರು ಸುಗಮ ಪ್ರಯಾಣಕ್ಕಾಗಿ AC ಮತ್ತು ಸ್ಲೀಪರ್ ಕೋಚ್ ಬಸ್ ಗಳ ನೊರೆ ಹೋಗುತ್ತಾರೆ. ಆದ್ರೆಈ ರೀತಿಯ ಘಟನೆಹೆಗಳು ಆಗಾಗ ಆತಂಕ್ಕೆ ಕಾರಣವಾಗಿದೆ .

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗುಯಿಲಾಳ್ ಟೋಲ್ ಬಳಿ ಘಟನೆ ಸಂಭವಿಸಿದೆ.ದಾವಣಗೆರೆ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್ ಇದಾಗಿದ್ದು, ಬಸ್ಸಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಪ್ರಯಾಣಿಕರಿದ್ದರುಎಂಬ ಮಾಹಿತಿ ಲಭ್ಯವಾಗಿದೆ. AÇ ಬಸ್ ಗಳಲ್ಲಿ ವಿಂಡೋ ಗ್ಲಾಸ್ ಕೆಳಗೆ ಇಳಿಸಲು ಸಾಧ್ಯವಿಲ್ಲ. ಒಂದೇ ಡೋರ್ ಇರುತ್ತದೆ, ಎಲ್ಲಾ ಪ್ರಯಾಣಿಕರು ಅದೇ ದ್ವಾರದ ಮೂಲಕ ಹತ್ತುವುದು ಇಳಿಯುವುದು ಮಾಡಬೇಕು. ಹೀಗಾಗಿ ಪ್ರಯಾಣಿಕರು ಲಾಕ್ ಆದಂತೆ ಪ್ರಯಾಣಿಸಬೇಕು. ಆದ್ರೆ ಬಸ್ ನಲ್ಲಿ ಬೆಂಕಿಂಕಾಣಿಸಿಕೊಂಡ ತಕ್ಷಣ ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಈ ಘಟನೆಗೆ ಸ್ಪಷ್ಟ ಕಾರಣ ಇನ್ನು ತಿಳಿದುಬಂದಿಲ್ಲ.ಸದ್ಯ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಕುರಿತು
ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.