ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಒಂದಲ್ಲ ಒಂದು ರೀತಿಯಾದಂತಹ ವಿವಾದಗಳು ಆಗಾಗ ಸುದ್ದಿ ಮಾಡುತ್ತಲೇ ಇರುತ್ತವೆ ಇದೀಗ ಇದೇ ವಿಶ್ವವಿದ್ಯಾನಿಲಯ ಒಂದು ಹೀನಾಯ ಘಟನೆಗೆ ಸಾಕ್ಷಿಯಾಗಿದೆ. ಹೌದು ಜೆಎನ್‌ಯು ಕ್ಯಾಂಪಸ್ ನಲ್ಲಿ ವಿಕಲಚೇತನ ಪಿಎಚ್‌ಡಿ ವಿದ್ಯಾರ್ಥಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಹೀನಮಾನವಾಗಿ ಥಳಿಸಿದ್ದಾರೆ ಎಂಬ ವರದಿಗಳು ಬರುತ್ತಿವೆ
ಹಲ್ಲೆಗೊಳಗಾದ ಸಂಶೋಧನಾ ವಿದ್ಯಾರ್ಥಿಯನ್ನು ಫಾರೂಕ್ ಆಲಂ ಎಂದು ಗುರುತಿಸಲಾಗಿದ್ದು ಈ ವಿದ್ಯಾರ್ಥಿ ಎನ್‌ಎಸ್‌ಯುಐ ನ ಕಾರ್ಯಕರ್ತರಾಗಿದ್ದಾರೆ.
ಜೆಎನ್‌ಯುನ ಕಾವೇರಿ ಹಾಸ್ಟೆಲ್ ನಲ್ಲಿ ಈ ಭೀಕರ ಘಟನೆ ನಡೆದಿದ್ದು ವಾರ್ಡನ್ ಮತ್ತು ಸಹವರ್ತಿ ಎಬಿವಿಪಿ ಗೂಂಡಾಗಳು ಎನ್‌ಎಸ್‌ಯುಐ ಕಾರ್ಯಕರ್ತ ಮತ್ತು ಜೆಎನ್ಯುನ ಸಂಶೋಧನಾ ವಿದ್ಯಾರ್ಥಿಯಾದ ಫಾರೂಕ್ ಆಲಂ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಂದು ಎನ್‌ಎಸ್‌ಯುಐ ನ ವಿದ್ಯಾರ್ಥಿ ಘಟಕ ಈ ಕುರಿತು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡಿದೆಎಬಿವಿಪಿ ಕಾರ್ಯಕರ್ತರು ನಡೆಸಿದ ಈ ಭೀಕರ ಹಲ್ಲೆಯಿಂದಾಗಿ ಫಾರೂಕ್ ಗಂಭೀರ ಸ್ಥಿತಿಯಲ್ಲಿದ್ದಾರೆ ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ

ಜೆ ನ್ಯೂ ನಿಂದ ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದ ಫಾರೂಕ್ ಆಲಂ ಅಕ್ಟೋಬರ್ ಹೊತ್ತಿಗೆ ಪಿ ಎಚ್ ಡಿ ಪೂರ್ಣಗೊಳಿಸಲಿದ್ದರು ಎಂಬ ಮಾಹಿತಿ ಇದೆ ಕಾವೇರಿ ಹಾಸ್ಟೆಲ್ ನಲ್ಲಿದ್ದ ಫಾರೂಕುಗೆ ಕೊಠಡಿಯನ್ನು ಖಾಲಿ ಮಾಡಲು ಸೂಚಿಸಲು ಜೆಎನ್ಯು ಆಡಳಿತವು ಇಂದು ಮಧ್ಯಾಹ್ನ ಬಂದಾಗ ಈ ರೀತಿಯ ಹೀನಾಯವಾದ ಘಟನೆ ನಡೆದಿದೆ
ಇನ್ನು ಅವರ ಜೊತೆಗಿದ್ದ ಕೆಲ ಎಬಿವಿಪಿ ಕಾರ್ಯಕರ್ತರು ಪಾರೂಕ್‌ರೊಂದಿಗೆ ಜಗಳವಾಡಿದ್ದು ಮಾತ್ರವಲ್ಲದೆ, ಹಲ್ಲೆ ನಡೆಸಿದ್ದಾರೆ ಇನ್ನು ಎಬಿವಿಪಿ ಕಾರ್ಯಕರ್ತರು ನಡೆಸಿದ ಭೀಕರ ಹಲ್ಲೆಯಿಂದಾಗಿ ಫಾರೂಕ್ ಪ್ರಜ್ಯ ತಪ್ಪಿ ಬಿದ್ದಿದ್ದಾರೆ ಬಳಿಕ ಅವರನ್ನು ಆಂಬುಲೆನ್ಸ್ ಮೂಲಕ ಏಮ್ಸ್ ಗೆ ಕರೆದೊಯ್ಯಲಾಗಿದೆ ಅಂತ ಎನ್ ಎಸ್ ಯು ಐ
ಇನ್ನು ಘಟನೆಯ ನಂತರ ಬುದ್ದಿ ಬಂದಂತೆ ಜೈ ನ್ಯೂ ಆಡಳಿತ ಮಂಡಳಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು ಫಾರೂಕ್ ಹಾಸ್ಟೆಲ್ ದೊರೆಯುವಾಗ ಘಟನೆಗೆ ಕಾರಣವಾದ ವಿದ್ಯಾರ್ಥಿಗಳ ವಿರುದ್ಧ ತನಿಖೆ ನಡೆಸಲಾಗುತ್ತದೆ ಎಂದು ಹೇಳಿಕೆ ನೀಡಿ ಸುಮ್ಮನಾಗಿದೆ
ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಎನ್‌ಯು ವಿವಿಧ ವಿದ್ಯಾರ್ಥಿ ಘಟಕಗಳು ಎಬಿವಿಪಿ ವಿರುದ್ಧ ಪ್ರತಿಭಟನೆ ನಡೆಸಲು ಬೃಹತ್ ಕರೆ ನೀಡಿದೆ