ಕರ್ನಾಟಕ ಅಸೆಂಬ್ಲಿಯಲ್ಲಿ ಚುನಾವಣೆ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಎಬಿಪಿ-ಸಿವೋಟರ್ ಸಮೀಕ್ಷೆ ಬಿಡುಗಡೆಯಾಗಿದೆ. ಸಮೀಕ್ಷೆಯು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಜಯವನ್ನು ಭವಿಷ್ಯ ನುಡಿದಿದೆ.
ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ 115 ರಿಂದ 127 ಸ್ಥಾನಗಳನ್ನು ಗೆಲ್ಲಲಿದೆ, ಭಾರತೀಯ ಜನತಾ ಪಕ್ಷ (ಬಿಜೆಪಿ) 68 ರಿಂದ 80 ಸ್ಥಾನಗಳನ್ನು ಮತ್ತು ಜನತಾ ದಳ (ಜಾತ್ಯತೀತ) 23 ರಿಂದ 35 ಸ್ಥಾನಗಳನ್ನು ಗೆಲ್ಲಲಿದೆ.
ಪ್ರಸ್ತುತ ಬಿಜೆಪಿ ರಾಜ್ಯ ಸರ್ಕಾರದ ಕಾರ್ಯಕ್ಷಮತೆಯನ್ನು ಶ್ರೇಣೀಕರಿಸಿ, ಪ್ರತಿಕ್ರಿಯಿಸಿದವರಲ್ಲಿ 50.5 ಪ್ರತಿಶತದಷ್ಟು ಜನರು ಸರ್ಕಾರದ ಸಾಧನೆಯನ್ನು ‘ಕಳಪೆ’ ಎಂದು ಹೇಳಿದ್ದಾರೆ, ಕೇವಲ 27.7 ಪ್ರತಿಶತ ಜನರು ಮಾತ್ರ ಸರ್ಕಾರದ ಬಗ್ಗೆ’ಒಳ್ಳೆಯ’ ಅಭಿಪ್ರಾಯ ಹೊಂದಿರುವುದಾಗಿ ಹೇಳಿದ್ದಾರೆ.
ಇದಲ್ಲದೆ, ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 57.1 ರಷ್ಟು ಮಂದಿ “ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮೇಲೆ ಅಸಮಾಧಾನಗೊಂಡಿದ್ದು, ಸರ್ಕಾರವನ್ನು ಬದಲಾಯಿಸಲು ಬಯಸುವುದಾಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿಯನ್ನು ಶೇ 46.9ರಷ್ಟು ಜನರು ‘ಕಳಪೆ’ ಎಂದು ರೇಟಿಂಗ್ ನೀಡಿದ್ದು, ಶೇ 26.8ರಷ್ಟು ಮಂದಿ ಮಾತ್ರ ‘ಒಳ್ಳೆಯ’ ಎಂದು ರೇಟ್ ನೀಡಿದ್ದಾರೆ.
ಆದರೆ, ಪ್ರಧಾನಿ ಮೋದಿ ಕಾರ್ಯವೈಖರಿಗೆ ರಾಜ್ಯದಲ್ಲಿ ಇನ್ನೂ ಉತ್ತಮ ಅಭಿಪ್ರಾಯ ಇದೆ ಎಂದು ಸಮೀಕ್ಷೆ ಹೇಳಿದೆ. ಶೇ 47.4 ಜನರು ಪ್ರಧಾನಿ ಮೋದಿ ಕಾರ್ಯಕ್ಷಮತೆಯನ್ನು ‘ಉತ್ತಮ’ ಎಂದು ಹೇಳಿದ್ದು, 33.8 ಪ್ರತಿಶತ ಜನರು ‘ಕಳಪೆ’ ಎಂದು ರೇಟ್ ಮಾಡಿದ್ದಾರೆ. ಅದಾಗ್ಯೂ ರಾಜ್ಯ ಸರ್ಕಾರದ ಮೇಲೆ ನರೇಂದ್ರ ಮೋದಿ ಅವರ ಅಲೆ ಎಷ್ಟು ಪರಿಣಾಮ ಬೀರಲಿದೆ ಎನ್ನುವುದು ಕಾದು ನೋಡಬೇಕಿದೆ.
29.1 ರಷ್ಟು ಮಂದಿ ಈ ಬಾರಿ ನಿರುದ್ಯೋಗ ಸಮಸ್ಯೆಯೇ ದೊಡ್ಡ ಸಮಸ್ಯೆ ಎಂದು ಹೇಳಿದ್ದಾರೆ. 21.5 ಪ್ರತಿಶತ ಜನರು ವಿದ್ಯುತ್, ನೀರು ಮತ್ತು ರಸ್ತೆಗಳ ದುಸ್ಥಿತಿ ದೊಡ್ಡ ಸಮಸ್ಯೆಯಾಗಿದೆ.
ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ, “ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಮತ್ತು ಹಿಜಾಬ್ ವಿವಾದದಂತಹ ಸಮಸ್ಯೆಗಳು” ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಶೇ 30.38 ಜನರು ಹೇಳಿದ್ದಾರೆ. ಇದಲ್ಲದೆ, 24.6 ಪ್ರತಿಶತದಷ್ಟು ಜನರು “ಧಾರ್ಮಿಕ ಧ್ರುವೀಕರಣ” ಮುಂಬರುವ ಅಸೆಂಬ್ಲಿ ಚುನಾವಣೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಎಂದು ನಂಬಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯಾರು? ಉದ್ದದ ಹೆಸರುಗಳ ಪಟ್ಟಿಯಲ್ಲಿ ಶೇಕಡಾ 39.1 ರಷ್ಟು ಜನರು ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರನ್ನು ಸಿಎಂ ಆಗಬೇಕೆಂದು ಬಯಸಿದ್ದರೆ, ಶೇಕಡಾ 31.1 ರಷ್ಟು ಜನರು ಇನ್ನೂ ಬಸವರಾಜ್ ಬೊಮ್ಮಾಯಿ ಸಿಎಂ ಆಗಬೇಕೆಂದು ಬಯಸಿದ್ದಾರೆ. ಶೇಕಡಾ 3.2 ರಷ್ಟು ಜನರು ಮಾತ್ರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಮುಂದಿನ ಸಿಎಂ ಆಗಬೇಕೆಂದು ಎಂದು ಬಯಸುತ್ತಾರೆ. ಎಚ್ ಡಿ ಕುಮಾರಸ್ವಾಮಿ ಪರ 21 ಶೇಕಡಾ ಜನರು ಸಿಎಂ ಆಗಬೇಕೆಂದು ಬಯಸಿದ್ದಾರೆ.