ರಷ್ಯಾದ ಶೆಲ್ ದಾಳಿಗೆ 40 ಉಕ್ರೇನಿಯನ್ ಸೈನಿಕರು ಮತ್ತು ಸುಮಾರು 10 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲ್ಡೊಮಿರ್ ಝೆಲೆನ್ಸ್ಕಿ ಅವರ ಸಲಹೆಗಾರನನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಇತ್ತ, AFP ವಿವರಗಳನ್ನು ನೀಡದೆಯೇ ಉಕ್ರೇನ್ ‘ಸುಮಾರು 50 ರಷ್ಯಾದ ಆಕ್ರಮಣಕಾರರನ್ನು’ ಕೊಂದಿದೆ ಎಂದು ವರದಿ ಮಾಡಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಬೆಳಗ್ಗೆ ಉಕ್ರೇನ್ನಲ್ಲಿ ಮಿಲಿಟರಿ ಕಾರ್ಯಾಚರಣೆ ಘೋಷಿಸಿದಾಗ ಪ್ರಾರಂಭವಾದ ಸಮರದಲ್ಲಿ ಸರಣಿಯಲ್ಲಿ ಸಾವುನೋವುಗಳು ಜಾಸ್ತಿಯಾಗುತ್ತಲೇ ಇವೆ.
ಬಿಕ್ಕಟ್ಟಿನ ಮಧ್ಯಸ್ಥಿಕೆಗೆ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಅವರನ್ನು ಸಂಪರ್ಕಿಸುವಂತೆ ಭಾರತದ ಉಕ್ರೇನ್ ರಾಯಭಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಉಕ್ರೇನ್ ಅಧ್ಯಕ್ಷ ವೊಲ್ಡೊಮಿರ್ ಝೆಲೆನ್ಸ್ಕಿ ಅವರು ಗುರುವಾರ ಉಕ್ರೇನ್ ಮೇಲೆ ಭೂ, ವಾಯು ಮತ್ತು ಜಲ ಮೂಲಕ ಉಕ್ರೇನ್ ಮೇಲೆ ಸಂಪೂರ್ಣ ಆಕ್ರಮಣವನ್ನು ಸಾಧಿಸಲು ಮುಂದಾಗಿದ್ದು, ಉಕ್ರೇನ್ ದೇಶವು ರಷ್ಯಾ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದೆ ಎಂದು ಇಂದು ಹೇಳಿದ್ದಾರೆ.
ಎರಡನೆಯ ಮಹಾಯುದ್ಧದ ನಂತರ ಯುರೋಪ್ ಖಂಡದಲ್ಲಿ ಅತಿದೊಡ್ಡ ದಾಳಿ ಇದು ಎಂದು ವಿಶ್ಲೇಷಿಸಲಾಗುತ್ತಿದೆ.