ಬೆಂಗಳೂರು : ಪ್ರತಿಷ್ಠಿತ ಸಿಎಂ ಕಪ್ ಬ್ಯಾಡ್ಮಿಂಟನ್ ಕ್ರೀಡಾಕೂಟದ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಇದರಲ್ಲಿ ಭಾಗಿಯಾಗಿರುವ ಎಟಿಎಸ್ ಅಟ್ಯಾಕರ್ಸ್ ತಂಡವೂ ಸಹ ಪಂದ್ಯಾವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದೆ. ಈ ತಂಡದ ಜಂಟಿ ಮಾಲೀಕರಾದ ಎಸ್.ಜಿ. ನರಸಿಂಹ ಮೂರ್ತಿ ಹಾಗೂ ಮೊಹಮ್ಮದ್ ಮುಸ್ತಫಾ ಅವರ ಪಯಣ ಅಕ್ಷರಶಃ ಶ್ಲಾಘನೀಯವಾಗಿದೆ.

ಐಟಿ ಸಿಟಿ ಬೆಂಗಳೂರಿನ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದವರಲ್ಲಿ ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್‍ನ ಕೊಡುಗೆಯೂ ಅನನ್ಯ. ಐಟಿ ಉದ್ಯಮದಲ್ಲಿ ತಮ್ಮದೇ ರೀತಿಯ ಛಾಪು ಮೂಡಿಸಿರುವ ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್‍ನ ಈ ಇಬ್ಬರೂ ಶ್ರಮಿಕ ವ್ಯಕ್ತಿತ್ವಗಳ ಕಠಿಣ ಪರಿಶ್ರಮವಿದೆ.
ಐಟಿ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳ ಅನುಭವ ಹೊಂದಿರುವ ನರಸಿಂಹಮೂರ್ತಿ, ಮೊಹಮ್ಮದ್ ಮುಸ್ತಫಾ ಅವರು, 2023ರಲ್ಲಿ ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಕಡಿಮೆ ಅವಧಿಯಲ್ಲಿಯೇ ದೇಶ-ವಿದೇಶಗಳಲ್ಲಿ ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್ ಬಹುದೊಡ್ಡ ಹೆಸರನ್ನು ಮಾಡಿದೆ.
ಇದನ್ನೂ ಓದಿ : Bill Gates: ಎಪ್ಸ್ಟೀನ್ ಪೈಲ್ಸ್ ವಿವಾದ: ಎ.ಐ ಶೃಂಗಸಭೆಯಿಂದ ಹೊರಗುಳಿದ ಬಿಲ್ ಗೇಟ್ಸ್
ಅಭ್ಯುಧಯ ಟೆಕ್ನೋ ಸಲ್ಯೂಷನ್ ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಎಲ್‍ಒಟಿ, ಆರ್& ಡಿ ಸೇರಿದಂತೆ ಹಲವು ವಿಭಾಗದಲ್ಲಿ ಕೆಲಸ ಮಾಡುತ್ತಿದೆ. ಕೆಲವೇ ವರ್ಷಗಳಲ್ಲಿಯೇ ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್ ಸಂಸ್ಥೆಯು ಹೆಮ್ಮರವಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಮೂರು ಕಾಂಟಿನೆಂಟ್‍ಗಳ ವಿವಿಧ ದೇಶಗಳ 20ಕ್ಕೂ ಹೆಚ್ಚಿನ ಸಂಸ್ಥೆಗಳಿಗೆ ಅಭ್ಯುದಯ ಸಲ್ಯೂಷನ್ ಕಂಪೆನಿಯಿಂದ ಸೇವೆ ನೀಡಲಾಗುತ್ತಿದೆ. ಈಗಾಗಲೇ 100ಕ್ಕೂ ಹೆಚ್ಚಿನ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್, 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಐಟಿ ತರಬೇತಿಗಳನ್ನು ನೀಡಿದ್ದು, ಕಂಪೆನಿಯ ಯಶಸ್ಸಿಗ ಹಿಡಿದ ಕೈಗನ್ನಡಿಯಾಗಿದೆ. ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಸೇರಿದಂತೆ ಇನ್ನಿತರ ಕಾರ್ಯಕ್ಕಾಗಿ 50ಕ್ಕೂ ಹೆಚ್ಚಿನ ಸ್ಕಿಲ್ ಲ್ಯಾಬ್‍ಗಳನ್ನು ಅಭ್ಯುಧಯ ಟೆಕ್ನೋ ಸಲ್ಯೂಷನ್ಸ್ ಹೊಂದಿರುವುದು ಸಂತಸದ ವಿಚಾರವಾಗಿದೆ.
ವೃತ್ತಿಪರತೆಯ ಜತೆಗೆ ತಮ್ಮ ಕ್ರೀಡಾಸಕ್ತಿಯನ್ನು ಬಿಟ್ಟುಕೊಡದ ಎಸ್.ಜಿ. ನರಸಿಂಹಮೂರ್ತಿ ಮತ್ತು ಮೊಹಮ್ಮದ್ ಮುಸ್ತಫಾ ಈಗಾಗಲೇ ಹಲವು ಕ್ರೀಡಾಕೂಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನರಸಿಂಹಮೂರ್ತಿ ಅವರು ಮೂಲತಃ ಬ್ಯಾಡ್ಮಿಂಟನ್ ಆಟಗಾರರಾಗಿದ್ದು, ಅವರ ಬ್ಯಾಡ್ಮಿಂಟನ್ ಪ್ರೀತಿಯೇ ಈಗ ಸಿಎಂ ಕಪ್ 2026ರ ಭಾಗವಾಗುವಂತೆ ಮಾಡಿದೆ. ಎಸ್.ಜಿ. ನರಸಿಂಹಮೂರ್ತಿ ಮತ್ತು ಮೊಹಮ್ಮದ್ ಮುಸ್ತಫಾ ಅವರಿಗೆ ಸಿಎಂ ಕಪ್ ಗೆದ್ದು ಬರಲಿ ಎಂದು ಆಯೋಜಕರು ಹಾಗೂ ಕ್ರೀಡಾಭಿಮಾನಿಗಳು ಶುಭಹಾರೈಸಿದ್ದಾರೆ.






