ಬಾಲಿವುಡ್ ನಟ ಬಾಬಿ ಡಿಯೋಲ್ ನಟನೆಯ ಬಹುನಿರೀಕ್ಷಿತ ಆಶ್ರಮ್ ವೆಬ್ ಸರಣಿಯ ಮೂರನೇ ಅವತರಿಣಿಕೆ ಶುಕ್ರವಾರ ಬಿಡುಗಡೆಯಾಗಿದ್ದು ಕುತೂಹಲದಿಂದ ಕಾಯುತ್ತಿದ್ದವರಿಗೆ ನಿರಾಸೆಯುಂಟು ಮಾಡಿದೆ.
ಯಾಕೆಂದರೆ ಮೊದಲ ಎರಡು ಸೀಸನ್ ನೋಡಿದ ಪ್ರೇಕ್ಷಕ ಮೂರನೇ ಸೀಸನ್ ಬರುವಿಕೆಗಾಗಿ ಕಾಯುತ್ತಿರುತ್ತಾನೆ ಅದರಂತೆ ನಿನ್ನೆ ಬಿಡುಗಡೆಯಾದ ಹೊಸ ಸೀರಿಸ್ನಲ್ಲಿ ಅಷ್ಟು ಧಮ್ ಇಲ್ಲದಿರುವುದು ಕಂಡು ಬಂದಿದೆ.
ಮೂರನೇ ಅವತರಣಿಕೆಯಲ್ಲಿ ಪಮ್ಮಿ ಪೆಹಲ್ವಾನ್ ಹಾಗು ಬಾಬಾ ನಿರಾಲ ನಡುವಿನ ದ್ವೇಷದ ಸುತ್ತ ತಿರುಗುತ್ತದೆ. ವೆಬ್ ಸರಣಿಯ ಒಟ್ಟು 10 ಸಂಚಿಕೆಗಳಲ್ಲಿ ಯಾವುದೇ ಪ್ರಮುಖ ವಿದ್ಯಾಮಾನ ನಡೆದಿಲ್ಲ. ಬಾಬಾ ಹಾಗು ಇಡೀ ಸರ್ಕಾರಿ ವ್ಯವಸ್ಥೆ ಪಮ್ಮಿ ಹಿಡಿಯುವುದರಲ್ಲಿ ನಿರತವಾಗಿರುವುದನ್ನು ರಣ ರೋಚಕ ಬೇಟೆ ಎಂಬಂತೆ ತೋರಿಸಲಾಗಿದೆ.
ಒಬ್ಬ ಸಾಧು ದೊಡ್ಡ ಕಾಮುಕ ಎಂದು ಪಮ್ಮಿಗೆ ತಿಳಿಯುತ್ತದೆ ಈ ವಿಚಾರ ಹೊರಗಡೆ ಪ್ರಪಂಚಕ್ಕೆ ತಿಳಿದರೆ ಎಲ್ಲಿ ತನ್ನ ಗೆ ಉಳಿಗಾಲ ವಿರುವುದಿಲ್ಲ ಎಂದು ಅರಿತ ಬಾಬಾ ಹಾಗು ಆತನ ಬಂಟ ಬೋಪೆ ಆಕೆಯನ್ನು ಕೊಲೆ ಮಾಡಿಸಲು ಹೊರಡುತ್ತಾರೆ.

ಹಾಗೆಯೇ ನೋಡುತ್ತಾ ಹೋದರೆ ಕೋಮಲ್ ಎಂಬ ಯುವತಿ ಹಾಗು ಅವರ ಕುಟುಂಬದವರಿಗೆ ಆಗುವ ಅನ್ಯಾಯ, ಖಾತೆ ಹಂಚಿಕೆಯಲ್ಲಿ ಬಬಿತಾ ಬಾಬಾಗೆ ಗೊತ್ತಿಲ್ಲದೆ ಪಾಲುದಾರಿಕೆಯನ್ನ ಪಡೆಯುವುದು. ಮಧ್ಯಭಾಗದಲ್ಲಿ ಬಾಬಾರ ಪತ್ನಿ ಹಾಗು ಹಿಂದೆ ಆತ ಏನಾಗಿದ ಎಂಬುದರ ಕುರಿತು ಕಡೆಯ ಸಂಚಿಕೆಗಳಲ್ಲಿ ಹೇಳಲಾಗುತ್ತದೆ.
ಪಮ್ಮಿ ಹಾಗು ಬಾಬಾ ನಿರಾಲ ನಡುವಿನ ಕಿತ್ತಾಟವು ಕೋರ್ಟ್ ಮೆಟ್ಟಿಲೇರುತ್ತದೆ ಆಗ ವೆಬ್ ಸರಣಿ ಇನ್ನಷ್ಟು ಕುತೂಹಲಕಾರಿಯಾಗುತ್ತದೆ ಎಂದು ಎಲ್ಲರು ತಿಳಿದುಕೊಳ್ಳಲಿದ್ದಾರೆ. ಆದರೆ, ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೇ ಬೇರೆಯದೇ ಆಗಿದೆ. ಕಡೆಯವಾಗಿ ಆಶ್ರಮ್ 4ರ ಪ್ರೋಮೋವನ್ನು ತೋರಿಸಿ ಪ್ರೇಕ್ಷಕನ ಕೌತುಕವನ್ನ ಹೆಚ್ಚಿಸುವ ಕೆಲಸ ಮಾಡಲಾಗಿದೆ.
ತಾರಾಗಣದ ವಿಚಾರಕ್ಕೆ ಬರುವುದಾದರೆ ಬಾಬಿ ಡಿಯೋಲ್ ಬಾಬಾ ನಿರಾಲನ ಪಾತ್ರದಲ್ಲಿ ಹೆಚ್ಚು ಛಾಪನ್ನು ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಮೊದಲ ಹಾಗು ಎರಡನೇ ಅವತರಣಿಕೆಗಳಿಗೆ ಹೋಲಿಸಿದರೆ ಇಲ್ಲಿ ಅವರ ಪಾತ್ರ ಅಷ್ಟು ಪ್ರಭಾವ ಬೀರಿಲ್ಲ ಎಂದು ಹೇಳಬಹುದು.
ಉಳಿದಂತೆ ಅದಿತಿ ಪೋಹಂಕರ್, ದರ್ಶನ್ ಕುಮಾರ್, ಚಂದನ್ ರಾಯ್ ಸೆಹ್ಗಲ್, ತ್ರಿಧಾ ಚೌಧರಿ ಸೇರಿದಂತೆ ಅನೇಕರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಮೊದಲು ಆಶ್ರಮ್ ವೆಬ್ ಸರಣಿಯನ್ನು ರಾಜಸ್ಥಾನ ಹಾಗು ಹರಿಯಾಣ ಮೂಲದ ಸ್ವಘೋಷಿತ ದೇವಮಾನವರು(ಸದ್ಯ ಸೆರೆವಾಸದಲ್ಲಿದ್ದಾರೆ) ಹಾಗು ರಾಜಸ್ಥಾನದ ರಾಜಕೀಯ ಬಿಕ್ಕಟ್ಟನ್ನಿಟ್ಟುಕೊಂಡು ಕತೇ ಹೆಣೆಯಲಾಗಿದೆ ಎಂದು ತಿಳಿದು ಬಂದಿದೆ.