ವರ್ಷದ ಪ್ರಾರಂಭದಲ್ಲಿ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ದಿಗ್ವಿಜಯ ಸಾಧಿಸಿದ್ದ ಆಮ್ ಆದ್ಮಿ ಪಕ್ಷದ ವಿರುದ್ದ ಇತ್ತೀಚಿನ ದಿನಗಳಲ್ಲಿ ದೂರಿನ ಸರಮಾಲೆಯೆ ಕೇಳಿ ಬರುತ್ತಿದೆ.
ಸಿಧು ಮೂಸೇವಾಲಾ ಹತ್ಯೆ ಹಾಗು ಕಮಿಷನ್ ಆರೋಪಗಳು ಸಹ ಆಡಳಿತ ಸರ್ಕಾರದ ವಿರುದ್ದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಮಧ್ಯೆ ಶಿರೋಮಣಿ ಅಕಾಲಿದಳದ ಮುಖ್ಯಸ್ಥರಾದ ಸುಖ್ಬೀರ್ ಸಿಂಗ್ ಬಾದಲ್ ಜನರನ್ನು ಮೂರ್ಖರನ್ನಾಗಿಸಲು ಎಎಪಿ ಸರ್ಕಾರ 24 ಕೋಟಿ ಖರ್ಚು ಮಾಡಿದೆ ಎಂದು ಆರೋಪಿಸಿದ್ದಾರೆ.
ಜೂನ್ 23ರಂದು ನಡೆಯುವ ಸಂಗ್ರೂರ್ ಲೋಕಸಬೆ ಉಪಚುನಾವಣೆ ನಿಮಿತ್ತ ಪಕ್ಷದ ಅಭ್ಯರ್ಥಿ ಕಮಲ್ದೀಪ್ ಕೌರ್ ಪರ ಪ್ರಚಾರ ಮಾಡುವ ಸಮಯದಲ್ಲಿ ಎಎಪಿ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.

ಜನರ ದಾರಿ ತಪ್ಪಿಸಲು ಎಎಪಿ ಸುಳ್ಳು ಹೇಳುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಕುಂಟಿತವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ಎಎಪಿ 2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಕಳೆದ ಮೂರು ತಿಂಗಳಲ್ಲಿ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆಯಲಾಗಿದೆ ಆದರೆ, ಏನು ಸಹ ಮಾಡಿಲ್ಲ ಕೊಟ್ಟ ಮಾತನ್ನ ಈ ಸರ್ಕಾರ ಉಳಿಸಿಕೊಂಡಿಲ್ಲ ಎಂದಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯನ್ನು ಈ ಕೂಡಲೇ ಪ್ರಧಾನಿ ಮೋದಿ ಹಿಂಪಡೆಯಬೇಕು ಮತ್ತು ಈ ಮೊದಲಿದ್ದ ವಿಧಾನವನ್ನ ಪಾಲಿಸಬೇಕು ಎಂದು ಹೇಳಿದ್ದಾರೆ.












