ಪಂಜಾಬ್ ಚುನಾವಣೆ ಪ್ರಚಾರದ ವೇಳೆ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಂಡು ಬಂದ ಹಿನ್ನೆಲೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಸಂಗ್ರೂರ್ ಜಿಲ್ಲೆಯ ಧುರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾನ್ ಕಣಕ್ಕಿಳಿಯಲಿದ್ದಾರೆ. ನಿನ್ನೆ ಧುರಿಗೆ ಭೇಟಿ ನೀಡಿದ್ದ ಮಾನ್ ಗೆ ಪುಷ್ಪವೃಷ್ಠಿ ಮಾಡಿ ಅಪಾರ ಜನಸ್ತೋಮ ಅವರನ್ನು ಸ್ವಾಗತಿಸಿದನ್ನು ಮಾನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಪೋಟೋಗಳಲ್ಲಿ ಕಾಣಬಹುದು.
ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಎಎಪಿ ರಾಜ್ಯ ಘಟಕವು, ಪ್ರಚಾರದ ನಿಮಿತ್ತ ಕೋವಿಡ್ ಮಾರ್ಗಸೂಚುಗಳನ್ನು ಗಮನದಲ್ಲಿಟ್ಟುಕೊಂಡು ತಾವು ಕೆಲವು ಮುಖಂಡರನ್ನು ಆಹ್ವಾನಿಸಿದ್ದೆವು. ಆದರೆ ಹೆಚ್ಚಿನ ಜನ ಬಂದ ಕಾರಣ ನಾವು ಅವರನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಆಯೋಗಕ್ಕೆ ಸ್ಪಷ್ಟನೆ ನೀಡಿದೆ.






