• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಬ್ ರಿಜಿಸ್ಟಾರ್ ಕಚೇರಿಯಿಂದಲೇ ಆಧಾರ್ ಸೋರಿಕೆ: ಎಫ್‌ಐಆರ್ ದಾಖಲು

ಪ್ರತಿಧ್ವನಿ by ಪ್ರತಿಧ್ವನಿ
October 29, 2023
in Top Story, ಕರ್ನಾಟಕ
0
ಸಬ್ ರಿಜಿಸ್ಟಾರ್ ಕಚೇರಿಯಿಂದಲೇ ಆಧಾರ್ ಸೋರಿಕೆ: ಎಫ್‌ಐಆರ್ ದಾಖಲು
Share on WhatsAppShare on FacebookShare on Telegram

ಮಂಗಳೂರ: ಸಬ್ ರಿಜಿಸ್ಟಾರ್ ಕಚೇರಿಯಿಂದಲೇ ಆಧಾರ್ ಸೋರಿಕೆ ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗೇ ದೋಖಾ, ಮತ್ತೆ ಎಂಟು ಎಫ್‌ಐಆರ್ ದಾಖಲು, ಮೂವರು ಬಿಹಾರಿ ಮೂಲದವರು ವಶಕ್ಕೆ ಮಂಗಳೂರಿನ ಉಪ ನೋಂದಣಿ ಕಚೇರಿಯಲ್ಲಿ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಕೊಟ್ಟಿರುವ ಗ್ರಾಹಕರ ಬ್ಯಾಂಕ್ ಖಾತೆಗಳಿಂದ ಹಣ ಕೀಳುವ ಸೈಬರ್ ದೋಖಾ ನಿರಂತರ ಮುಂದುವರಿದಿದೆ.

ADVERTISEMENT

ಮಂಗಳೂರಿನ ಸೈಬರ್ ಠಾಣೆಯಲ್ಲಿ ಮತ್ತೆ ದಾಖಲಾಗಿದ್ದು, ಎಂಟು ಎಫ್‌ಐಆರ್ ದೂರು ಕೊಟ್ಟವರೆಲ್ಲ ರಿಜಿಸ್ಟ್ರೇಶನ್ ಕಚೇರಿಯ ಮೇಲೆ ಬೆರಳು ತೋರಿಸಿದ್ದಾರೆ. ವಿಶೇಷ ಅಂದ್ರೆ, ಹೀಗೆ ವಂಚನೆಗೊಳಗಾದವರಲ್ಲಿ ಪೊಲೀಸ್ ಅಧಿಕಾರಿಯೂ ಇದ್ದಾರೆ. ವಂಚನೆ ಪ್ರಕರಣವನ್ನು ಗಂಭೀರ ಪರಿಗಣಿಸಿದ ಮಂಗಳೂರು ಪೊಲೀಸರು ಬಿಹಾರ ಮೂಲದ ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಎಎಸ್‌ಐ ಆಗಿರುವ ಆಲ್ಬರ್ಟ್ ಲಾದೋ ಹಣ ಕಳಕೊಂಡವರಲ್ಲಿ ಒಬ್ಬರಾಗಿದ್ದು ವಂಚನೆ ಬಗ್ಗೆ ಸೈಬರ್ ಅಪರಾಧಗಳ ಠಾಣೆಗೆ ದೂರು ನೀಡಿದ್ದಾರೆ. ಲಾದೋ ಅವರ ಎಸ್ ಬಿಐ ಬ್ಯಾಂಕ್ ಖಾತೆಯಿಂದ ಆಗಸ್ಟ್ 23ರಂದು 4990 ರೂ., 24ರಂದು 8500 ರೂ., ಸೆ.6ರಿಂದ 9ರ ನಡುವೆ 10 ಸಾವಿರ, 10 ಸಾವಿರ ಮತ್ತು 3400 ರೂ. ಹಣ ಕಡಿತ ಆಗಿದೆ. ಒಟ್ಟು 36,890 ರೂಪಾಯಿ ಹಣ ಇವರ ಖಾತೆಯಿಂದ ಕಡಿತ ಆಗಿದ್ದು, ಯಾವುದೇ ಓಟಿಪಿಯನ್ನು ಯಾರಿಗೂ ಕೊಟ್ಟಿರಲಿಲ್ಲ. ಬ್ಯಾಂಕ್ ಕಚೇರಿಯಲ್ಲಿ ವಿಚಾರಿಸಿದಾಗ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಸೋರಿಕೆಯಾಗಿ ಯಾರೋ ಹಣವನ್ನು ಅನಧಿಕೃತವಾಗಿ ತೆಗೆದಿರುವುದು ಪತ್ತೆಯಾಗಿದೆ.

ಆಲ್ಬರ್ಟ್ ಲಸ್ರಾದೊ ಅವರು ಆಗಸ್ಟ್ 2ರಂದು ಮಂಗಳೂರಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜಾಗ ಮಾರಾಟದ ಬಗ್ಗೆ ಹೆಬ್ಬೆರಳಿನ ಗುರುತು ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಅಪರಿಚಿತರು ಈ ತಂತ್ರಾಂಶವನ್ನು ಬಳಸಿಕೊಂಡು ತನ್ನ ಬ್ಯಾಂಕ್ ಖಾತೆಯಿಂದ ಹಣ ಕಿತ್ತುಕೊಂಡಿದ್ದಾರೆ ಎಂದು ಸೈಬರ್ ಅಪರಾಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೇ ರೀತಿ ಇತರ ಏಳು ಮಂದಿ ಜಾಗ ರಿಜಿಸ್ಟ್ರೇಶನ್ ವಿಚಾರದಲ್ಲಿ ಮಂಗಳೂರಿನ ಉಪ ನೋಂದಣಿ ಕಚೇರಿಗೆ ಆಧಾರ್ ಕಾರ್ಡ್‌ ಮತ್ತು ಬೆರಳಚ್ಚು ನೀಡಿದವರು ಹಣ ಕಳಕೊಂಡಿದ್ದಾರೆ. ಈ ರೀತಿ ಎಂಟು ಎಫ್‌ಐಆರ್ ಮಂಗಳೂರಿನಲ್ಲಿ ಕಳೆದ ಒಂದು ತಿಂಗಳಲ್ಲಿ ದಾಖಲಾಗಿದೆಯೆನ್ನುವ ಮಾಹಿತಿ ಲಭಿಸಿದೆ.

ಸೊಸೈಟಿಯಿಂದಲೂ ಆಧಾರ್ ಸೋರಿಕೆ

ನೀರುಮಾರ್ಗ ನಿವಾಸಿ ಮ್ಯಾಕ್ಸಿಂ ಎಂಬವರು ಸೊಸೈಟಿ ಒಂದಕ್ಕೆ ಆಧಾರ್ ಕಾರ್ಡ್ ಮತ್ತು ಬೆರಳಚ್ಚು ನೀಡಿ ಹಣ ಕಳಕೊಂಡಿದ್ದಾರೆ. ಲೋನ್ ವಿಚಾರದಲ್ಲಿ ಗುರುಪುರದ ಸೊಸೈಟಿ ಒಂದಕ್ಕೆ ತೆರಳಿದ್ದ ಅವರು ಅಲ್ಲಿ ಆಧಾರ್ ಮತ್ತು ಬೆರಳಚ್ಚು ನೀಡಿದ್ದರು. ಅಕ್ಟೋಬರ್ ತಿಂಗಳ ಆರಂಭದಲ್ಲಿ ದಿನಕ್ಕೆ 5000 ರೀತಿ ಮೂರು ದಿನ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ. ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ, ಆಧಾರ್ ಕಾರ್ಡ್ ಸೋರಿಕೆಯಾಗಿರುವ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಬಗ್ಗೆ ಮ್ಯಾಕ್ಸಿಂ ಕುಟಿನೋ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು 3 ದಾಖಲಿಸಿದ್ದಾರೆ.

ಕಾವೇರಿ 2 ತಂತ್ರಾಂಶದ ಬಗ್ಗೆ ಸಂಶಯ

ಸಬ್ ರಿಜಿಸ್ಟ್ರೇಶನ್ ಕಚೇರಿಯಲ್ಲಿ ಕಾವೇರಿ 2 ತಂತ್ರಾಂಶ ಎನ್ನುವ ಹೊಸ ಸಾಫ್ಟ್ ವೇರನ್ನು ಕಳೆದ ವರ್ಷ ಅಳವಡಿಸಲಾಗಿತ್ತು. ಅದನ್ನು ಹ್ಯಾಕ್ ಮಾಡಿ, ಗ್ರಾಹಕರ ಬೆರಳಚ್ಚು ಮತ್ತು ಆಧಾರ್ ಮಾಹಿತಿಯನ್ನು ಕದಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸರಕಾರವಾಗಲೀ, ಜಿಲ್ಲಾಡಳಿತವಾಗಲೀ ಗಂಭೀರ ಪರಿಗಣಿಸಿಲ್ಲ. ಮಂಗಳೂರಿನಲ್ಲಿ ಎರಡು ತಿಂಗಳ ಅವಧಿಯಲ್ಲಿ 25ಕ್ಕೂ ಹೆಚ್ಚು ಮಂದಿ ದೂರು ಕೊಟ್ಟು ಎಫ್‌ಐಆರ್ ಆಗಿದ್ದರೂ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ ಆಗಿಲ್ಲ. ಆದ್ರೆ ಮಂಗಳೂರಿನ ಸೈಬರ್ ಪೊಲೀಸರು ಅಲರ್ಟ್ ಆಗಿದ್ದು, ಆರೋಪಿಗಳ ಜಾಡು ಹಿಡಿದು ಸಾಗಿದ ಪರಿಣಾಮ ಮೂವರು ಬಿಹಾರ ಮೂಲದವರನ್ನು ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಸೈಬರ್ ಪೋಲೀಸರ ತಂಡ ಕದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Tags: Aadhaar CardFIRmangoreSub-Registrar Office
Previous Post

ಪುನೀತ್ ರಾಜ್​ಕುಮಾರ್​ 2ನೇ ವರ್ಷದ ಪುಣ್ಯಸ್ಮರಣೆ

Next Post

ಕೇರಳ: ಪ್ರಾರ್ಥನಾ ಮಂದಿರದಲ್ಲಿ ಸರಣಿ ಸ್ಪೋಟ: ಒಂದು ಸಾವು, ಹಲವರು ಗಂಭೀರ

Related Posts

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?
Top Story

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

by ಪ್ರತಿಧ್ವನಿ
May 25, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಗೆ ಇದೀಗ ಮತ್ತೆ ಕತ್ತರಿ ಬೀಳುವ ಭೀತಿ ಎದುರಾಗಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಲಕ್ಷಾಂತರ...

Read moreDetails
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
Next Post
ಕೇರಳ: ಪ್ರಾರ್ಥನಾ ಮಂದಿರದಲ್ಲಿ ಸರಣಿ ಸ್ಪೋಟ: ಒಂದು ಸಾವು, ಹಲವರು ಗಂಭೀರ

ಕೇರಳ: ಪ್ರಾರ್ಥನಾ ಮಂದಿರದಲ್ಲಿ ಸರಣಿ ಸ್ಪೋಟ: ಒಂದು ಸಾವು, ಹಲವರು ಗಂಭೀರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada