ಬೆಂಗಳೂರು;ಕೋಟನ್ ಪೇಟೆ ಠಾಣೆಯಲ್ಲಿ ಆರೋಪಿಯೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಪೊಲೀಸರ ಹಲ್ಲೆಯಿಂದ ಲಾಕಪ್‌ನಲ್ಲಿಯೇ ಯುವಕ ಮೃತಪಟ್ಟಿದ್ದಾನೆಂದು ಕುಟುಂಬ ಆರೋಪಿಸಿದೆ.
ಹಳೆಯ ದರೋಡೆ ಸಂಚು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ನ್ಯಾಯಾಲಯದ ವಾರೆಂಟ್ ಹಿನ್ನೆಲೆಯಲ್ಲಿ ಬಂಧಿತನಾಗಿದ್ದ ಭಕ್ಷಿ ಗಾರ್ಡನ್ ನಿವಾಸಿ ವಿನೋದ್ (23) ಮೃತ ದುರ್ದೈವಿ.
ಆರು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಈತನಿಗೆ ಬಂಧಿಸಲಾಗಿತ್ತು.ಈತ ಬೆಳಿಗ್ಗ ಸೆಲ್ ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.ಇದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಮೂಡಿದೆ.
ಪೊಲೀಸರ ಹಲ್ಲೆಯಿಂದ ಲಾಕಪ್‌ನಲ್ಲಿ ವಿನೋದ್ ಸಾವನ್ನಪ್ಪಿದ್ದಾನೆ. ಇದೊಂದು ಸಹಜ ಸಾವಲ್ಲ. ತಪ್ಪಿತಸ್ಥ ಪೊಲೀಸರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತ ವಿನೋದ್ ಕುಟುಂಬ ಆಗ್ರಹಿಸಿದೆ.







