ಈಗಂತೂ ಖದೀಮರು ಯಾವ ಯಾವ ದಾರಿಗಳಲ್ಲಿ ವಂಚನೆ ಮಾಡ್ತಾರೋ.. ಜಾಗೃತರಾಗಿರೋದೆ ಕಷ್ಟ. ಒಂದುಕಡೆ ಸೈಬರ್ ಖದೀಮರ (Cyber crime) ಹಾವಳಿ, ಮತ್ತೊಂದೆಡೆ ಸುಳ್ಳು ಹೇಳಿ ವಂಚಿಸಿ ಹಣ ಲಪಟಾಯಿಸುವ ಕಳ್ಳರ ಹಗಲು ದರೋಡೆ. ಇಂಥದ್ದೇ ಒಂದು ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ.ಶಾದಿ ಡಾಟ್ ಕಾಮ್‌ನಲ್ಲಿ (Shadi.com) ಮಹಿಳಾ ಟೆಕ್ಕಿಗೆ ದೋಖಾ ಮ್ಕಾದಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ವೈಟ್ ಫೀಲ್ಡ್ ನ (White field) 32 ವರ್ಷದ ಮಹಿಳಾ ಟೆಕ್ಕಿ ಶಾದಿ ಡಾಟ್ ಕಾಮ್ ನಲ್ಲಿ ಮದುವೆಗಾಗಿ ವರನನ್ನು ಹುಡುಕಾಡುತ್ತಿದ್ದರು.
ಈ ವೇಳೆ ರೋಷನ್ ಶಂಕರ್ (Roshan shankar),ಶಾದಿ ಡಾಟ್ ಕಾಮ್ ನಲ್ಲಿ ಮಹಿಳಾ ಟೆಕ್ಕಿ ಪ್ರೊಫೈಲ್ ನೋಡಿ ಮೆಸೇಜ್ ಮಾಡಿದ್ದ.ಮಹಿಳಾ ಟೆಕ್ಕಿ ಇ-ಮೇಲ್ (Email) ಅಕೌಂಟ್ ಗೆ ತನ್ನ ವಿವರ ಕಳುಹಿಸಿದ್ದ.ಆ ನಂತರ ವಾಟ್ಸಾಫ್ ನಂಬರ್ (Whatsapp) ಪಡೆದು ಚಾಟಿಂಗ್ ಶುರು ಮಾಡಿದ್ದ.ತಾನು ವೈದ್ಯನಾಗಿದ್ದು ಬೆಂಗಳೂರಿನಲ್ಲಿ ಸೆಟಲ್ ಆಗ್ತಾನೆಂದು ಹೇಳಿದ್ದ ಕಾರಣ ಮಹಿಳಾ ಟೆಕ್ಕಿ ಪ್ರೊಫೈಲ್ ಒಕೆ ಮಾಡಿದ್ದರು.
ಹೀಗೆ ಮಾತುಕತೆ ಮುಂದುವರೆದು, ಜನವರಿ 13ರಂದು ಬೆಂಗಳೂರಿಗೆ ಬಂದು ಮದುವೆ ಮಾತುಕತೆ ನಡೆಸೋದಾಗಿ ತಿಳಿಸಿದ್ದ ಎನ್ನಲಾಗಿದೆ.ಅಮೇರಿಕಾದಿಂದ (America) ದೆಹಲಿ ವಿಮಾನ ನಿಲ್ದಾಣಕ್ಕೆ (Delhi airport) ಬಂದಿದ್ದೇನೆ,ದೆಹಲಿಯಿಂದ ಬೆಂಗಳೂರಿಗೆ ಬರ್ತೀನಿ ಎಂದು ನಂಬಿಸಿದ್ದನಂತೆ.ಈ ವೇಳೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸಮಸ್ಯೆಯಾಗಿದೆ. ತುರ್ತಾಗಿ ಹಣದ ಅವಶ್ಯಕತೆ ಇದೆ ಎಂದು ಈ ಆರೋಪಿ ಹೊಸ ವರಸೆ ತೆಗೆದಿದ್ದ. ಆದ್ರೆ ಈತನ ವಂಚನೆ ಅರಿಯದ ಮಹಿಳೆ ಅಪರಿಚಿತನ ಮಾತನ್ನ ನಂಬಿ 28 ಲಕ್ಷ 75 ಸಾವಿರ ಹಣವನ್ನು ಮಹಿಳಾ ಟೆಕ್ಕಿ ವರ್ಗಾಯಿಸಿದ್ದಾರೆ.
ಈ ರೀತಿ ಹಣ ಬರ್ತಿದ್ದಂತೆ ಈ ರೋಷನ್ ಶಂಕರ್ ಮೊಬೈಲ್ ನಂಬರ್ ಸ್ವಿಚ್ ಆಪ್ ಮಾಡಿಕೊಂಡಿದ್ದಾನೆ.ಆ ನಂತರ ದಿಕ್ಕು ತೋಚದೆ ಕಡೆಗೆ ವೈಟ್ ಫೀಲ್ಡ್ ಸೈಬರ್ ಕ್ತೈಂ ಠಾಣೆಗೆ ಮಹಿಳಾ ಟೆಕ್ಕಿ ದೂರು ದಾಖಲಿಸಿದ್ದಾರೆ.ಡಿಸೆಂಬರ್ 14 ರಿಂದ ಸತತ ಒಂದು ತಿಂಗಳ ಕಾಲ ಮಹಿಳಾ ಟೆಕ್ಕಿ ಜೊತೆ ಆರೋಪಿ ವಾಟ್ಸಾಫ್ ಚಾಟಿಂಗ್ ಮಾಡಿರೋ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.