
ಲಕ್ನೋ: ಗ್ರಾಮದ ಯುವಕನೊಂದಿಗೆ ವಿವಾಹೇತರ ಸಂಬಂಧ ಹೊಂದಿದ ಮಹಿಯನ್ನು ಮರಕ್ಕೆ ಕಟ್ಟಿ, ಕೂದಲನ್ನು ಕತ್ತರಿಸಿ ಬಳಿಕ ಆಕೆಯ ಮುಖಕ್ಕೆ ಮಸಿ ಎರಚಿದ ಘಟನೆಯೊಂದು ಉತ್ತರಪ್ರದೇಶದ ಪ್ರತಾಪ್ಗಢದ ಹಥಿಗವಾ ಗ್ರಾಮದ ವ್ಯಾಪ್ತಿಗೆ ಬರುವ ಛೋಟ್ಕಿ ಇಬ್ರಾಹಿಂಪುರ ಗ್ರಾಮದಲ್ಲಿ ನಡೆದಿದೆ.
"एक महिला को पीटा गया,पेड़ से बांधकर सारे बाल काटकर गंजा किया गया, मुंह पर कालिख पोती गई और फिर गले मे चप्पल की माला डाली, यह सब उसके दो बेटों और बेटी के सामने हुआ"
— TRUE STORY (@TrueStoryUP) July 29, 2024
प्रतापगढ़ में हथिगवां थाना क्षेत्र के गंवई पंचायत का के इब्राहिमपुर गांव में एक महिला के साथ बर्बरता हुई। वह अपने… pic.twitter.com/QI8DISzc5N
ಮಹಿಳೆ ಈ ಗ್ರಾಮದ ಹುಡುಗನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯತ್ಗೆ ದೂರು ನೀಡಿದ್ದರು. ಪಂಚಾಯತ್ ಇಬ್ಬರಿಗೂ ಶಿಕ್ಷೆ ವಿಧಿಸಲು ಆದೇಶಿಸಿದೆ. ಆದರೆ ಆಕೆಯ ಪ್ರೇಮಿ ತಪ್ಪಿಸಿಕೊಂಡಿದ್ದಾನೆ. ಹಾಗಾಗಿ ಗ್ರಾಮಸ್ಥರು ಮಹಿಳೆಯನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಶಿಕ್ಷೆ ವಿಧಿಸಿದ್ದಾರೆ.
ಈ ಮಹಿಳೆಗೆ ಮೂವರು ಮಕ್ಕಳಿದ್ದು, ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು. ಅವಳ ಹಿರಿಯ ಮಗನಿಗೆ 12 ವರ್ಷವಾಗಿದೆ ಎಂಬುದಾಗಿ ತಿಳಿದುಬಂದಿದೆ. ಅಕ್ರಮ ಸಂಬಂಧದ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ ನಂತರವೂ ಪ್ರೇಮ ಸಂಬಂಧವನ್ನು ಮುಂದುವರಿಸಿದ್ದಕ್ಕಾಗಿ ಮಹಿಳೆಯನ್ನು ಗ್ರಾಮಸ್ಥರು ಈ ರೀತಿ ಥಳಿಸಿದ್ದಾರೆ.