ವಿವಾಹಿತ ಮಹಿಳೆಯೊಬ್ಬರು ಲಿವ್ ಇನ್ ನಲ್ಲಿದ್ದ ಸಂಗಾತಿಯನ್ನೇ ಸಹೋದರನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ನಡೆದಿದೆ.
![](https://pratidhvani.com/wp-content/uploads/2024/04/Crime-Murder-01-1024x536.jpg)
ಈ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ತಲೆ ಮತ್ತು ಕುತ್ತಿಗೆಗೆ ಪ್ಯಾನ್ನಿಂದ ಹೊಡೆದು ಕೊಲೆ(Murder) ಮಾಡಿದ್ದಾರೆಂದು ಪೊಲೀಸರು ಆರೋಪಿಸಿದ್ದು, ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ(Case Filed).
![](https://pratidhvani.com/wp-content/uploads/2022/11/Livein.jpg)
ಮಹಿಳೆ ತನ್ನ ಸಹೋದರನ(Brother) ಸಹಾಯದಿಂದ ಟಿಕ್ರಿ ಗ್ರಾಮದಲ್ಲಿ ಕೊಲೆ ಮಾಡಿದ್ದಾಳೆ. ಗುರುಗ್ರಾಮದ ಅಶೋಕ್ ವಿಹಾರ್ ನಿವಾಸಿ ನೀತು ಅಲಿಯಾಸ್ ನಿಶಾ (34) ಮತ್ತು ವಿಕ್ಕಿ (28) ಕಳೆದ ಆರು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
![](https://pratidhvani.com/wp-content/uploads/2024/05/death-2024-05-21t075440.791-1024x576.webp)
ಆರೋಪಿ(Accused) ಮಹಿಳೆಗೆ ಮದುವೆಯಾಗಿದ್ದು, ಪತಿಯಿಂದ ದೂರವಿದ್ದರು. 15 ವರ್ಷದ ಮಗಳಿದ್ದಾಳೆ. ನ್ಯಾಯಾಲಯವು ನೀತುವನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ(Custody) ಒಪ್ಪಿಸಿದೆ. ಮಹಿಳೆಯ ಸಹೋದರ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಬಲೆ(Trapped) ಬೀಸಿದ್ದಾರೆ.