ಮಂಗಳೂರು: ಅನ್ಯಕೋಮಿನ ಯುವಕರು ಬೋರ್ವೆಲ್ (Borewell) ಕೊರೆಯುತ್ತಿದ್ದ ಲಾರಿ (Lorry) ಮೇಲೆ ಕಲ್ಲು ತೂರಾಟ (Stone Pelting) ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ. ನೀರಿನ ಫ್ಯಾಕ್ಟರಿಗೆ ಸೇರಿದ ಬೋರ್ವೆಲ್ಗಳನ್ನು ಫ್ಲಶ್ ಮಾಡುವ ಬದಲು ಹೊಸದಾಗಿ ಬೋರ್ವೆಲ್ ಕೊರೆಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ.
ಸಣ್ಣ ಸಣ್ಣ ಮಕ್ಕಳು ಕೂಡ ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದಾರೆ. ಪ್ರತಿಯಾಗಿ ನೀರಿನ ಘಟಕದವರು ಕೂಡ ಕಲ್ಲು ತೂರಾಟ ನಡೆಸಿದ್ದಾರೆ. ಈ ಕುರಿತು ದೂರು, ಪ್ರತಿದೂರು ದಾಖಲಾಗಿವೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.