• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಹನಿಟ್ಯ್ರಾಪ್​ ಮಾಡುವುದಕ್ಕೇ ಪ್ರತ್ಯೇಕ ಸ್ಟುಡಿಯೋ.. ಮುನಿರತ್ನ ವಿರುದ್ಧ ನೇರ ಆರೋಪ..

Any Mind by Any Mind
July 24, 2023
in ಇತರೆ / Others, ಇದೀಗ, ಕರ್ನಾಟಕ, ರಾಜಕೀಯ
0
ಶಾಸಕ ಮುನಿರತ್ನ ಅತ್ಯಾಪ್ತ ಎಂದೇ ಕರೆಯಿಸಿಕೊಂಡಿದ್ದ ವೇಲು ನಾಯ್ಕರ್‌ ಈಗ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದು, ಈ ವೇಳೆ ಮುನಿರತ್ನ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ವೇಲು ನಾಯ್ಕರ್‌ ಕಾಂಗ್ರೆಸ್‌ ಸೇರ್ಪೆಡೆಗೊಂಡ ವೇಳೆ

Share on WhatsAppShare on FacebookShare on Telegram

ಮಾಜಿ ಸಚಿವ ಮುನಿರತ್ನ ( Munirathna ) ಅಧಿಕಾರಕ್ಕೆ ಬರುವುದಕ್ಕೆ ಹನಿಟ್ರ್ಯಾಪ್ ( ​Honey Trap ) ಎಂಬ ಅನೈತಿಕ ತಂತ್ರಗಾರಿಕೆಯನ್ನು ಬಳಸಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಇಷ್ಟು ದಿನಗಳ ಕಾಲ ಜೊತೆಯಲ್ಲೇ ಇದ್ದಂತವರು ಮುನಿರತ್ನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆ ( BBMP Election ) ಗಮನದಲ್ಲಿ ಇಟ್ಟುಕೊಂಡು ರಾಜರಾಜೇಶ್ವರಿ ನಗರ ( Rajarajeshwari Nagar ) ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್​ ಪಕ್ಷ ( Congress Party ) ಸಂಘಟನೆಗೆ ಕೈ ಹಾಕಿರುವ ಡಿ.ಕೆ ಶಿವಕುಮಾರ್​ ( D.K. Shivakumar )​ ಹಾಗು ಡಿ.ಕೆ ಸುರೇಶ್​ ( D.K. Suresh ) ಹಾಲಿ ಶಾಸಕ ಮುನಿರತ್ನ ಬೆಂಬಲಿಗರಿಗೆ ಗಾಳ ಹಾಕಿದ್ದಾರೆ. ಈ ಮೂಲಕ ಮುನಿರತ್ನಗೆ ಬಿಗ್ ಶಾಕ್ ನೀಡಿದ್ದಾರೆ ಡಿಕೆ ಬ್ರದರ್ಸ್. ಇದರ ನಡುವೆ ಶಾಸಕ ಮುನಿರತ್ನ ಅತ್ಯಾಪ್ತ ಎಂದೇ ಗುರುತಿಸಿದ್ದ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಸಿಡಿಸಿರುವ ಬಾಂಬ್​ ತೀವ್ರತೆ ಪಡೆದುಕೊಂಡಿದೆ.

ADVERTISEMENT

ಶಾಸಕ ಮುನಿರತ್ನ ವಿರುದ್ಧ ವೇಲು ನಾಯ್ಕರ್​ ಆರೋಪ..!

ಬಿಬಿಎಂಪಿ ಚುನಾವಣೆ ಹೊಸ್ತಿಲಲ್ಲಿ ಹನಿಟ್ರ್ಯಾಪ್ ಸದ್ದು ಮಾಡುತ್ತಿದೆ. ಶಾಸಕ ಮುನಿರತ್ನ ಆಪ್ತ ವೇಲು ನಾಯ್ಕರ್ ಹನಿಟ್ರ್ಯಾಪ್ ಆರೋಪ ಮಾಡಿದ್ದು, ಸ್ವತಃ ಶಾಸಕ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು ಎಂದಿದ್ದಾರೆ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುವ ಕಾರ್ಯಕ್ರಮದಲ್ಲಿ ವೇಲು ನಾಯ್ಕರ್ ಈ ಗಂಭೀರ ಆರೋಪ ಮಾಡಿದ್ದಾರೆ. ಸಚಿವರಾಗಿದ್ದ ವೇಳೆ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು. ಕಳೆದ ಬಾರಿ ನಾವು ಮುನಿರತ್ನ ಅವರ ಪರ ಕೆಲಸ ಮಾಡಲು ನಾವು ಸಿದ್ಧರಿರಲಿಲ್ಲ. ಹಾಗಾಗಿ ಮುನಿರತ್ನ ನಿಮ್ಮಗಳ ಈಸ್ಟ್ ಮನ್ ಕಲರ್ ಪಿಕ್ಚರ್ ಇದೆ ತೋರಿಸ್ಲಾ ಇಲ್ಲ ಕೆಲಸ ಮಾಡ್ತಿರಾ ಅಂತ ಹೆದರಿಸುತ್ತಿದ್ದರು, ಇದೇ ಕಾರಣಕ್ಕಾಗಿ ಅನಿವಾರ್ಯವಾಗಿ ಬಿಜೆಪಿ ಪರ ಕೆಲಸ ಮಾಡಬೇಕಾಯ್ತು ಎಂದಿದ್ದಾರೆ.

RR ನಗರ, ಡಾಲರ್ಸ್​ ಕಾಲೋನಿಯಲ್ಲಿ ಹನಿಟ್ರ್ಯಾಪ್ ಸ್ಟುಡಿಯೋ..!

ಸಚಿವರಾಗಿದ್ದ ವೇಳೆ ಹನಿಟ್ರ್ಯಾಪ್​ ಮಾಡಿಸುವುದಕ್ಕೆ ಪ್ರತ್ಯೇಕವಾಗಿ ಎರಡು ಸ್ಟುಡಿಯೋಗಳನ್ನು ಮಾಡಿಕೊಂಡಿದ್ದರು. ಯಶವಂತಪುರ ಬಳಿಯ ಜೆಪಿ ಪಾರ್ಕ್‌‌ನಲ್ಲಿ ಹನಿಟ್ರ್ಯಾಪ್​ಗಾಗಿ ಪ್ರತ್ಯೇಕ ಸ್ಟುಡಿಯೋ ಇದೆ. ಅದೇ ರೀತಿ ಡಾಲರ್ಸ್ ಕಾಲೊನಿಯಲ್ಲೂ ಒಂದು ಹನಿಟ್ರ್ಯಾಪ್​ ಸ್ಟುಡಿಯೋ ಇದೆ ಎಂದಿದ್ದಾರೆ. ಹನಿಟ್ರ್ಯಾಪ್ ಮಾಡುವುದಕ್ಕೆ ಅಂತಾನೇ ಮುನಿರತ್ನ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಆಂಟಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡೋದು, ಆಮೇಲೆ ಹೆದರಿಸೋದು ಮುನಿರತ್ನ ಕಾಯಕ ಎಂದಿರುವ ವೇಲು ನಾಯ್ಕರ್​, ಮುನಿರತ್ನ ಮಾಡಿದ ಮೊದಲ ಚಿತ್ರ ಆಂಟಿ ಪ್ರೀತ್ಸೆ. ಹೀಗಾಗಿ ಅವರು ಸಚಿವರಾದ ಮೇಲೂ ವಿಧಾನಸೌಧ ಚೇಂಬರ್​ನಲ್ಲೆಲ್ಲ ಬರೀ ಆಂಟಿಯರೇ ಇರ್ತಿದ್ರು. ಸಿನಿಮಾ ಪ್ರೊಡ್ಯುಸರ್ ಅಲ್ವಾ ಹಾಗಾಗಿ ಹನಿಟ್ರ್ಯಾಪ್ ಮಾಡೋದು ಸಲೀಸು ಎಂದಿದ್ದಾರೆ.

ಸೋಲಿನ ಸೇಡು ಪಾಲಿಕೆಯಲ್ಲಿ ತೀರಿಸಲು ಕಸರತ್ತು..!

ವಿಧಾನಸಭಾ ಚುನಾವಣೆಯಲ್ಲಿ ಕುಸುಮಾ ಹನುಮಂತರಾಯಪ್ಪ ಕಾಂಗ್ರೆಸ್​ ಅಭ್ಯರ್ಥಿ ಆಗಿ ಸೋಲುಂಡಿದ್ದರು. ಸ್ವತಃ ಸಂಸದ ಡಿ.ಕೆ ಸುರೇಶ್​ ನೇತೃತ್ವದಲ್ಲಿ ಚುನಾವಣೆ ನಡೆದರೂ ಸೋಲು ಎದುರಾಗಿತ್ತು. ಆ ಸೋಲಿಗೆ ಪ್ರಮುಖ ಕಾರಣ ಶಾಸಕ ಮುನಿರತ್ನ ಆಪ್ತ ವಲಯದಲ್ಲಿ ಗುರುತಿಸಿದ್ದ ವೇಲು ನಾಯ್ಕರ್, ಮೋಹನ್ ಕುಮಾರ್, ಶ್ರೀನಿವಾಸ್ ಮೂರ್ತಿ ಎನ್ನುವುದನ್ನು ಮನಗಂಡ ಕಾಂಗ್ರೆಸ್​ ನಾಯಕರು, ಆ ಮೂವರನ್ನು ಕಾಂಗ್ರೆಸ್​​ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಅವಧಿಯಲ್ಲಿ ಪಾಲಿಕೆ ಸದಸ್ಯರಾಗಿ ಆಯ್ಕೆ ಆಗಿದ್ದ ಈ ಮೂವರು, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಸಮ್ಮುಖದಲ್ಲೇ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಕಾಂಗ್ರೆಸ್​ ಸೇರುತ್ತಿದ್ದ ಹಾಗೆ ಮಾಜಿ ಸಚಿವ ಮುನಿರತ್ನ ವಿರುದ್ಧ ಗಂಭೀರ ಆರೋಪ ಮಾಡಿರುವುದು ಸಂಚಲನ ಸೃಷ್ಟಿಸಿದೆ.

ಕೃಷ್ಣಮಣಿ

Tags: DKShivakumarDKSureshkusumaMuniratnaRRNagar
Previous Post

ಲಿಂಗ ಸೂಕ್ಷ್ಮತೆ ಇಲ್ಲದ ಪುರುಷಾಧಿಪತ್ಯದ ನಡುವೆ- ಭಾಗ 2

Next Post

‘ಸಾವಿನ ವ್ಯಾಪಾರಿ’ಯಾಗಿ “ಜವಾನ್” ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಜಯ್ ಸೇತುಪತಿ

Related Posts

ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?
ರಾಜಕೀಯ

ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

by ಪ್ರತಿಧ್ವನಿ
April 27, 2026
0

ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೋರಾಟ ಕೇವಲ ಪಕ್ಷಗಳ ನಡುವಿನ ಪೈಪೋಟಿಯಲ್ಲ, ಪ್ರಾದೇಶಿಕ ಅಸ್ಮಿತೆ ಮತ್ತು ರಾಷ್ಟ್ರೀಯ ರಾಜಕೀಯದ ನಡುವಿನ ಸಂಘರ್ಷವಾಗಿ ರೂಪುಗೊಂಡಿದೆ. ಇದೇ ಹಿನ್ನೆಲೆಯಲ್ಲಿ...

Read moreDetails
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಬಂಗಾಳದಲ್ಲಿ ದೀದಿ ಎಷ್ಟು ಪವರ್ ಫುಲ್ ಲೇಡಿ..? ಮೋದಿ ಮಣಿಸುತ್ತಾಳಾ ಈ ಗಟ್ಟಿಗಿತ್ತಿ..?

April 27, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

April 26, 2026
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
Next Post
ಜವಾನ್ ಚಿತ್ರದಲ್ಲಿ ಅಭಿನಯಿಸುತ್ತಿರುವ ವಿಜಯ್ ಸೇತುಪತಿ ಅವರ ಹೊಸ ಪೋಸ್ಟರ್ ರಿಲೀಸ್ ಆಗಿದೆ

‘ಸಾವಿನ ವ್ಯಾಪಾರಿ’ಯಾಗಿ "ಜವಾನ್" ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಜಯ್ ಸೇತುಪತಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada