ಹೈದರಾಬಾದ್ : ಇಲ್ಲಿನ ಚಾರ್ ಮಿನಾರ್‌ನ ಎತ್ತರದ ಭಾಗದಲ್ಲಿ ಸಾಲಾಗಿರುವ ಸಾಕಷ್ಟು ಕಮಾನಿನ ಕಿಟಕಿಗಳ ಮೇಲೆ ವ್ಯಕ್ತಿಯೊಬ್ಬ ಹುಚ್ಚಾಟ ಮೆರೆದಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ಈತನ ಅಪಾಯಕಾರಿ ಹುಚ್ಚಾಟ ಕಂಡು ಜನ ಗಾಬರಿಯಾಗಿದ್ದಾರೆ.
A man was spotted walking dangerously between windows on the #Charminar. Police suspect he might be one of the construction workers in the area#Hyderabad #GHMC #RevanthReddy #Hydraa #SSRajamouli #TheyCallHimOG #SWAG #KeerthySuresh pic.twitter.com/uXQ1pY8Ktg
— Pakka Telugu Media (@pakkatelugunewz) October 5, 2024
ಇದೇ ವೇಳೆ ಅಲ್ಲೇ ಸಾಗಿ ಹೋಗುತ್ತಿದ್ದ ದಾರಿಹೋಕರೊಬ್ಬರು ಈ ವ್ಯಕ್ತಿಯ ಹುಚ್ಚಾಟವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ರೀತಿ ದುಸ್ಸಾಹಸಕ್ಕೆ ಮುಂದಾಗಿದ್ದ ವ್ಯಕ್ತಿ, ಹೀಗೆ ಮುಂದೆ ಸಾಗುತ್ತಾ ಅಪಾಯವನ್ನು ಆಹ್ವಾನಿಸಿದ್ದ. ಇದೇ ವೇಳೆ ಇನ್ನೊಬ್ಬ ವ್ಯಕ್ತಿ ಕೂಡ ಮಿನಾರ್‌ಗಳ ಮೇಲೆ ನಿಂತು ನೋಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಇನ್ನು ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಈ ಬಗ್ಗೆ ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ. ಚಾರ್ ಮಿನಾರ್ ನ ಈ ಭಾಗದಲ್ಲಿ ನಿರ್ಮಾಣ ಕೆಲಸ ನಡೆಯುತ್ತಿದ್ದು, ಈತ ಕಾರ್ಮಿಕರಲ್ಲಿ ಒಬ್ಬನಾಗಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.