ಮೈಸೂರು : ಮೇ 12 : ಮತಹಾಕಲು ಮತಗಟ್ಟೆಗೆ ಬಂದಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಮತಯಂತ್ರವನ್ನೆ ಒಡೆದು ಹಾಕಿರುವ ಘಟನೆ ಮೈಸೂರಿನ ಹೂಟಗನಹಳ್ಳಿಯಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥ ವ್ಯಕ್ತಿ ಮತಯಂತ್ರ ಒಡೆದು ಹಾಕಿ ಆಕ್ರೋಶ ವ್ಯಕ್ತಿ ಪಡಿಸಿದ್ದಾನೆ. ಸರತಿ ಸಾಲಿನಲ್ಲಿ ಬಂದು ಮತ ಹಾಕಲು ನಿಂತಿದ್ದ, ಈ ವೇಳೆ ಚುನಾವಣಾ ಅಧಿಕಾರಿ ಬೆರಳಿಗೆ ಶಾಯಿ ಹಾಕಿಸಿಕೊಂಡು ಮತಗಟ್ಟೆಗೆ ತೆರಳುವಾಗ ಮತಯಂತ್ರ ಒಡೆದು ಹಾಕಿದ್ದಾನೆ.
ಮಾನಸಿಕ ಅಸ್ವಸ್ಥ ವ್ಯಕ್ತಿಯ ದಾಂದಲೇಯಿಂದ ಚುನಾವಣಾ ಸಿಬ್ಬಂದಿ ಬೆಚ್ಚಿಬಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಮತಯಂತ್ರ ಒಡೆದ ವ್ಯಕ್ತಿಯನ್ನ ಮತಗಟ್ಟೆಯಿಂದ ಹೊರಕ್ಕೆ ಕಳಿಸಿದ್ದಾರೆ. ಸದ್ಯ ಈ ವ್ಯಕ್ತಿಯನ್ನುಮೈಸೂರಿನ ವಿಜಯನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದಾರೆ.