ಪಕ್ಕದ ರಾಜ್ಯಕ್ಕೆ ಪರಿಹಾರ ನಿಡೋ ಮುಖ್ಯಮಂತ್ರಿಗಳು ನೋಡಲೆಬೇಕಾದ ಸ್ಟೋರಿ, ಮಲತಾಯಿ ಧೋರಣೆ ನಡೆಸ್ತಾ ಇರೋ ಸರ್ಕಾರ ಆಲಿಸಲೇಬೇಕಾದ ಸಮಸ್ಯೆ ಕಂಡು ಕಾಣದಂತಿರುವ ಜಿಲ್ಲಾಡಳಿತ ಮೇಲೆ ಚಾಟಿ ಬಿಸಲೇಬೇಕಾದ ಸುದ್ದಿ ಸದನದಲ್ಲೂ ಸದ್ದು ಮಾಡಲೇಬೆಕಾಗಿದ್ದ ಪ್ರಮುಖ ಅಂಶವಿದು..

ಮಲೆನಾಡ ಜನರ ಗೋಳಿನ ಕಥೆ ಬಿಚ್ಚಿಡ್ತಾ ಇದೆ, ಮಲೆನಾಡಲ್ಲಿ 2019 ರಲ್ಲಿ ಸುರಿದಿದ್ದ ಮಾಹಾಮಳೆ ಸೃಷ್ಟಿಸಿತ್ತು ಮಾಹಾದುರಂತ. ಮಳೆಯಲ್ಲಿ ಕೊಚ್ಚಿ ಹೋಗಿತ್ತು ಮೂಡಿಗೆರೆ ತಾಲ್ಲೊಕಿನ ಮಲೆಮನೆ ಮಧುಗುಂಡಿ ಗ್ರಾಮ, ನಿರಂತರ ಮಳೆಗೆ ಕೊಚ್ಚಿ ಹೋಗಿತ್ತು ಹಲವು ಕುಟುಂಬಗಳ ಜೀವನ ಮನೆ ಮಠ, ತೊಟಗಳನ್ನ ಕಳೆದುಕೊಂಡು ಕಂಗಲಾಗಿದ್ದ ಹಲವು ಕುಟುಂಬಗಳು ಅನಾಹುತ ಸಂದರ್ಭದಲ್ಲಿ ಹಲವು ರಾಜಕರಣಿಗಳು ಬೇಟಿ ಕೊಟ್ಟಿದ್ರು ಬೇಟಿ ಕೊಟ್ಟು ಹಲವು ಭರವಸೆಗಳನ್ನ ನೀಡಿದ್ದ ಜನಪ್ರತಿನಿಧಿಗಳು.

ಪ್ರತಿ ವರ್ಷದ ಮಳೆಯಲ್ಲಿ ಕೊಚ್ಚಿ ಹೊಗ್ತಾ ಇರೋ ಜನಪ್ರತಿನಿಧಿಗಳ ಭರವಸೆ, 6 ವರ್ಷದಿಂದ 5 ತಿಂಗಳು ಮಾತ್ರ ಬಾಡಿಗೆ ನೀಡಿದ್ದ ಸರ್ಕಾರ ಇದುವರೆಗೂ ಸೂರು ಕಟ್ಟಿಕೊಳ್ಳಲು ಸೂಕ್ತ ಪರಿಹಾರ ನೀಡದ ಸರ್ಕಾರ ಹಾಗು ಜಿಲ್ಲಾಡಳಿತ ಇನ್ನು ಕೂಡ ಸಂಕಷ್ಟದಲ್ಲೆ ಬಾಡಿಗೆ ಮನೆಯಲ್ಲಿ ವಾಸ ಮಾಡ್ತ ಇರೋ ಕುಟುಂಬಗಳು ಆರು ವರ್ಷವಾದ್ರೂ ಪರಿಹಾರ ಮಾತ್ರ ಇವರ ಪಾಲಿಗೆ ಮರಿಚೀಕೆಯಾಗಿದೆ ಸೂಕ್ತ ಪರಿಹಾರ ಸಿಗದೇ ನೊಂದು ಕಮರಿ ಹೋಗಿರೋ ಹಿರಿಯ ಜೀವಗಳು ಇನ್ನು ಸದನದಲ್ಲಿ ಸದ್ದು ಮಾಡಬೇಕಾದ ಶಾಸಕರು ಸದ್ದಿಲ್ಲದೆ ಬೆಂಗಳೂರು ಸೇರಿಕೊಂಡಿದ್ದಾರೆ. ಇತ್ತ ಪರಿಹಾರ ಯಾವಾಗ ಸಿಗೋತ್ತೋ ಅನ್ನೊ ಚಿಂತೆಯಲ್ಲಿದ್ದಾರೆ ನಿರಾಶ್ರಿತ ಜನ