
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ NSUI ಕರ್ನಾಟಕ ವತಿಯಿಂದ ಸುದ್ದಿಗೋಷ್ಟಿ ನಡೆಸಿದ್ದು, ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ನ ಅಧ್ಯಕ್ಷ ಕೀರ್ತಿ ಗಣೇಶ್ ಹಾಗೂ NSUI ಉಸ್ತುವಾರಿ ಬಸವಣ್ಣ ಹಾಗೂ ಪದಾಧಿಕಾರಿಗಳು ಭಾಗಿಯಾಗಿದ್ದರು. ವಿದ್ಯಾರ್ಥಿ ನ್ಯಾಯ ಯಾತ್ರೆಯ ಕುರಿತು ಮಾಹಿತಿ ಹಂಚಿಕೊಂಡಿದ್ದು, NSUI ವತಿಯಿಂದ ವಿದ್ಯಾರ್ಥಿ ನ್ಯಾಯಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಅಧ್ಯಕ್ಷ ಕೀರ್ತಿ ಗಣೇಶ್.

ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಎಲೆಕ್ಷನ್ ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಹೇಳಿಕೊಳ್ಳಲು ಯಾವುದೇ ವೇದಿಕೆ ಇಲ್ಲ. ವಿದ್ಯಾರ್ಥಿಗಳ ಸಮಸ್ಯೆಯನ್ನ ಬಗೆಹರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ನ್ಯಾಯಯಾತ್ರೆ ಮಾಡ್ತಿದ್ದೇವೆ. ವಿದ್ಯಾರ್ಥಿಗಳು ಸಮಸ್ಯೆ ಇದ್ದಲ್ಲಿ ನಮ್ಮ ಗಮನಕ್ಕೆ ತರಬಹುದು. ಮಾಹಿತಿಯ ಕೊರತೆಯನ್ನ ವಿದ್ಯಾರ್ಥಿಗಳು ಅನುಭವಿಸ್ತಾರೆ. ಸರ್ಕಾರ ನೀಡುವ ಸ್ಕಾಲರ್ಶಿಪ್ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ನಾವು ಎಲ್ಲಾ ಕಾಲೇಜು ಬಳಿಗೂ ಹೋಗ್ತೇವೆ. ಕ್ಯೂ-ಆರ್ ಕೋಡ್ ಇರುವ ಭಿತ್ತಿಪತ್ರವನ್ನು ಅಂಟಿಸುತ್ತೇವೆ. ವಿದ್ಯಾರ್ಥಿಗಳು QR Code ಸ್ಕ್ಯಾನ್ ಮಾಡುವ ಮೂಲಕ ನಮ್ಮನ್ಮ ಸಂಪರ್ಕಿಸಬಹುದು ಎಂದಿದ್ದಾರೆ. ಇದೇ ವೇಳೆ ವಿದ್ಯಾರ್ಥಿ ನ್ಯಾಯ ಯಾತ್ರೆಯ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಆದರೆ ಇದೇ ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸಿ ಎಂದು ಮನವಿಯೊಂದು ಹೋಗಿದ್ದಾಗ, ಕಾಲೇಜುಗಳಲ್ಲಿ ದ್ವೇಷ ಭಾವನೆ ಬಿತ್ತಿದಂತಾಗುತ್ತದೆ ಎನ್ನುವ ಕಾರಣಕ್ಕೆ ತಿರಸ್ಕಾರ ಮಾಡಿದರು ಅನ್ನೋ ಆರೋಪವೂ ಇದೆ.

ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಬಳಿಗೆ ಹೋಗಿ ಕಾಲೇಜುಗಳಲ್ಲಿ ಕ್ಯೂಆರ್ ಕೋಡ್ ಇರುವ ಪಾಂಪ್ಲೆಟ್ ವಿತರಿಸ್ತೇವೆ. ಜೊತೆಗೆ ನೋಂದಣಿ ಮಾಡಿಸುವ ಕೆಲಸವನ್ನ ಮಾಡ್ತೇವೆ ಎಂದಿದ್ದಾರೆ. ಅಂದರೆ ಇದು ವಿದ್ಯಾರ್ಥಿಗಳ ಸಮಸ್ಯೆ ಆಲಿಸುವುದಕ್ಕಿಂತಲೂ ಅಲ್ಲಿನ ವಿದ್ಯಾರ್ಥಿ ಸಮೂಹವನ್ನು NSUI ಗೆ ನೋಂದಣಿ ಮಾಡಿಸುವುದು. ಯುವಕ ಯುವತಿಯನ್ನು ಕಾಂಗ್ರೆಸ್ ಕಾರ್ಯಕ್ರಮಗಳ ಕಡೆಗೆ ಒಲವು ಮೂಡುವಂತೆ ಮಾಡುವುದು ಇದರ ಹಿಂದಿನ ಉದ್ದೇಶ ಎನ್ನುವಂತಾಗಿದೆ.