PVR ಸಿನಿಮಾ, ಐನಾಕ್ಸ್ ರೀತಿಯ ಮಲ್ಟಿಪ್ಲೆಕ್ಸ್ ಗಳ ವಿರುದ್ಧ ಅಸಮಾಧಾನಗೊಂಡ ಪ್ರೇಕ್ಷಕನೊಬ್ಬ ವ್ಯವವಾಹಗಳ ನ್ಯಾಯಾಲಯದಲ್ಲಿ ಕೇಸ್ ಹಾಕಿ ಗೆದ್ದಿರುವ ವಿಶಿಷ್ಟ ಪ್ರಕರಣ ಬೆಳಕಿಗೆ ಬಂದಿದೆ.

ಹೌದು ಸದಾ ಕೆಲಸದಲ್ಲಿ ಬ್ಯುಸಿ ಆಗಿರುವ ವ್ಯಕ್ತಿಯೊಬ್ಬರು ತಾವು ಸಿನಿಮಾ ನೋಡಲು ಹೋದಾಗ ಅನಾವಶ್ಯಕವಾಗಿ ಅತಿ ಹೆಚ್ಚು ಜಾಹೀರಾತುಗಳನ್ನು ಪ್ರದರ್ಶಿಸಿ ತಮ್ಮ ಸಮಯವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿ PVR & INOX ವಿರುದ್ಧ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದರು.
ಹೀಗೆ ಕೋರ್ಟ್ ಮೋರೆ ಹೋಗಿದ್ದವನಿಗೆ ಬಂಪರ್ ಪರಿಹಾರದ ಹಣ ಸಿಕ್ಕಿದೆ. ಬೆಂಗಳೂರಿನ ಅಭಿಷೇಕ್ ಎಂಬುವವರು 2023ರಲ್ಲಿ ತನ್ನ ಬ್ಯುಸಿ ಷೆಡ್ಯೂಲ್ ಮಧ್ಯೆಯೂ ಶ್ಯಾಮ್ ಬಹಾದ್ದೂರ್ ಸಿನಿಮಾ ವೀಕ್ಷಣೆಗೆ PVR ಸಿನಿಮಾಗೆ ಹೋಗಿದ್ದರು. ಆದರೆ ಇದೇ ವೇಳೆ ಥಿಯೇಟರ್‌ನಲ್ಲಿ ಸಿನಿಮಾ ಆರಂಭಕ್ಕೂ ಮುನ್ನ 25 ರಿಂದ 30 ನಿಮಿಷ ಜಾಹೀರಾತು ಪ್ರಸಾರ ಮಾಡಲಾಗಿದೆ.

ಇದಕ್ಕೆ ತಾಳ್ಮೆ ಕಳೆದುಕೊಂಡ ಪ್ರೇಕ್ಷಕ ಥಿಯೇಟರ್‌ನಲ್ಲಿ ಎಷ್ಟು ನಿಮಿಷ ಜಾಹೀರಾತು ಪ್ರಸಾರ ಮಾಡುತ್ತೇವೆ ಎಂದು ತಮಗೆ ಮೊದಲೇ ತಿಳಿಸಿರಲಿಲ್ಲ. ಇದರಿಂದಾಗಿ ನನಗೆ ಮಾನಸಿಕ ಹಿಂಸೆಯಾಗಿದೆ ಗ್ರಾಹಕ ವ್ಯವಹಾರಗಳ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದೀಗ ಈ ವ್ಯಕ್ತಿಯ ಅರ್ಜಿಯನ್ನು ಮಾನ್ಯ ಮಾಡಿದ ಬೆಂಗಳೂರು ಜಿಲ್ಲಾ ಗ್ರಾಹಕ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಸಿನಿಮಾ ವೀಕ್ಷಕನಿಗೆ 20 ಸಾವಿರ ರೂಪಾಯಿ ಪರಿಹಾರ ನೀಡಲು PVR ಸಿನಿಮಾ, ಐನಾಕ್ಸ್‌ಗೆ ಕೋರ್ಟ್ ಸೂಚನೆ ನೀಡಿದೆ. ಇದರ ಜೊತೆಗೆ ಕೋರ್ಟ್ ವೆಚ್ಚವಾಗಿ 8 ಸಾವಿರ ರೂಪಾಯಿ ನೀಡಲು ಸೂಚಿಸಿದೆ.