• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಂಸತ್​ ಭವನದ ಬಳಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಪ್ರತಿಧ್ವನಿ by ಪ್ರತಿಧ್ವನಿ
December 26, 2024
in Top Story, ಇತರೆ / Others
0
Share on WhatsAppShare on FacebookShare on Telegram

ನವದೆಹಲಿ:ಹೊಸ ಸಂಸತ್​ ಭವನದ ಬಳಿ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ. ತಕ್ಷಣವೇ ಬೆಂಕಿ ನಂದಿಸಿ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ADVERTISEMENT

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಉತ್ತರ ಪ್ರದೇಶದ ಬಾಗಪತ್​ ನಿವಾಸಿ ಜಿತೇಂದ್ರ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ 3.35ರ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಸಂಸತ್​ ಭವನದ ಎದುರಿನ ರೈಲ್ವೆ ಭವನದ ಬಳಿ ಜಿತೇಂದ್ರ ಅವರು, ತಾವೇ ಬೆಂಕಿ ಹೊತ್ತಿಸಿಕೊಂಡಿದ್ದಾರೆ. ಇದನ್ನು ಕಂಡ ಅಲ್ಲಿದ್ದ ಸಿಬ್ಬಂದಿ ನೆರವಿಗೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ಘಟನೆಯ ಕುರಿತು ಅಗ್ನಿಶಾಮಕಕ್ಕೆ ಮಾಹಿತಿ ನೀಡಲಾಗಿದ್ದು, ಅಲ್ಲಿಗೆ ಬಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗಾಯಾಳುವನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಹೇಳಿಕೆ: ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ದೇವೇಶ್ ಕುಮಾರ್ ಮಹಲಾ, “ಉತ್ತರ ಪ್ರದೇಶದ ಬಾಗ್‌ಪತ್‌ನ ನಿವಾಸಿ ಜಿತೇಂದ್ರ ಎಂಬ ವ್ಯಕ್ತಿ ಸಂಸತ್​ ಭವನದ ರೈಲ್ವೆ ಭವನದ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಪೊಲೀಸರು ಮತ್ತು ಕೆಲವು ನಾಗರಿಕರು ತಕ್ಷಣವೇ ಬೆಂಕಿಯನ್ನು ನಂದಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅವರು ಯಾವುದೇ ಪ್ರಕರಣದಿಂದಾಗಿ ನೊಂದಿದ್ದಕ್ಕೆ ಈ ರೀತಿ ಮಾಡಿಕೊಂಡಿದ್ದಾಗಿ” ತಿಳಿದು ಬಂದಿದೆ ಎಂದು ಹೇಳಿದ್ದಾರೆ.

“ಬೆಂಕಿ ಹೊತ್ತಿಕೊಂಡ ಪರಿಣಾಮ ಅವರ ಬ್ಯಾಗ್​ ಮತ್ತು ಕೆಲ ದಾಖಲೆಗಳು ಅರ್ಧಂಬರ್ಧ ಸುಟ್ಟಿವೆ. ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್​ನೋಟ್​ ಸಿಕ್ಕಿಲ್ಲ. ಬುಧವಾರ ಬೆಳಗ್ಗೆ ರೈಲಿನಲ್ಲಿ ಅವರು ಉತ್ತರಪ್ರದೇಶದಿಂದ ದೆಹಲಿಗೆ ಬಂದಿದ್ದಾರೆ. ಗಾಯಾಳು ಕುಟುಂಬ ಸದಸ್ಯರನ್ನು ಸಂಪರ್ಕಿಸಲಾಗಿದೆ.ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಅವರು ಮಾಹಿತಿ ನೀಡಿದರು.

Tags: DCP Devesh KumarJitendraman tried to commit suicideNew Delhi:New Parliament HouseParliament HouseRailway Building oppositeUttar Pradesh.
Previous Post

1924 ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಪೂರ್ವಸಿದ್ಧತೆ ವೀಕ್ಷಿಸಿದ ಸಿಎಂ

Next Post

ಅಂಕೆಗೇಡಿತನ ಎಂಬುದಕ್ಕೆ ಸಮಾನಾರ್ಥಕ ಏನು?

Related Posts

*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*
Top Story

*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*

by ಪ್ರತಿಧ್ವನಿ
August 29, 2026
0

*ಬೆಂಗಳೂರು, ಆಗಸ್ಟ್ 29, 2026*: ಪಿಎಂ ಇ-ಡ್ರೈವ್ ಯೋಜನೆಯಡಿ ರಾಜ್ಯದ ಸರ್ಕಾರಿ ಇಲಾಖೆಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ ಆವರಣಗಳಲ್ಲಿ ಲಭ್ಯವಿರುವ ಸೂಕ್ತ ಸ್ಥಳಗಳನ್ನು ಬಳಸಿಕೊಂಡು ಸಾರ್ವಜನಿಕ...

Read moreDetails
ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

August 29, 2026
ಜಾತಿ ನೋಡದೆ ಆರ್ಥಿಕ ಸ್ಥಿತಿ ಆಧರಿಸಿ ಗ್ಯಾರಂಟಿ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

ಜಾತಿ ನೋಡದೆ ಆರ್ಥಿಕ ಸ್ಥಿತಿ ಆಧರಿಸಿ ಗ್ಯಾರಂಟಿ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

August 29, 2026
‘ಹಣ ಕೊಟ್ಟರೆ ಜೈಲಿನಲ್ಲಿ ರಾಜಾತಿಥ್ಯ’! ಮಂಡ್ಯ ಕಾರಾಗೃಹದ ಪತ್ರದಲ್ಲಿ ಗಂಭೀರ ಆರೋಪ

‘ಹಣ ಕೊಟ್ಟರೆ ಜೈಲಿನಲ್ಲಿ ರಾಜಾತಿಥ್ಯ’! ಮಂಡ್ಯ ಕಾರಾಗೃಹದ ಪತ್ರದಲ್ಲಿ ಗಂಭೀರ ಆರೋಪ

August 29, 2026
ರೋಗಿಗಳ ಜೀವದ ಜೊತೆ ಚೆಲ್ಲಾಟವೇ? ರಾಜ್ಯದಲ್ಲಿ 98 ಕಳಪೆ ಔಷಧ ಪತ್ತೆ

ರೋಗಿಗಳ ಜೀವದ ಜೊತೆ ಚೆಲ್ಲಾಟವೇ? ರಾಜ್ಯದಲ್ಲಿ 98 ಕಳಪೆ ಔಷಧ ಪತ್ತೆ

August 29, 2026
Next Post

ಅಂಕೆಗೇಡಿತನ ಎಂಬುದಕ್ಕೆ ಸಮಾನಾರ್ಥಕ ಏನು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada