
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಹೊಳೆಬಾಗಿಲಲ್ಲಿ ಶರಾವತಿಯ ಹಿನ್ನೀರಿನಲ್ಲಿ ತೂಗುಸೇತುವೆಯಲ್ಲಿ “740 ಮೀಟರ್ ಕೇಬಲ್ ನೆರವು” ಇರುವ ತೂಗು ಸೇತುವೆ ಇದಾಗಿದ್ದು, ದೇಶದ ಎರಡನೇ ಅತೀ ದೊಡ್ಡ ತೂಗುಸೇತುವೆಯಾಗಿ ಜುಲೈ 14 ರಂದು ಸಂಚಾರಕ್ಕೆ ಮುಕ್ತವಾಯಿತು
“2019ರ ಡಿಸೆಂಬರ್‌ನಲ್ಲಿ ಕಾಮಗಾರಿ ಶುರುವಾಯಿತು.
40 ರ ದಶಕದಲ್ಲಿ ಜೋಗದ ಬಳಿ ಜಲವಿದ್ಯುತ್ ಉತ್ಪಾದನೆಗೆ ನೀರು ಸಂಗ್ರಹಕ್ಕೆ ಸಾಗರ ತಾಲ್ಲೂಕಿನ ಮಡೇನೂರು ಬಳಿ ಶರಾವತಿ ನದಿಗೆ ಮೈಸೂರು ಸಂಸ್ಥಾನವು ಒಂದು ಪುಟ್ಟ “ಹಿರೇಭಾಸ್ಕರ” ಅಣೆಕಟ್ಟೆಯನ್ನು ನಿರ್ಮಿಸಿತು.ಮುಂದೆ ಜೋಗದ ಪರಿಸರದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚುತ್ತಿದ್ದಂತೆಯೇ ಮೊದಲಿದ್ದ ಹಿರೇಭಾಸ್ಕರ ಅಣೆಕಟ್ಟೆಯನ್ನು ಮುಳುಗಿಸಿ 1964 ರಲ್ಲಿ ಲಿಂಗನಮಕ್ಕಿ ಜಲಾಶಯಯನ್ನು ನಿರ್ಮಿಸಿದರು.ಇದರಿಂದ ಶರಾವತಿಯ ಹಿನ್ನೀರಿನ ಒಡಲಲ್ಲಿ ನೀರಿನ ಸಂಗ್ರಹ ಮತ್ತಷ್ಟು ಹೆಚ್ಚಿತು.ಆಗ ಕರೂರು -ಬಾರಂಗಿ ಹೋಬಳಿಗಳ ಭೂಪ್ರದೇಶಗಳು,ಮಲೆನಾಡಿನ ಹಳ್ಳಿಗಳು ,ಸಾಮಾನ್ಯ ಸಣ್ಣ ಪೇಟೆಗಳು “ಶರಾವತಿಯ ಹೆಚ್ಚಿನ ಹಿನ್ನೀರಿನಿಂದ” ದ್ವೀಪಗಳಂತೆ ಆಗಿಬಿಟ್ಟವು.ಇದರಿಂದ ಕರೂರು -ಬಾರಂಗಿ ಎರಡೂ ಹೋಬಳಿಗಳ ವ್ಯಾಪ್ತಿಯ 60ಕ್ಕೂ ಹೆಚ್ಚು ಹಳ್ಳಿಗಳ 20,000 ಜನರು ಪಟ್ಟಣಗಳ ಸಂಪರ್ಕದಿಂದ” ವಂಚಿತರಾದರು.ಅಲ್ಲಿನ ದ್ವೀಪದವರಿಗೆ ಉದ್ಯೋಗ, ವ್ಯವಹಾರ ನಿಮಿತ್ತ ಹೊರ ಪ್ರಪಂಚದ ಸಂಪರ್ಕ ಕಷ್ಟ ಆಗ್ತಿತ್ತು.
ಆಗ ಮರದಹುಟ್ಟು,ಬುಟ್ಟಿದೋಣಿ,ನಾಡದೋಣಿಗಳೇ ದ್ವೀಪದ ಜನರಿಗೆ ಮತ್ತು ಸಾಗರ ಪಟ್ಟಣಕ್ಕೆ ಸಂಪರ್ಕಕೊಂಡಿಯಾಗಿದ್ದವು. ಎರಡು ದೋಣಿಗಳನ್ನು ಸೇರಿಸಿ ಮಾಡಿ ಅದಕ್ಕೆ “ಜಂಗಲ್” ಎನ್ನುತಿದ್ದರು.ಎತ್ತಿನಬಂಡಿ, ಅಡಿಕೆ, ಕಾಳುಮೆಣಸು ಎಲ್ಲವನ್ನೂ ಜಂಗಲ್ ನಲ್ಲಿ ಸಾಗಿಸಬೇಕಿತ್ತು.ಮಳೆಗಾಲದಲ್ಲಿ,ಗಾಳಿ ಜಾಸ್ತಿಯಾಗಿದ್ದಾಗ ತಿಂಗಳುಗಟ್ಟಲೇ ದೋಣಿಗಳ ಓಡಾಟ ನಿಲ್ಲುತಿತ್ತು.ಒಂದೊಮ್ಮೆ ಮದುವೆ ದಿಬ್ಬಣ ಹೊತ್ತು ಸಾಗುತ್ತಿದ್ದ ದೋಣಿಯು ಕರೂರು ಬಳಿ ಮುಗುಚಿ ವಧುವರರ ಸಮೇತ 22 ಜನರು ನೀರುಪಾಲು ಆಗಿದ್ದರು.ಇದೆಲ್ಲಾರಿಂದ ಸ್ಥಳೀಯರಿಗೆ ಬದುಕು ತುಂಬಾ ಅಸಹನೀಯವಾಗಿಸುತಿತ್ತು.ಅಲ್ಲಿನ ದ್ವೀಪದವರಿಗೆ ಉದ್ಯೋಗ, ವ್ಯವಹಾರ ನಿಮಿತ್ತ ಹೊರ ಪ್ರಪಂಚದ ಸಂಪರ್ಕ ಹೆಚ್ಚಿತ್ತು.
ಈ ದುರಂತದ ನಂತರ ಸಮಸ್ಯೆಗಳ ಗಂಭೀರತೆ ಅರಿತ ಸರ್ಕಾರ ದ್ವೀಪದ ಜನರ ಓಡಾಟಕ್ಕೆ 1969ರಲ್ಲಿ ಲಾಂಚ್ ಸೇವೆಯನ್ನು ಆರಂಭಿಸಿತು.ಆಗ ಅಕ್ಕಿ-ಬೇಳೆ,ರೋಗ-ರುಜಿನ ಕೃಷಿ ಕಾರ್ಯ,ಹೆರಿಗೆ-ಬಾಣಂತನ, ಶಾಲೆ-ಕಾಲೇಜು ಎಲ್ಲದಕ್ಕೂ ಲಾಂಚ್‌ನ ಕಾಯಲೇಬೇಕಿತ್ತು.

ಯಾಕೆಂದರೆ ಲಾಂಚ್‌ಗಳು ಸಂಜೆ 6 ಗಂಟೆಯ ನಂತರ ಸಾಗರಕ್ಕೆ ಹೋಗಲು ಆಗುತ್ತಿರಲಿಲ್ಲ. ಅವು ಸಂಚಾರ ನಿಲ್ಲಿಸುತ್ತಿದ್ದಂತೆಯೇ ದ್ವೀಪದ ಜನರ ಬದುಕು ಸ್ತಬ್ಧಗೊಳ್ಳುತ್ತಿತ್ತು.ಲಾಂಚ್ ಸಂಜೆ 6 ಗಂಟೆ ತನಕ ಎಲ್ಲರಿಗೂ ಅನುಕೂಲವಾಗಿಯೇ ಇರುತಿತ್ತು.
ಆದ್ರೆ 6 ಗಂಟೆಯ ಮೇಲೆ ಮತ್ತೆ ಅದೇ ಗೋಳಾಟ.ಹೆರಿಗೆ ನೋವು ಬಂದರೆ, ಯಾರಾದರೂ ಅಚಾನಕ್ಕಾಗಿ ಅನಾರೋಗ್ಯಕ್ಕೆ ತುತ್ತಾದರೆ,ಬೆಳಗಾಗುವವರೆಗೂ ಕಾಯಲೇಬೇಕಿತ್ತು.ತೀವ್ರ ಕಾಯಿಲೆಯವರಾದರೆ ಸತ್ತರು ಎಂದೇ ಲೆಕ್ಕ.
ಶ್ರೀಸಿಗಂದೂರು ಕ್ಷೇತ್ರವು ಹಿನ್ನೀರಿನಾಚೆ ಇದೆ.20 ವರ್ಷಗಳಿಂದ ಈಚೆಗೆ ಪ್ರವರ್ಧಮಾನಕ್ಕೆ ಬಂದು ರಾಜ್ಯದ ಪ್ರಮುಖ ಯಾತ್ರಾಸ್ಥಳವಾಯಿತು. ನಾಡಿನೆಲ್ಲೆಡೆಯಿಂದ ದೇವಿ ದರ್ಶನಕ್ಕೆ ನಿತ್ಯಸಾವಿರಾರು ಜನರು ಬರುತ್ತಾರೆ. ಅಲ್ಲಿಯವರೆಗೂ ಸುಲಭವಾಗಿದ್ದ ಲಾಂಚ್ ಓಡಾಟ ಸ್ಥಳೀಯರು-ಹೊರಗಿನವರ ನಡುವಿನ ಪೈಪೋಟಿಯಲ್ಲಿ ಸಂಘರ್ಷ ಶುರುವಾಯಿತು.

2004ರಲ್ಲಿ ಒಂದೇ ಲಾಂಚ್ ಇತ್ತು. ಹೊಳೆಬಾಗಿಲಿನಿಂದ ಗಜಾನನ ಬಸ್‌ನ ಕೊನೆಯ ಟ್ರಿಪ್.ಲಾಂಚ್ ಹತ್ತಲು ಪ್ರವಾಸಿಗರು ಸಾಲಿನಲ್ಲಿ ನಿಲ್ಲಬೇಕಿತ್ತು. ಬ್ಯಾಕೋಡಿನ ಯುವಕನಿಗೆ ಹಾವು ಕಚ್ಚಿತ್ತು. ಗುಮ್ಮನಬೈಲ್‌ನ ಹೆಣ್ಣುಮಗಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.ಆಗ ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು ಇಬ್ಬರನ್ನೂ ಒಂದೇ ವಾಹನದಲ್ಲಿ ಕೂರಿಸಿ ಲಾಂಚ್ ಹತ್ತಿಸಲು ಮುಂದಾದರು.ಆಗ ಸಾಲಿನಲ್ಲಿ ನಿಂತಿದ್ದ ಯಾತ್ರಿಕರು ಜಗಳ ತೆಗೆದರು. ಕೊನೆಗೆ ಪೊಲೀಸರು ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು.ಆದ್ರೆ ಒಂದೂವರೆ ಗಂಟೆ ಅಲ್ಲಿಯೇ ವೇಸ್ಟ್ ಆಗಿತ್ತು.ಆ ದಿನವಂತೂ ಸ್ಥಳೀಯರು ತಮ್ಮೂರಲ್ಲೇ ಪರಕೀಯರಾಗಿ ಹೊರಗಿನಿಂದ ಬಂದವರಿಂದ ದಬಾವಣೆಗೆ ಒಳಗಾಗಿದ್ದರು.ಈ ಘಟನೆ ಈ ಭಾಗದಲ್ಲಿ ಸೇತುವೆಯ ಕೂಗಿಗೆ ಹೆಚ್ಚು ಕಾರಣ ಆಯ್ತುಂತೆ
ಹೀಗೆ ಹತ್ತಾರು ಘಟನೆಗಳು ಲಾಂಚ್ ಹೊರತಾಗಿ ಹಿನ್ನೀರಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಸೇತುವೆ ವ್ಯವಸ್ಥೆಯ ಯೋಜನೆಗೆ ಇಂಬುಕೊಟ್ಟವು.ಜೊತೆಗೆ ಹಣಕಾಸಿನ ಬೆಂಬಲವೂ ಬೇಕಿತ್ತು.ಪಕ್ಷಾತೀತವಾಗಿ ಒಂದು ಹೋರಾಟ ವೇದಿಕೆಯನ್ನು ಪ್ರಾರಂಭ ಮಾಡಿದರು.
ಶ್ರೀ ಕಾಗೋಡು ತಿಮ್ಮಪ್ಪ, ಶ್ರೀ ದೇವೇಗೌಡ, ಶ್ರೀ ಯಡಿಯೂರಪ್ಪ ನಾಯಕರುಗಳು ಕೇಂದ್ರ ಸರ್ಕಾರಕ್ಕೆ ಸೇತುವೆ ನಿರ್ಮಾಣಕ್ಕೆ ಒತ್ತಡ ಹಾಕಿ ತುಂಬಾ ಪ್ರಯತ್ನ ಮಾಡಿದರು.ಆದ್ರೆ ಆಗಿದ್ದ ಕೇಂದ್ರ ಸರ್ಕಾರವು ಎಲ್ಲಾ ಮನವಿಗಳನ್ನು ಕಸದಬುಟ್ಟಿಗೆ ಹಾಕಿತು.
ಕೇಂದ್ರದಲ್ಲಿ ಮೋದಿಜೀ ಸರ್ಕಾರ ಇರೋದ್ರಿಂದ ಯಡಿಯೂರಪ್ಪರು ಮುಖ್ಯಮಂತ್ರಿಯಾಗಿದ್ದಾಗ ಸೇತುವೆಯ ವಿಷಯವನ್ನು ಬಜೆಟ್‌ನಲ್ಲಿ ಸೇರ್ಪಡೆಗೊಳಿಸಿ 100 ಕೋಟಿ ಮೀಸಲಿಟ್ಟಿದ್ದರು.ಮತ್ತು ಯಡಿಯೂರಪ್ಪರು ಕೇಂದ್ರ ಸಚಿವರು ನಿತಿನ್ ಗಡ್ಕರಿಯವರಿಗೆ ಇಲ್ಲಿನ ಸಂಗತಿಗಳ ಮನದಟ್ಟು ಮಾಡಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಕೆ ಮಾಡಿದರು.ಮತ್ತೆ ಅವರ ಈ ಪ್ರಯತ್ನದಿಂದ ಆಗ ಜಿಲ್ಲಾ ಮುಖ್ಯರಸ್ತೆ ಆಗಿದ್ದ ಸಾಗರ – ಮರಕುಟಿಕ ರಸ್ತೆಯು ರಾಷ್ಟ್ರೀಯ ಹೆದ್ದಾರಿ 369E ಆಗಿ ಮೇಲ್ದರ್ಜೆಗೇರಿತು.ಅಗತ್ಯ ಮಾನದಂಡಗಳೇನೂ ಇಲ್ಲದ ರಸ್ತೆಯೊಂದು ಏಕಾಏಕಿ ಇಷ್ಟು ದೊಡ್ಡ ಸ್ಥಾನಮಾನ ಪಡೆದದ್ದು ದೇಶದ ಇತಿಹಾಸದಲ್ಲಿಯೇ ವಿರಳಾತಿ ವಿರಳ.
ಅಷ್ಟೇ ಅಲ್ಲ ಹಿನ್ನೀರಲ್ಲಿ ಸೇತುವೆ ನಿರ್ಮಾಣದ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ದ್ವೀಪದಲ್ಲಿ ಇರುವ ಕೇವಲ 20,000 ಜನರಿಗೆ ಇಂತಹ ಯೋಜನೆ ಬೇಕೇ? ಇದರಿಂದ ರಾಜ್ಯಕ್ಕೆ ಏನು ಲಾಭ ಇದೆ? ಆದಾಯ ರೂಪದಲ್ಲಿ ಹಾಕಿದ ಬಂಡವಾಳ ವಾಪಸ್ ಬರಲಿದೆಯೇ? ಎಂಬ ಪ್ರಶ್ನೆಗಳು ಅಧಿಕಾರಶಾಹಿಗಳಿಂದ ಎದುರಾಗಿದ್ದವು.ಅರಣ್ಯವಲಯ,ವನ್ಯಜೀವಿ ವಲಯ,ಪರಿಸರ,ಸೂಕ್ಷ್ಮ ಪ್ರದೇಶದ ಅಡಚಣೆಗಳ ನಿವಾರಣೆಯಾಗಬೇಕಿತ್ತು.

ಯಡಿಯೂರಪ್ಪರು “ಕರೂರು-ಬಾರಂಗಿ ಹೋಬಳಿಯಲ್ಲಿ ಹೆಚ್ಚಿನವರು ಶರಾವತಿ ಯೋಜನೆ ಸಂತ್ರಸ್ತರು.ಅವರ ತ್ಯಾಗಕ್ಕೆ ಬೆಲೆ ಕೊಟ್ಟು, ಸಾಮಾಜಿಕ ನ್ಯಾಯಕ್ಕೆ ಮನ್ನಣೆ ಕೊಡಬೇಕೇ ಹೊರತು ಅಲ್ಲಿಂದ ಲಾಭ ನಿರೀಕ್ಷೆ ಬೇಡ” ಎಂದು ಅಧಿಕಾರಶಾಹಿಗೆ ಕಿವಿಮಾತು ಹೇಳಿದರು.
ಯಡಿಯೂರಪ್ಪರ ಪ್ರಯತ್ನದಿಂದ ಮತ್ತು ಮೋದಿಜೀಯವರ ಕೇಂದ್ರ ಸಚಿವರು ನಿತಿನ್ ಗಡ್ಕರಿಯವ ಕೃಪಾಕಟಾಕ್ಷದಿಂದ ತೂಗುಸೇತುವೆ ದ್ವೀಪದ ಗ್ರಾಮಗಳಿಗೆ ಸಂಪರ್ಕ ಬೆಸೆಯುವ ಕೊಂಡಿಯಾಗಿದೆ.ಇಂಥ ದಿನಕ್ಕಾಗಿ ದ್ವೀಪವಾಸಿಗಳು ಹಲವು ದಶಕಗಳಿಂದ ಆಸೆಗಣ್ಣಿನಿಂದ ಕಾಯ್ದು ಕುಳಿತಿದ್ದರು.

40 ಕಿಮೀ ದೂರದಲ್ಲಿರುವ ಸಾಗರವೇ ಅಡಿಕೆಗೆ ಮಾರುಕಟ್ಟೆ.ಊರ ಮಕ್ಕಳಶಿಕ್ಷಣಕ್ಕೂ ಅಲ್ಲಿಗೇ ಹೋಗಬೇಕಿತ್ತು. 40 ಕಿಮೀ ದೂರದ ಆ ಊರಿಗೆ ಕಾರ್ಗಲ್-ಕೋಗಾರ್ ಮೂಲಕ 110 ಕಿಮೀ ಸುತ್ತಿಬಳಸಿ ಹೋಗಬೇಕಿತ್ತು. ಸೇತುವೆ ಆಗಿರೋದ್ರಿಂದ ಅವರಿಗೀಗ ತುಂಬಾ ಅನುಕೂಲವಾಗಿದೆ. ಬೇಕಾದ ವಸ್ತುಗಳನ್ನು ಅವರೇ ತಂದುಕೊಳ್ಳಬಹುದು.ಇಲ್ಲಿತನಕ ಲಾಂಚ್‌ನ ಸರಿಯಾದ ಸಮಯಕ್ಕೆ ಅವರು ಹೋಗಬೇಕಿತ್ತು.
“ಟೈಲರಿಂಗ್ ವೃತ್ತಿ ನನ್ನದು ಎಂಬ ವ್ಯಕ್ತಿ ಹಿಂದೆ ವಿದ್ಯುತ್ ಸಂಪರ್ಕವಿರಲಿಲ್ಲ.ಆ ದಿನಗಳಲ್ಲಿ ದೀಪದ ಬೆಳಕಲ್ಲಿ ಬಟ್ಟೆ ಹೊಲಿದಿದ್ದರಂತೆ “ಮೋದಿಜಿಯವರು ಕರೆಂಟ್ ಭಾಗ್ಯ ಕೊಟ್ಟ ಮೇಲೆ ದ್ವೀಪಕ್ಕೆ ಕರೆಂಟ್ ಬಂದಾಗ ನಾನು ಮೊದಲ ಬಾರಿಗೆ ಬೆಳಕು ಕಂಡು ಖುಷಿಪಟ್ಟಿದ್ದರಂತೆ ಈಗ ಸೇತುವೆ ಆಗಿರುವುದಕ್ಕೂಇನ್ನಷ್ಟು ದುಪ್ಪಟ್ಟು ಖುಷಿಯಾಗಿದೆ” ಎಂದು ತುಮರಿಯ ಎಚ್.ವಿ.ಶಾರದಮ್ಮ ಸಂತಸಪಟ್ಟರಂತೆ ಅಂತೂ 8 ದಶಕಗಳ ಬಂಧನ,ಯಾತನೆ ಕೊನೆ ಆಯ್ತು.
ಶರಾವತಿ ಹಿನ್ನೀರು ಭರ್ತಿಯಾದಾಗ 150 ಅಡಿಯಷ್ಟು ಆಳ ನೀರು ಸಂಗ್ರಹವಾಗುತ್ತದೆ. ಹೀಗಾಗಿ “ಸೇತುವೆಯನ್ನು ಅಂತರರಾಷ್ಟ್ರೀಯ ಗುಣಮಟ್ಟದ ಉತ್ಕೃಷ್ಟ ತಾಂತ್ರಿಕತೆ ಬಳಸಿ” ವಿನ್ಯಾಸಗೊಳಿಸಲಾಗಿದೆ. ಪ್ರವಾಹ,ಗಾಳಿಯ ಒತ್ತಡವನ್ನು ನಿಭಾಯಿಸುವ ಜೊತೆಗೆ 100 ಟನ್ ತಾಳಿಕೊಳ್ಳುವ ಸಾಮರ್ಥ್ಯವನ್ನು ಸೇತುವೆ ಹೊಂದಿದೆ.
56 ವರ್ಷಗಳು ಸಂಪರ್ಕ ಸೇತುವಾಗಿದ್ದ ಲಾಂಚ್‌ಗಳು ಇಲ್ಲಿನ ಜನರಲ್ಲಿ ಶಾಶ್ವತವಾಗಿ ಉಳಿದಿದೆ. ಸೇತುವೆ ಸಂಚಾರಕ್ಕೆ ಆರಂಭವಾದರೂ ಲಾಂಚ್‌ಗಳ ಓಡಾಟ ನಿಲ್ಲಿಸದೇ ಅವುಗಳನ್ನು ಹಿನ್ನೀರಿನಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಳಸಿಕೊಳ್ಳಲು ಜಿಲ್ಲಾಡಳಿತ ಯೋಜನೆಯನ್ನು ಸಿದ್ಧಪಡಿಸಿದೆ.

ನವೀನ ಹೆಚ್ ಎ
ಹನುಮನಹಳ್ಳಿ ಅಂಕಣಕಾರ ಲೇಖಕರು
ಕೆ ಆರ್ ನಗರ